AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮ್ಯಾಕ್ಸ್’ ಸಿನಿಮಾ ವಿವಾದ: ಕೆಆರ್​​ಜಿ ಅರ್ಜಿಗೆ ನಿರ್ಮಾಪಕರಿಗೆ ನೊಟೀಸ್

Max Kannada movie: ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾಕ್ಕೆ ತಮಿಳಿನ ನಿರ್ಮಾಪಕ ಕಲೈಪುಲಿ ಎಸ್ ತನು ಮತ್ತು ಕಿಚ್ಚ ಸುದೀಪ್ ಇಬ್ಬರೂ ಬಂಡವಾಳ ಹೂಡಿದ್ದರು. ಸಿನಿಮಾ ವಿತರಣೆ ಮಾಡಿದ್ದು ಕೆಆರ್​​ಜಿ ಸ್ಟುಡಿಯೋಸ್. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ನಿರ್ಮಾಪಕರು ಮತ್ತು ಕೆಆರ್​​ಜಿ ನಡುವೆ ಹಣಕಾಸಿಗೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿದ್ದು, ನಿರ್ಮಾಪಕ ಕಲೈಪುಲಿ ತನು ಅವರು ಕೆಆರ್​​​ಜಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್​​ಜಿ ಮನವಿ ಮೇರೆಗೆ ಸಿನಿಮಾದ ನಿರ್ಮಾಪಕರಿಗೆ ಮದ್ರಾಸ್ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.

‘ಮ್ಯಾಕ್ಸ್’ ಸಿನಿಮಾ ವಿವಾದ: ಕೆಆರ್​​ಜಿ ಅರ್ಜಿಗೆ ನಿರ್ಮಾಪಕರಿಗೆ ನೊಟೀಸ್
Max Kannada Movie
ಮಂಜುನಾಥ ಸಿ.
|

Updated on: Mar 25, 2026 | 4:28 PM

Share

ನಟ ಕಿಚ್ಚ ಸುದೀಪ್ (Sudeep) ನಟನೆಯ ‘ಮ್ಯಾಕ್ಸ್’ ಸಿನಿಮಾ 2024 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ದೊಡ್ಡ ಹಿಟ್ ಆಗಿತ್ತು. ಸಿನಿಮಾಕ್ಕೆ ತಮಿಳಿನ ನಿರ್ಮಾಪಕ ಕಲೈಪುಲಿ ಎಸ್ ತನು ಮತ್ತು ಕಿಚ್ಚ ಸುದೀಪ್ ಇಬ್ಬರೂ ಬಂಡವಾಳ ಹೂಡಿದ್ದರು. ಸಿನಿಮಾವನ್ನು ವಿತರಣೆ ಮಾಡಿದ್ದು ಕೆಆರ್​​ಜಿ ಸ್ಟುಡಿಯೋಸ್. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ನಿರ್ಮಾಪಕರು ಮತ್ತು ಕೆಆರ್​​ಜಿ ನಡುವೆ ಹಣಕಾಸಿಗೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿದ್ದು, ನಿರ್ಮಾಪಕ ಕಲೈಪುಲಿ ತನು ಅವರು ಕೆಆರ್​​​ಜಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್​​ಜಿ ಮನವಿ ಮೇರೆಗೆ ಸಿನಿಮಾದ ನಿರ್ಮಾಪಕರಿಗೆ ಮದ್ರಾಸ್ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.

ಡಿಸೆಂಬರ್ 16, 2024 ರಂದು ಕಲೈಪುಲಿ ಎಸ್. ತನು ಅವರ ‘ವಿ ಕ್ರಿಯೇಷನ್ಸ್’ ಮತ್ತು ಬೆಂಗಳೂರಿನ ‘ಕೆಆರ್‌ಜಿ ಸ್ಟುಡಿಯೋಸ್’ ನಡುವೆ ‘ಮ್ಯಾಕ್ಸ್’ ಚಿತ್ರದ ಕರ್ನಾಟಕ ವಿತರಣಾ ಹಕ್ಕುಗಳ ಕುರಿತು ಒಪ್ಪಂದವಾಗಿತ್ತು. ಕೆಆರ್‌ಜಿ ಸ್ಟುಡಿಯೋಸ್ ಚಿತ್ರದ ಆದಾಯ ಮತ್ತು ವೆಚ್ಚದ ಸರಿಯಾದ ಲೆಕ್ಕಪತ್ರಗಳನ್ನು ನೀಡಿಲ್ಲ ಮತ್ತು ತಮಗೆ ಬರಬೇಕಾದ ಬಾಕಿ ಹಣವನ್ನು ಪಾವತಿಸಿಲ್ಲ ಎಂದು ಆರೋಪಿಸಿ ತನು ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಸಿವಿಲ್ ಮೊಕದ್ದಮೆ ಹೂಡಿದ್ದರು. ಅಲ್ಲದೆ, 18% ಬಡ್ಡಿಯೊಂದಿಗೆ ಬಾಕಿ ಹಣ ಮತ್ತು 1 ಕೋಟಿ ರೂ. ನಷ್ಟಪರಿಹಾರಕ್ಕೂ ಬೇಡಿಕೆ ಇಟ್ಟಿದ್ದರು. ಅಲ್ಲದೆ, ಈ ವಿವಾದ ಸೆಟಲ್ ಆಗುವವರೆಗೆ ಕೆಆರ್​ಜಿ ಸ್ಟುಡಿಯೋಸ್ ನಿರ್ಮಿಸಿರುವ ‘ಮ್ಯಾಂಗೊ ಪಚ್ಚ’ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಸಹ ಮನವಿ ಮಾಡಿದ್ದರು.

ಇದನ್ನೂ ಓದಿ:‘ವಾರಣಾಸಿ’ ಸೆಟ್ ಸೇರಲು ರೆಡಿ ಆದ ಸುದೀಪ್​; ಯಾವಾಗ, ಎಷ್ಟು ದಿನ?

ಕೆಆರ್‌ಜಿ ಸ್ಟುಡಿಯೋಸ್ ಈ ಮೊಕದ್ದಮೆಯನ್ನು ಮದ್ರಾಸ್ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸುವುದನ್ನು ವಿರೋಧಿಸಿತ್ತು. ಒಪ್ಪಂದದ ಪತ್ರವನ್ನು ಬೆಂಗಳೂರಿನಲ್ಲಿ ಖರೀದಿಸಲಾಗಿತ್ತು, ಒಪ್ಪಂದ ನಡೆದಿದ್ದು ಸಹ ಕರ್ನಾಟಕದಲ್ಲಿಯೇ. ಚಿತ್ರವು ಪ್ರಮುಖವಾಗಿ ಕನ್ನಡ ಭಾಷೆಯದ್ದಾಗಿದೆ. ಒಪ್ಪಂದದ ಪ್ರಕಾರ ಯಾವುದೇ ವಿವಾದವಿದ್ದರೂ ಅದು ಬೆಂಗಳೂರಿನ ನ್ಯಾಯಾಲಯಗಳ ವ್ಯಾಪ್ತಿಗೆ ಬರಬೇಕು ಎಂದು ಕೆಆರ್​ಜಿ ಒತ್ತಾಯಿಸಿದೆ. ವಿಚಾರಣೆಯ ಸಂದರ್ಭದಲ್ಲಿ ಒಂದು ಕುತೂಹಲಕಾರಿ ಅಂಶ ಬೆಳಕಿಗೆ ಬಂದಿತು. ಒಪ್ಪಂದದ ಪತ್ರದಲ್ಲಿ ‘ಬೆಂಗಳೂರು’ ಎಂಬ ಪದವನ್ನು ಹೊಡೆದು ಹಾಕಿ ಅದರ ಜಾಗದಲ್ಲಿ ‘ಚೆನ್ನೈ’ ಎಂದು ಬರೆಯಲಾಗಿತ್ತು. ಇದರ ಪಕ್ಕದಲ್ಲಿ ಕಲೈಪುಲಿ ತನು ಅವರ ಸಹಿ ಇತ್ತಾದರೂ, ಕೆಆರ್‌ಜಿ ಸ್ಟುಡಿಯೋಸ್ ಪ್ರತಿನಿಧಿಗಳ ಸಹಿ ಇರಲಿಲ್ಲ. ಈ ಬದಲಾವಣೆಯನ್ನು ತಮಗೆ ತಿಳಿಸದೆ ಮಾಡಲಾಗಿದೆ ಎಂದು ಕೆಆರ್‌ಜಿ ಸ್ಟುಡಿಯೋಸ್ ವಾದಿಸಿತ್ತು.

ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಅವರು ಕೆಆರ್‌ಜಿ ಸ್ಟುಡಿಯೋಸ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದರು. ಒಪ್ಪಂದದ ಪ್ರಕಾರ ಹಣವನ್ನು ಚೆನ್ನೈನಲ್ಲಿರುವ ಕಲೈಪುಲಿ ಎಸ್ ತನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಿರುವುದರಿಂದ, ವಿವಾದದ ಒಂದು ಭಾಗ ಚೆನ್ನೈನಲ್ಲಿ ನಡೆದಂತಾಗುತ್ತದೆ. ಹೀಗಾಗಿ ಮದ್ರಾಸ್ ಹೈಕೋರ್ಟ್‌ನಲ್ಲಿ ಈ ಕೇಸ್ ನಡೆಸಲು ಅವಕಾಶ ನೀಡಿದರು. ಆದರೆ ಇದನ್ನು ವಿರೋಧಿಸಿ ಕೆಆರ್​​ಜಿ ಈಗ ಅರ್ಜಿ ಹಾಕಿದ್ದು, ಇದಕ್ಕೆ ಸಂಬಂಧಿಸಿದಂತೆ ಕಲೈಪುಲಿ ಅವರಿಗೆ ನೊಟೀಸ್ ನೀಡಲಾಗಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ನಿಗದಿಪಡಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?