ಉಪೇಂದ್ರ, ಸುದೀಪ್​, ದರ್ಶನ್​ – ಟ್ವಿಟರ್​ನಲ್ಲಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಸ್ಯಾಂಡಲ್​ವುಡ್ ಹೀರೋ ಯಾರು? ಇಲ್ಲಿದೆ ಮಾಹಿತಿ

| Updated By: Digi Tech Desk

Updated on: May 28, 2021 | 2:55 PM

Upendra, Sudeep, Darshan: ಇತ್ತೀಚಿನ ದಿನಗಳಲ್ಲಿ ಸೋಶಿಯಲ್​ ಮೀಡಿಯಾಗಳ ಬಳಕೆ ಹೆಚ್ಚುತ್ತಿದೆ. ಫ್ಯಾನ್ಸ್​ ಜೊತೆ ನೇರವಾಗಿ ಸಂಪರ್ಕದಲ್ಲಿ ಇರುವ ಸಲುವಾಗಿ ಬಹುತೇಕ ಸ್ಟಾರ್​ ನಟರು ಆನ್​ಲೈನ್​ನಲ್ಲಿ ಸಕ್ರಿಯರಾಗಿರುತ್ತಾರೆ.

ಉಪೇಂದ್ರ, ಸುದೀಪ್​, ದರ್ಶನ್​ - ಟ್ವಿಟರ್​ನಲ್ಲಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಸ್ಯಾಂಡಲ್​ವುಡ್ ಹೀರೋ ಯಾರು? ಇಲ್ಲಿದೆ ಮಾಹಿತಿ
ಸ್ಯಾಂಡಲ್​ವುಡ್​ ಸಿನಿಮಾ ನಟರು
Follow us on

ಮೊದಲೆಲ್ಲ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಹೀರೋ ಜೊತೆ ಮಾತನಾಡಬೇಕು ಎಂದರೆ ಕಷ್ಟದ ಕೆಲಸ ಆಗುತ್ತಿತ್ತು. ಆದರೆ ಈಗ ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ಮಾತುಗಳನ್ನು ಸ್ಟಾರ್​ಗಳಿಗೆ ತಲುಪಿಸುವ ದಾರಿಯನ್ನು ಫ್ಯಾನ್ಸ್​ ಕಂಡುಕೊಂಡಿದ್ದಾರೆ. ನಟ-ನಟಿಯರು ಕೂಡ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಸೋಶಿಯಲ್​ ಮೀಡಿಯಾವನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ. ಕನ್ನಡದ ಕೆಲವು ಸ್ಟಾರ್​ ಕಲಾವಿದರು ಟ್ವಿಟರ್​ನಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ. ಇತ್ತೀಚೆಗೆ ರಿಯಲ್​ ಸ್ಟಾರ್​ ಉಪೇಂದ್ರ ಅವರಿಗೆ ಟ್ವಿಟರ್​ನಲ್ಲಿ 1 ಮಿಲಿಯನ್​ (10 ಲಕ್ಷ) ಫಾಲೋವರ್ಸ್​ ಆಗಿದ್ದಾರೆ. ಲಾಕ್​ಡೌನ್​ ಸಂದರ್ಭದಲ್ಲಿ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವ ಅವರು, ತಮ್ಮ ಕಾರ್ಯಗಳ ಬಗ್ಗೆ ಟ್ವಿಟರ್​ ಮೂಲಕ ಅಪ್​ಡೇಟ್​ ನೀಡುತ್ತಾ ಇರುತ್ತಾರೆ. ಈಗ ಅವರಿಗೆ ಫಾಲೋವರ್ಸ್​ ಸಂಖ್ಯೆ ಹೆಚ್ಚಿದೆ. ಹಾಗಾದರೆ, ಬೇರೆ ನಟರಿಗೆ ಎಷ್ಟು ಜನ ಹಿಂಬಾಲಕರಿದ್ದಾರೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಕಿಚ್ಚ ಸುದೀಪ್​ ಅವರು ಟ್ವಿಟರ್​ನಲ್ಲಿ ಹೆಚ್ಚು ಆಕ್ಟೀವ್​ ಆಗಿರುತ್ತಾರೆ. ಅಭಿಮಾನಿಗಳ ಟ್ವೀಟ್​ಗಳಿಗೆ ಅವರು ಆಗಾಗ ಪ್ರತಿಕ್ರಿಯಿಸುತ್ತಾರೆ. ಅವರಿಗೆ ಈಗ ಟ್ವೀಟರ್​ನಲ್ಲಿ 25 ಲಕ್ಷ (2.5 ಮಿಲಿಯನ್​) ಫಾಲೋವರ್ಸ್​ ಇದ್ದಾರೆ. ಸ್ಯಾಂಡಲ್​ವುಡ್​ ಹೀರೋಗಳ ಪೈಕಿ ಅವರೇ ನಂಬರ್​ ಒನ್​. ನಟ ದರ್ಶನ್​ ಅವರನ್ನು 8.80 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

ಪ್ರತಿ ದಿನ ಹತ್ತಾರು ಟ್ವೀಟ್​ಗಳನ್ನು ಮಾಡುತ್ತಾರೆ ನಟ ಜಗ್ಗೇಶ್​. ಅವರು 6.88 ಲಕ್ಷ ಫಾಲೋವರ್ಸ್​ ಹೊಂದಿದ್ದಾರೆ. ಕೆಜಿಎಫ್​ ಸಿನಿಮಾ ಮೂಲಕ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಬೆಳೆದಿರುವ ನಟ ಯಶ್​ ಅವರನ್ನು 7.17 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ. ಶ್ರೀಮುರಳಿ ಅವರಿಗೆ 4.19 ಲಕ್ಷ ಫಾಲೋವರ್ಸ್​ ಇದ್ದಾರೆ. ಧ್ರುವ ಸರ್ಜಾ ಅವರನ್ನು 3.17 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅವರು 2.77 ಲಕ್ಷ ಫಾಲೋವರ್ಸ್​ ಹೊಂದಿದ್ದಾರೆ. ಗೋಲ್ಡನ್​ ಸ್ಟಾರ್​ ಗಣೇಶ್​ ಅವರಿಗೆ 2.40 ಲಕ್ಷ ಫಾಲೋವರ್ಸ್​ ಇದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅನೇಕ ಸ್ಫೂರ್ತಿದಾಯಕ ಮಾತುಗಳನ್ನು ಹಂಚಿಕೊಳ್ಳುವ ನಟ ರಮೇಶ್​ ಅರವಿಂದ್​ ಅವರಿಗೆ ಟ್ವಿಟರ್​ನಲ್ಲಿ 1.93 ಲಕ್ಷ ಜನ ಫಾಲೋವರ್ಸ್​ ಇದ್ದಾರೆ.  ಶಿವರಾಜ್​ಕುಮಾರ್​ ಅವರನ್ನು ಟ್ವಿಟರ್​ನಲ್ಲಿ 73 ಸಾವಿರ ಜನರು ಫಾಲೋ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್​ ಮೀಡಿಯಾಗಳ ಬಳಕೆ ಹೆಚ್ಚುತ್ತಿದೆ.

ಫ್ಯಾನ್ಸ್​ ಜೊತೆ ನೇರವಾಗಿ ಸಂಪರ್ಕದಲ್ಲಿ ಇರುವ ಸಲುವಾಗಿ ಬಹುತೇಕ ಸ್ಟಾರ್​ ನಟರು ಆನ್​ಲೈನ್​ನಲ್ಲಿ ಸಕ್ರಿಯರಾಗಿರುತ್ತಾರೆ.

ಇದನ್ನೂ ಓದಿ:

ಕಡುಕಷ್ಟ ಕಾಲದಲ್ಲಿ ಹಿರಿಯ ಕಲಾವಿದರ ಕೈ ಹಿಡಿದ ಉಪೇಂದ್ರ; ಮನಸಾರೆ ಹರಸಿದ ಜೀವಗಳು

Kichcha Sudeep: ಬಿಗ್​ ಬಾಸ್​ ಸ್ಪರ್ಧಿ ಸೋನು ಪಾಟೀಲ್​ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂ. ನೀಡಿದ ಕಿಚ್ಚ ಸುದೀಪ್​

 

(Sudeep Darshan Yash Jaggesh Upendra and other sandalwood stars followers on Twitter creates record)

Published On - 1:09 pm, Fri, 28 May 21