‘ಡೆವಿಲ್’ ಬಳಿಕ ರೇಟಿಂಗ್ ಕೊಡದಂತೆ ಕೋರ್ಟ್ನಿಂದ ಆರ್ಡರ್ ತಂದ ‘45’, ‘ಮಾರ್ಕ್’
`ಬುಕ್ ಮೈ ಶೋನಲ್ಲಿ ದ್ವೇಷಪೂರಿತ ವಿಮರ್ಶೆಗಳಿಂದ ಸಿನಿಮಾಗಳ ರೇಟಿಂಗ್ ಕುಸಿಯುವುದನ್ನು ತಡೆಯಲು ಕನ್ನಡ ಚಿತ್ರತಂಡಗಳು ಹೊಸ ತಂತ್ರಕ್ಕೆ ಮೊರೆ ಹೋಗಿವೆ. 'ಡೆವಿಲ್' ಚಿತ್ರದ ನಂತರ ಈಗ 'ಮಾರ್ಕ್' ಮತ್ತು '45' ತಂಡಗಳು ಕೋರ್ಟ್ ಆದೇಶದ ಮೂಲಕ ಬುಕ್ ಮೈ ಶೋ ರೇಟಿಂಗ್ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿವೆ. ಇದರಿಂದ ದೊಡ್ಡ ಬಜೆಟ್ ಸಿನಿಮಾಗಳು ನಕಾರಾತ್ಮಕ ಪ್ರಚಾರದಿಂದ ಪಾರಾಗಲು ಪ್ರಯತ್ನಿಸುತ್ತಿವೆ.

ಬುಕ್ ಮೈ ಶೋ ಮೊದಲಾದ ರೇಟಿಂಗ್ ನೋಡಿ ಜನರು ಸಿನಿಮಾ ವೀಕ್ಷಿಸಲು ತೆರಳೋದು ಸಾಮಾನ್ಯ. ಆದರೆ, ಈಗ ಅದಕ್ಕೆ ಬ್ರೇಕ್ ಬೀಳುತ್ತಿದೆ. ಬುಕ್ ಮೈ ಶೋನಲ್ಲಿ ಬರೋ ರೇಟಿಂಗ್ ಎಂದು ಹೇಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ದ್ವೇಷದ ಕಾರಣಕ್ಕೆ ಅನೇಕರು ಸುಳ್ಳು ರೇಟಿಂಗ್ ಕೊಟ್ಟ ಉದಾಹರಣೆ ಇದೆ. ಇದೇ ಕಾರಣದಿಂದ ಸಿನಿಮಾ ತಂಡದವರು ಈ ವಿಷಯದಲ್ಲಿ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಈಗ ‘45’ (45 Movie) ಹಾಗೂ ‘ಮಾರ್ಕ್’ ಟೀಂ ಇದೇ ತಂತ್ರ ಉಪಯೋಗಿಸಿದೆ.
ಡಿಸೆಂಬರ್ 11ರಂದು ತೆರೆಗೆ ಬಂದ ‘ಡೆವಿಲ್’ ತಂಡದವರು ನೆಗೆಟಿವ್ ವಿಮರ್ಶೆ ಸಿಗೋ ಭಯದಲ್ಲಿ ಕೋರ್ಟ್ನಿಂದ ಆರ್ಡರ್ ತಂದಿದ್ದರು. ಇದನ್ನು ಬುಕ್ ಮೈ ಶೋ ಆ್ಯಪ್ಗೆ ಸಲ್ಲಿಕೆ ಮಾಡಿದ್ದರು. ಇದರ ಅನುಸಾರ ಬುಕ್ ಮೈ ಶೋನವರು ರೇಟಿಂಗ್ ನೀಡುವ ಆಯ್ಕೆಯನ್ನು ನಿಷ್ಕ್ರಿಯ ಗೊಳಿಸಿದ್ದರು. ಈಗ ‘ಮಾರ್ಕ್’ ಹಾಗೂ ‘45’ ಸಿನಿಮಾ ಕೂಡ ಇದೇ ತಂತ್ರ ಉಪಯೋಗಿಸಿದೆ.
‘ಮಾರ್ಕ್’ ಸಿನಿಮಾದಲ್ಲಿ ಸುದೀಪ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ. ಪರಭಾಷಾ ಕಲಾವಿದರೂ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು, ‘45’ ಸಿನಿಮಾದಲ್ಲಿ ಉಪೇಂದ್ರ, ಶಿವರಾಜ್ಕುಮಾರ್, ರಾಜ್ ಬಿ. ಶೆಟ್ಟಿ ನಟಿಸಿದ್ದಾರೆ. ಈ ಎರಡೂ ಸಿನಿಮಾಗಳು ದೊಡ್ಡ ಬಜೆಟ್ನಲ್ಲಿ ರೆಡಿ ಆಗಿವೆ. ಹೀಗಾಗಿ ಎರಡೂ ಚಿತ್ರಕ್ಕೆ ಗಳಿಕೆ ತುಂಬಾನೇ ಮುಖ್ಯವಾಗಿದೆ.

45- ಮಾರ್ಕ್ ಸಿನಿಮಾಗೆ ಬರಲ್ಲ ರೇಟಿಂಗ್ ಆಪ್ಶನ್
ದ್ವೇಷದ ಕಾರಣಕ್ಕೆ ಸಿನಿಮಾಗೆ ನೆಗೆಟಿವ್ ವಿಮರ್ಶೆ ಹಬ್ಬಿಸೋ ಭಯ ತಂಡವನ್ನು ಕಾಡಿದೆ. ಈ ಕಾರಣದಿಂದ ತಂಡದವರು ಕೋರ್ಟ್ನಿಂದ ಆರ್ಡರ್ ತಂದಿದೆ. ಮುಂದಿನ ದಿನಗಳಲ್ಲಿ ದೊಡ್ಡ ಬಜೆಟ್ ಸಿನಿಮಾಗಳು ಇದೇ ಟ್ರೆಂಡ್ ಫಾಲೋ ಮಾಡೋ ಸಾಧ್ಯತೆ ಇದೆ.
ಇದನ್ನೂ ಓದಿ: ‘45’ ಸಿನಿಮಾ ಹೇಗಿದೆ? ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್ ‘ಮಾರ್ಕ್’ ಹಾಗೂ ‘45’ ಎರಡೂ ಕನ್ನಡದ ಸಿನಿಮಾಗಳು. ಈ ಚಿತ್ರಗಳು ಮೊದಲ ದಿನ ಎಷ್ಟು ಕೋಟಿ ರೂಪಾಯಿ ಗಳಿಸಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಎರಡೂ ಸಿನಿಮಾಗೆ ಉತ್ತಮ ಟಾಕ್ ಪಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:45 pm, Thu, 25 December 25




