‘ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ’; ಸುದೀಪ್ ಬಿಜೆಪಿ ಸೇರ್ತಾರೆ ಎನ್ನುವ ವಿಚಾರದಲ್ಲಿ ಪ್ರಕಾಶ್ ರಾಜ್ ಪ್ರತಿಕ್ರಿಯೆ

|

Updated on: Apr 05, 2023 | 11:16 AM

ಕೆಲ ಇಂಗ್ಲಿಷ್ ಮಾಧ್ಯಮಗಳಲ್ಲಿ ‘ಸುದೀಪ್​ ಬಿಜೆಪಿ ಸೇರುತ್ತಾರೆ’ ಎಂದು ವರದಿ ಆಗಿತ್ತು. ಇದನ್ನು ಪ್ರಕಾಶ್ ರಾಜ್ ರೀ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. 

‘ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ’; ಸುದೀಪ್ ಬಿಜೆಪಿ ಸೇರ್ತಾರೆ ಎನ್ನುವ ವಿಚಾರದಲ್ಲಿ ಪ್ರಕಾಶ್ ರಾಜ್ ಪ್ರತಿಕ್ರಿಯೆ
ಪ್ರಕಾಶ್ ರಾಜ್​-ಸುದೀಪ್
Follow us on

ಪ್ರಕಾಶ್ ರಾಜ್ ಅವರು ಸದಾ ಒಂದಿಲ್ಲೊಂದು ವಿಚಾರಕ್ಕೆ ಚರ್ಚೆ ಆಗುತ್ತಾ ಇರುತ್ತಾರೆ. ಅವರು ತಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಬಿಜೆಪಿಯನ್ನು, ಬಿಜೆಪಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಸದಾ ಟೀಕೆ ಮಾಡುತ್ತಾ ಇರುತ್ತಾರೆ. ಈಗ ಅವರು ಸುದೀಪ್ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಅವರು ಬಿಜೆಪಿ ಪರ ಪ್ರಚಾರ ಮಾಡುತ್ತಾರೆ, ಬಿಜೆಪಿ ಸೇರುತ್ತಾರೆ ಎಂಬಿತ್ಯಾದಿ ಸುದ್ದಿ ಹರಿದಾಡುತ್ತಿದೆ. ಮಧ್ಯಾಹ್ನದ ವೇಳೆಗೆ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ. ಸುದೀಪ್ (Sudeep) ಬಿಜೆಪಿ ಸೇರುತ್ತಾರೆ ಎನ್ನುವ ವಿಚಾರದಲ್ಲಿ ಪ್ರಕಾಶ್ ರಾಜ್ (Prakash Raj) ಪ್ರತಿಕ್ರಿಯೆ ನೀಡಿದ್ದಾರೆ. ‘ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ’ ಎಂದಿದ್ದಾರೆ ಅವರು.

ಇಂದು (ಏಪ್ರಿಲ್ 5) ಮಧ್ಯಾಹ್ನ ಸಿಎಂ ಬಸವರಾಜ ಬೊಮ್ಮಾಯಿ ಅವರು ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಸುದೀಪ್ ಕೂಡ ಭಾಗಿ ಆಗುವ ಸಾಧ್ಯತೆ ಇದೆ. ಈ ವೇಳೆ ಅವರು ತಮ್ಮ ರಾಜಕೀಯ ನಿಲುವು ಏನು ಎಂಬುದನ್ನು ತಿಳಿಸಲಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಬಿಜೆಪಿ ಪರ ಸುದೀಪ್ ಪ್ರಚಾರ ಮಾಡುತ್ತಿದ್ದಾರಂತೆ. ಕೆಲ ಇಂಗ್ಲಿಷ್ ಮಾಧ್ಯಮಗಳಲ್ಲಿ ‘ಸುದೀಪ್​ ಬಿಜೆಪಿ ಸೇರುತ್ತಾರೆ’ ಎಂದು ವರದಿ ಆಗಿತ್ತು. ಇದನ್ನು ಪ್ರಕಾಶ್ ರಾಜ್ ರೀ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ಕರ್ನಾಟಕದಲ್ಲಿ ಹತಾಶರಾದ, ಸೋತ ಬಿಜೆಪಿಯಿಂದ ಹರಡಿದ ಸುಳ್ಳು ಸುದ್ದಿ ಇದು ಎಂದು ನಾನು ಬಲವಾಗಿ ನಂಬುತ್ತೇನೆ. ಕಿಚ್ಚ ಸುದೀಪ್ ಪ್ರಜ್ಞಾವಂತ. ಕರ್ನಾಟಕದಲ್ಲಿ ಸೋಲುವ ಭಯದಲ್ಲಿ, ಭ್ರಷ್ಟ ಬಿಜೆಪಿ ಹರಡುತ್ತಿರುವ ಸುಳ್ಳು ಸುದ್ದಿ ಇದು. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ’ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Prakash Raj: ‘ಬೇಷರಂ ರಂಗ್​’ ವಿವಾದ; ‘ಇದನ್ನೆಲ್ಲ ಎಲ್ಲಿಯವರೆಗೆ ಸಹಿಸಬೇಕು’ ಅಂತ ಪ್ರಶ್ನೆ ಮಾಡಿದ ಪ್ರಕಾಶ್​ ರಾಜ್​

ಇದಕ್ಕೆ ಅಭಿಮಾನಿಗಳು ಪ್ರಕಾಶ್ ರಾಜ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ‘ಮಾರಿಕೊಳ್ಳುವವರಲ್ಲ.. ಈ ಥರ ಹೇಳಬೇಡಿ. ಒಂದು ವೇಳೆ ಅವರು ಬಿಜೆಪಿ ಸೇರಿಕೊಂಡರೂ ಅದು ಕೆಲವರಿಗೆ ಇಷ್ಟ ಆಗಿಲ್ಲ ಅಂದ್ರೆ ಅದು ಅವರ ವೈಯಕ್ತಿಕ ನಿರ್ಧಾರ ಆಗಿರುತ್ತದೆ. ಅವರನ್ನು ಅವರು ಮಾರಿಕೊಂಡ ಹಾಗೆ ಆಗುವುದಿಲ್ಲ’ ಎಂದು ಅಭಿಮಾನಿಯೋರ್ವ ಕಮೆಂಟ್ ಮಾಡಿದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:14 am, Wed, 5 April 23