‘45’ ಮತ್ತು ‘ಮಾರ್ಕ್’ ಸಿನಿಮಾ ಎರಡನೇ ದಿನ ಗಳಿಸಿದ್ದೆಷ್ಟು?

Mark and 45 movie collections: ಗುರುವಾರದಂದು ಕನ್ನಡದ ಎರಡು ದೊಡ್ಡ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಿವೆ. ಸುದೀಪ್ ನಟನೆಯ ‘ಮಾರ್ಕ್’ ಮತ್ತು ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾಗಳು ಗುರುವಾರ ಬಿಡುಗಡೆ ಆಗಿದ್ದು, ಮೊದಲ ದಿನ ಉತ್ತಮ ಗಳಿಕೆ ಮಾಡಿವೆ. ಈ ಸಿನಿಮಾಗಳು ಎರಡನೇ ದಿನ ಗಳಿಕೆ ಮಾಡಿದ್ದೆಷ್ಟು?

‘45’ ಮತ್ತು ‘ಮಾರ್ಕ್’ ಸಿನಿಮಾ ಎರಡನೇ ದಿನ ಗಳಿಸಿದ್ದೆಷ್ಟು?
Mark 45

Updated on: Dec 27, 2025 | 7:30 AM

ಕನ್ನಡದ ಎರಡು ದೊಡ್ಡ ಸಿನಿಮಾಗಳು ಈ ವಾರ ಬಿಡುಗಡೆ ಆಗಿವೆ. ಶಿವರಾಜ್ ಕುಮಾರ್ (Shiva Rajkumar), ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟನೆಯ ‘45’ ಮತ್ತು ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಬಿಡುಗಡೆ ಆಗಿದೆ. ಎರಡೂ ಸಹ ಬಹಳ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಮತ್ತು ಪರಸ್ಪರ ಸ್ಪರ್ಧೆಯ ಮೇರೆಗೆ ಒಂದೇ ದಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿವೆ. ಹಾಗಾಗಿ ಎರಡೂ ಸಿನಿಮಾಗಳ ಕಲೆಕ್ಷನ್ ಮೇಲೆ ಸಹಜವಾಗಿಯೇ ಕಣ್ಣಿದೆ. ಮೊದಲ ದಿನ ಉತ್ತಮ ಗಳಿಕೆಯನ್ನೇ ಮಾಡಿರುವ ಈ ಸಿನಿಮಾಗಳು ಎರಡನೇ ದಿನ ಅಂದರೆ ಶುಕ್ರವಾರ ಬಾಕ್ಸ್ ಆಫೀಸ್​​ನಲ್ಲಿ ಗಳಿಸಿದ್ದೆಷ್ಟು?

ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಬಿಡುಗಡೆ ಆದ ಮೊದಲ ದಿನ ಅಂದರೆ ಗುರುವಾರ ಸುಮಾರು 7.50 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆದರೆ ಎರಡನೇ ದಿನ ಸಿನಿಮಾದ ಕಲೆಕ್ಷನ್ ಕುಸಿದಿದೆ. ಮೊದಲ ದಿನ ಗುರುವಾರ ಕ್ರಿಸ್​​ಮಮಸ್ ರಜೆ ಇದ್ದ ಕಾರಣ ಸಹಜವಾಗಿಯೇ ಸಿನಿಮಾದ ಕಲೆಕ್ಷನ್ ಹೆಚ್ಚಾಗಿತ್ತು. ಆದರೆ ಶುಕ್ರವಾರ 3.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವೀಕ್ ಡೇನಲ್ಲಿ ಇದು ಸಾಮಾನ್ಯ ಕಲೆಕ್ಷನ್ ಏನಲ್ಲ. ಶನಿವಾರ ಮತ್ತು ಭಾನುವಾರ ಕಲೆಕ್ಷನ್ ಮತ್ತೆ ಏರಿಕೆ ಆಗುವ ಸಾಧ್ಯತೆ ದಟ್ಟವಾಗಿದೆ.

ಇನ್ನು ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಬಿಡುಗಡೆ ಆದ ದಿನ ಅಂದರೆ ಗುರುವಾರ 5.50 ಸಿನಿಮಾ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು ಎರಡನೇ ದಿನ ಅಂದರೆ ಶುಕ್ರವಾರ ‘45’ ಸಿನಿಮಾ 2.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಶುಕ್ರವಾರ ವಾರದ ದಿನವಾದ್ದರಿಂದ ಈ ಕಲೆಕ್ಷನ್ ಕಡಿಮೆಯೇನಲ್ಲ. ಶನಿವಾರ ಮತ್ತು ಭಾನುವಾರ ಮತ್ತೆ ರಜೆ ದಿನಗಳು ಇರುವುದರಿಂದ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:ಶಿವರಾಜ್ ಕುಮಾರ್ ಭೇಟಿಯಾದ ದರ್ಶನ್ ಪುತ್ರ ವಿನೀಶ್: ವಿಡಿಯೋ ನೋಡಿ

ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಿದ್ದು, ಒಂದರ ಕಲೆಕ್ಷನ್ ಮೇಲೆ ಇನ್ನೊಂದು ಸಿನಿಮಾ ಪ್ರಭಾವ ಬೀರುವುದು ಸಾಮಾನ್ಯ. ಆದರೆ ಈಗ ಹೋಗುತ್ತಿರುವ ರೀತಿ ನೋಡಿದರೆ ಎರಡೂ ಸಿನಿಮಾಗಳು ಒಂದು ಉತ್ತಮ ಗಳಿಕೆ ಮಾಡುವ ಭರವಸೆ ಮೂಡಿಸಿವೆ. ಎರಡೂ ಸಿನಿಮಾಗಳ ಬಗ್ಗೆ ಪ್ರೇಕ್ಷಕರು ಧನಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ ಎರಡೂ ಸಿನಿಮಾಗಳು ಉತ್ತಮ ಗಳಿಕೆ ಮಾಡುವ ದಟ್ಟ ಸಾಧ್ಯತೆ ಇದೆ.

‘ಮಾರ್ಕ್’ ಸಿನಿಮಾನಲ್ಲಿ ಸುದೀಪ್ ನಟಿಸಿದ್ದು, ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಅಜನೀಶ್ ಅವರ ಸಂಗೀತವಿದೆ. ಪರಭಾಷೆಯ ಜನಪ್ರಿಯ ಕಲಾವಿದರಾದ ಯೋಗಿ ಬಾಬು, ಶೈನ್ ಟಾಮ್ ಚಾಕೊ ಇನ್ನೂ ಕೆಲವರು ನಟಿಸಿದ್ದಾರೆ. ಇನ್ನು ‘45’ ಸಿನಿಮಾವನ್ನು ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಅವರ ಮೊದಲ ಸಿನಿಮಾ ಇದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ