ರೇಣುಕಾಸ್ವಾಮಿ ಶವದ ಮುಂದೆ ದರ್ಶನ್ ತೂಗುದೀಪ, ಆರೋಪಿಗಳು: ಫೋಟೊ ರಿಟ್ರೀವ್, ಪೊಲೀಸರಿಗೆ ಸಿಕ್ತು ಪ್ರಬಲ ಸಾಕ್ಷ್ಯ

|

Updated on: Nov 22, 2024 | 12:17 PM

Darshan Thoogudeepa: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ತೂಗುದೀಪ ಹಾಗೂ ಇತರ ಕೆಲವು ಆರೋಪಿಗಳ ವಿರುದ್ಧ ಹೊಸ ಸಾಕ್ಷಿ ಲಭ್ಯವಾಗಿದೆ. ಡಿಲೀಟ್ ಮಾಡಲಾಗಿದ್ದ ಎರಡು ಚಿತ್ರಗಳನ್ನು ರಿಟ್ರೀವ್ ಮಾಡಲಾಗಿದ್ದು ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ರೇಣುಕಾಸ್ವಾಮಿ ಶವದ ಮುಂದೆ ದರ್ಶನ್ ತೂಗುದೀಪ, ಆರೋಪಿಗಳು: ಫೋಟೊ ರಿಟ್ರೀವ್, ಪೊಲೀಸರಿಗೆ ಸಿಕ್ತು ಪ್ರಬಲ ಸಾಕ್ಷ್ಯ
(File Photo) ದರ್ಶನ್ ತೂಗುದೀಪ ಮತ್ತು ದಿ. ರೇಣುಕಾಸ್ವಾಮಿ
Follow us on

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ತೂಗುದೀಪ, ಅನಾರೋಗ್ಯ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಗಿದ್ದಾರೆ. ಜೈಲಿನಿಂದ ತಾತ್ಕಾಲಿಕವಾಗಿ ಬಿಡುಗಡೆ ಪಡೆದಿರುವ ಖುಷಿ ಹಾರಿಹೋಗುವಂಥಹಾ ಸುದ್ದಿ ಇದೀಗ ಬಂದಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ತೂಗುದೀಪ ವಿರುದ್ಧ ಮತ್ತೊಂದು ಪ್ರಬಲ ಸಾಕ್ಷಿ ಬೆಳಕಿಗೆ ಬಂದಿದೆ. ರೇಣುಕಾ ಸ್ವಾಮಿ ಶವದ ಮುಂದೆ ದರ್ಶನ್ ತೂಗುದೀಪ ನಿಂತಿರುವ ಚಿತ್ರ ಇದೀಗ ಪೊಲೀಸರಿಗೆ ಲಭ್ಯವಾಗಿದೆ. ಅದನ್ನು ನ್ಯಾಯಾಲಯದ ಗಮನಕ್ಕೂ ತರಲಾಗಿದೆ.

ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾ ಸ್ವಾಮಿ ನಿಧನ ಹೊಂದಿದಾಗ ದರ್ಶನ್ ತೂಗುದೀಪ ಆ ಸ್ಥಳದಲ್ಲಿ ಇರಲಿಲ್ಲ ಎಂಬ ವಾದ ಈ ಹಿಂದೆ ಕೇಳಿ ಬಂದಿತ್ತು. ದರ್ಶನ್ ತೂಗುದೀಪ, ರೇಣುಕಾ ಸ್ವಾಮಿಗೆ ಕೋಪದಲ್ಲಿ ಹೊಡೆದು ಅಲ್ಲಿಂದ ಹೊರಟು ಹೋದರು ಎನ್ನಲಾಗಿತ್ತು. ಆದರೆ ಈಗ ಪೊಲೀಸರಿಗೆ ಲಭ್ಯವಾಗಿರುವ ಫೋಟೊಗಳು ಹೇಳುತ್ತಿರುವುದೇ ಬೇರೆ. ರೇಣುಕಾ ಸ್ವಾಮಿ ಶವದ ಮುಂದೆ ದರ್ಶನ್ ತೂಗುದೀಪ ಹಾಗೂ ಇತರೆ ಆರೋಪಿಗಳು ನಿಂತಿರುವ ಫೋಟೊಗಳು ಇದಾಗಿದ್ದು, ಪ್ರಕರಣದ ಆರೋಪಿಯೊಬ್ಬರ ಮೊಬೈಲ್​ನಿಂದ ಈ ಫೋಟೊಗಳನ್ನು ರಿಟ್ರೀವ್ ಮಾಡಲಾಗಿದೆ.

ಇದನ್ನೂ ಓದಿ:‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಜಿ. ಪರಮೇಶ್ವರ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ದೊರೆತ ಸಾಕ್ಷ್ಯಗಳನ್ನು ಪರೀಕ್ಷೆಗಾಗಿ ಹೈದರಾಬಾದ್ ಹಾಗೂ ಬೆಂಗಳೂರಿನ ಎಫ್​ಎಸ್​ಎಲ್ ಕೇಂದ್ರಗಳಿಗೆ ಕಳಿಸಿದ್ದರು. ಹೈದರಾಬಾದ್​ನಿಂದ ಕೆಲವು ವರದಿಗಳು ಬರುವುದು ಬಾಕಿ ಇದ್ದವು. ಅವು ಈಗ ಬಂದಿದ್ದು, ಆರೋಪಿ ಪವನ್​ ಅವರ ಮೊಬೈಲ್​ನಿಂದ ಕ್ಲಿಕ್ಕಿಸಲಾದ 2 ಫೋಟೋಗಳನ್ನು ರಿಕವರಿ ಮಾಡಲಾಗಿದೆ. ರೇಣುಕಾ ಸ್ವಾಮಿ ಶವನದ ಮುಂದೆ ದರ್ಶನ್ ತೂಗುದೀಪ ಹಾಗೂ ಇತರೆ ಆರೋಪಿಗಳು ನಿಂತಿರುವ ಚಿತ್ರವನ್ನು ಪವನ್ ಕ್ಲಿಕ್ಕಿಸಿದ್ದರಂತೆ. ಆ ನಂತರ ಅವನ್ನು ಡಿಲೀಟ್ ಮಾಡಿದ್ದರು. ಆದರೆ ಎಫ್​ಎಸ್​ಎಲ್​ ಕೇಂದ್ರದವರು ತಂತ್ರಜ್ಞಾನ ಬಳಸಿ ಆ ಫೋಟೊಗಳನ್ನು ರಿಟ್ರೀವ್ ಮಾಡಿದ್ದಾರೆ.

ಈಗ ಲಭ್ಯವಾಗಿರುವ ಚಿತ್ರದಲ್ಲಿ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ನೀಲಿ ಬಣ್ಣದ ಟೀ ಶರ್ಟ್ ಧರಿಸಿ ದರ್ಶನ್ ತೂಗುದೀಪ ನಿಂತಿರುವ ಚಿತ್ರವಿದೆ. ಚಿತ್ರದಲ್ಲಿ ಪ್ರಕರಣ ಇತರೆ ಕೆಲವು ಆರೋಪಿಗಳು ಸಹ ಇದ್ದಾರೆ. ಚಿತ್ರದಲ್ಲಿ ರೇಣುಕಾ ಸ್ವಾಮಿಯ ಶವವೂ ಇದೆ. ಈ ಚಿತ್ರವನ್ನು ಪವನ್ ತೆಗೆದಿದ್ದಾರೆ. ಪವನ್ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದ ಪೊಲೀಸರು ಅದನ್ನು ಎಫ್​ಎಸ್​ಎಲ್​ಗೆ ರವಾನಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:20 am, Fri, 22 November 24