‘ಮಾರ್ಕ್’ ಸಿನಿಮಾ ನೋಡಿದವರು ಹೇಳಿದ್ದೇನು? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ

Mark twitter review: ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಇಂದು (ಡಿಸೆಂಬರ್ 25) ಬಿಡುಗಡೆ ಆಗಿದೆ. ಬೆಳ್ಳಂಬೆಳಿಗ್ಗೆ ‘ಮಾರ್ಕ್’ ಸಿನಿಮಾ ವೀಕ್ಷಿಸಿದವರು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ನೋಡಿದ ಹಲವರಿಗೆ ಸಿನಿಮಾ ಇಷ್ಟವಾಗಿದೆ. ‘ಮಾರ್ಕ್’ ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ ನೋಡಿ...

‘ಮಾರ್ಕ್’ ಸಿನಿಮಾ ನೋಡಿದವರು ಹೇಳಿದ್ದೇನು? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ
Mark Movie

Updated on: Dec 25, 2025 | 12:37 PM

ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಇಂದು (ಡಿಸೆಂಬರ್ 25) ಬಿಡುಗಡೆ ಆಗಿದೆ. ಸಿನಿಮಾದ ಶೋಗಳು ಬೆಳಿಗ್ಗೆ 6 ಗಂಟೆಯಿಂದಲೇ ಶುರುವಾಗಿದೆ. ಅಭಿಮಾನಿಗಳು ಬೆಳಿಗ್ಗೆಯಿಂದಲೇ ಚಿತ್ರಮಂದಿರದ ಮುಂದೆ ಸಾಲು ನಿಂತು ಸಿನಿಮಾ ವೀಕ್ಷಿಸಿದ್ದಾರೆ. ಬೆಳ್ಳಂಬೆಳಿಗ್ಗೆ ‘ಮಾರ್ಕ್’ ಸಿನಿಮಾ ವೀಕ್ಷಿಸಿದವರು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ನೋಡಿದ ಹಲವರಿಗೆ ಸಿನಿಮಾ ಇಷ್ಟವಾಗಿದೆ. ‘ಮಾರ್ಕ್’ ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ ನೋಡಿ…

‘ಮಾರ್ಕ್’ ಸಿನಿಮಾ ಮೊದಲ ಭಾಗದಿಂದಲೇ ಅದ್ಭುತವಾಗಿದೆ. ಮೊದಲಾರ್ಧದಲ್ಲಿ ಬಹು ಕಥಾಹಂದರಗಳು ತೆರೆದುಕೊಳ್ಳುತ್ತವೆ ಮತ್ತು ಎರಡನೇ ಭಾಗದಲ್ಲಿ ಪ್ರತಿಯೊಂದನ್ನೂ ಅಚ್ಚುಕಟ್ಟಾಗಿ ತೋರಿಸಲಾಗುತ್ತದೆ. ನಮ್ಮ ಬಾದ್‌ಷಾ ಅಲ್ಟ್ರಾ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಅವರ ಈ ವರೆಗಿನ ಅತ್ಯುತ್ತಮ ಆಕ್ಷನ್ ಸಿನಿಮಾ ಇದೆನಿಸುತ್ತದೆ. ಅಜನೀಶ್ ಅವರ ಹಿನ್ನೆಲೆ ಸಂಗೀತವು ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಎತ್ತಿ ಹಿಡಿದಿದೆ’ ಎಂದಿದ್ದಾರೆ ಆಕಾಶ್ ಆರ್ ಪಾಟೀಲ್.

‘ಮಾರ್ಕ್’ ಸಿನಿಮಾ ಒಂದು ಅದ್ಭುತ ಆಕ್ಷನ್ ಸಿನಿಮಾ ಆಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದೆ. ಆದರೆ ಸುದೀಪ್ ಅವರು ಅದ್ಭುತವಾದ ಪ್ರದರ್ಶನವನ್ನು ಸಿನಿಮಾ ಉದ್ದಕ್ಕೂ ನೀಡಿದ್ದಾರೆ ಎಂದಿರುವುದು ಮಿಸ್ಟರ್ ಬಾಂಡ್ ಹೆಸರಿನ ಟ್ವಿಟ್ಟರ್ ಖಾತೆ ಬಳಕೆದಾರ.

ಅಭಿ ಕಿಚ್ಚ ಎಂಬುವರು ಟ್ವೀಟ್ ಮಾಡಿ, ‘ಕಿಚ್ಚ ಸುದೀಪ್ ಅವರ ಅಭಿಮಾನಿ ಆಗಿ ನನಗೆ ‘ಮಾರ್ಕ್’ ಸಿನಿಮಾ ಅಷ್ಟಾಗಿ ಹಿಡಿಸಲಿಲ್ಲ. ಸಿನಿಮಾ ನಾನು ನಿರೀಕ್ಷಿಸಿದ ಮಟ್ಟಕ್ಕೆ ಇರಲಿಲ್ಲ. ಇನ್ನೂ ಹಲವು ವಿಭಾಗಗಳಲ್ಲಿ ಚೆನ್ನಾಗಿರಬಹುದಿತ್ತು. ಸುದೀಪ್ ಎಂಟ್ರಿ ಸೂಪರ್ ಆಗಿದೆ. ಸಿನಿಮಾದ ಹಿನ್ನೆಲೆ ಸಂಗೀತ ಸಹ ಸೂಪರ್. ಆದರೆ ಕತೆ ಮತ್ತು ಚಿತ್ರಕತೆ ಸಪ್ಪೆಯಾಗಿದೆ’ ಎಂದಿದ್ದಾರೆ.

ಪುನೀತ್ ಗೌಡ ಎಂಬುವರು ಟ್ವೀಟ್ ಮಾಡಿ, ‘ಮಾರ್ಕ್ ಸಿನಿಮಾಕ್ಕೆ ಐದರಲ್ಲಿ ಎರಡು ಅಂಕ ನೀಡಿದ್ದಾರೆ. ಸಿನಿಮಾದ ಬಿಜಿಎಂ ಬಿಟ್ಟು ಬೇರೆ ಏನು ಇಷ್ಟ ಆಗಲಿಲ್ಲ. ತೀರ ಸಾಮಾನ್ಯ ಕತೆ. ಏನೂ ಹೊಸತನ ಇಲ್ಲ. ಕಾರ್ತಿಕೇಯ ಮತ್ತೆ ಹಳೆ ಸೂತ್ರಕ್ಕೆ ಕಟ್ಟು ಬಿದ್ದಿದ್ದಾರೆ. ಚಿತ್ರಕತೆ ಮೇಲೆ ಅವರಿಗೆ ಹಿಡಿತ ತಪ್ಪಿದೆ. ಸುದೀಪ್ ಅವರು ಇನ್ನೂ ಉತ್ತಮ ಕತೆ ಆಯ್ಕೆ ಮಾಡಿಕೊಳ್ಳಬೇಕಿತ್ತು’ ಎಂದಿದ್ದಾರೆ.

 

ಆರು ತಿಂಗಳಲ್ಲಿ ನಿರ್ಮಿಸಿದ ಒಳ್ಳೆಯ ಪ್ರಾಡಕ್ಟ್ ‘ಮಾರ್ಕ್’ ಸಿನಿಮಾ. ಆದರೂ ನಿರ್ದೇಶಕ ವಿಜಯ್, ಸುದೀಪ್ ಅವರಿಗೆ ಒಳ್ಳೆಯ ಎಲಿವೇಷನ್ ದೃಶ್ಯಗಳನ್ನು ಕೊಡುವುದರಲ್ಲಿ ಸೋತಿದ್ದಾರೆ. ಅಜನೀಶ್ ಅವರು ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ ಆದರೆ ಇನ್ನೂ ಒಳ್ಳೆಯ ಹಿನ್ನೆಲೆ ಸಂಗೀತ ಕೊಡಬಹುದಿತ್ತು. ಸುದೀಪ್ ಅವರು ತಮ್ಮ ಅಭಿನಯ, ಆಕ್ಷನ್​​ನಿಂದ ಗಮನ ಸೆಳೆಯುತ್ತಾರೆ. ‘ಮ್ಯಾಕ್ಸ್’ ಸಿನಿಮಾ ಸರಳ ಕತೆ, ಒಳ್ಳೆಯ ಪಾತ್ರಗಳ ಮೂಲಕ ಗಮನ ಸೆಳೆಯಿತು, ಆದರೆ ‘ಮಾರ್ಕ್’ ಅದಕ್ಕೆ ಉಲ್ಟಾ ಆಗಿದೆ ಎಂದಿದ್ದಾರೆ ಪವನ್ ಪ್ರಸಾದ್.

ಎಆರ್ ಎಂಬ ಟ್ವೀಟ್ ಖಾತೆಯಿಂದ ಮಾಡಲಾದ ಟ್ವೀಟ್​ನಲ್ಲಿ, ‘ಮೊದಲಾರ್ಧದ ಇಂಟ್ರೊ ಸಾಂಗ್ ಚೆನ್ನಾಗಿದೆ. ಆದರೆ ಉಳಿದಿದ್ದೆಲ್ಲ ತುಸು ಎಳೆದಂತೆ ಅನಿಸಿತು. ಎರಡನೇ ಅರ್ಧದ ಪ್ರಾರಂಭ ಚೆನ್ನಾಗಿ ಆಯ್ತು. ಆದರೆ ಆ ಬಳಿಕ ಕುತೂಹಲವನ್ನು ಉಳಿಸಿಕೊಳ್ಳುವುದಿಲ್ಲ. ಸುದೀಪ್ ಸಿನಿಮಾ ಉಳಿಸಲು ಪ್ರಯತ್ನ ಪಟ್ಟಿದ್ದಾರಾದರೂ ಅವರಿಂದ ಸಾಧ್ಯವಾಗಿಲ್ಲ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ