ಸುನೀಲ್ ಶೆಟ್ಟಿ ಮಂಗಳೂರು ಮೂಲದವರು. ಅವರಿಗೆ ತುಳು ಭಾಷೆ ಸ್ಪಷ್ಟವಾಗಿ ಮಾತನಾಡಲು ಬರುತ್ತದೆ. ಅವರಿಗೆ ತುಳು ನಾಡಿನ ಬಗ್ಗೆ ವಿಶೇಷ ಗೌರವ ಇದೆ. ಅವರು ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ಅವರು ತುಳು ಸಿನಿಮಾ ಮಾಡುತ್ತಿದ್ದಾರೆ. ರೂಪೇಶ್ ಶೆಟ್ಟಿ ಜೊತೆ ಇದಕ್ಕಾಗಿ ಕೈ ಜೋಡಿಸಿದ್ದಾರೆ. ಅವರಿಗೆ ತುಳು ಸಿನಿಮಾ ಮಾಡಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತಂತೆ. ಈಗ ಅವರು ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.
ರೂಪೇಶ್ ಶೆಟ್ಟಿ ಅವರು ಇತ್ತೀಚೆಗೆ ‘ಜೈ’ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದಾರೆ. ಇದನ್ನು ರೂಪೇಶ್ ಶೆಟ್ಟಿ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ಅವರೇ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಇದು ಪಕ್ಕಾ ತುಳು ಸಿನಿಮಾ. ಇದಕ್ಕೆ ಬಾಲಿವುಡ್ ಹೀರೋನ ಆಗಮನ ಆಗಿದೆ ಎಂಬುದು ವಿಶೇಷ. ರೂಪೇಶ್ ಶೆಟ್ಟಿ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ.
ಸಿನಿಮಾ ಬಗ್ಗೆ ಹೆಮ್ಮೆ ಹೊರಹಾಕಿರುವ ರೂಪೇಶ್ ಶೆಟ್ಟಿ, ‘ಮೊದಲಿನಿಂದಲೂ ತುಳು ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ತುಳು ಚಿತ್ರರಂಗ ತುಂಬಾನೇ ಅಭಿವೃದ್ಧಿ ಕಂಡಿದೆ. ರೂಪೇಶ್ ಶೆಟ್ಟಿ ಅವರು ಬಂದು ಕಥೆ ಹೇಳಿದಾಗ ಇದನ್ನು ಮಾಡಬೇಕು ಎಂದು ಅನಿಸಿತು. ಸಬ್ಜೆಕ್ಟ್ ನನಗೆ ಇಷ್ಟ ಆಯಿತು. ಇಲ್ಲಿನ ಜನರು ನನಗೆ ಯಾವಾಗಲೂ ನನಗೆ ಬೆಂಬಲ ನೀಡುತ್ತಾರೆ. ಸುಬ್ರಮಣ್ಯ, ಧರ್ಮಸ್ಥಳ ಮೊದಲಾದ ಪುಣ್ಯಸ್ಥಳಗಳಿಗೆ ಬರುತ್ತಾ ಇರುತ್ತೇನೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಬೇರೆಯವರ ಯಶಸ್ಸನ್ನು ನೋಡಿ ವಿಡಿಯೋ ಮಾಡಿದ ರೂಪೇಶ್ ಶೆಟ್ಟಿ
‘ಈ ಬಾರಿ ತುಳು ಸಿನಿಮಾ ಮಾಡುತ್ತಿದ್ದೇನೆ. ಇದು ಖುಷಿಯ ದಿನ. ಇದು ಹೆಮ್ಮೆ ಕೂಡ ಹೌದು. ಚಿಕ್ಕ ಜಾಗ ಆದರೂ ಸಾಕಷ್ಟು ಚೆನ್ನಾಗಿ ಸಿನಿಮಾ ಮಾಡುತ್ತಿದ್ದಾರೆ. ತುಳು ಜನರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಇಲ್ಲಿಂದ ಹೋಗಿ ಹೆಸರು ಮಾಡಿದವರು ತುಂಬಾ ಜನ ಇದ್ದಾರೆ. ನಾನು ರೂಪೇಶ್ಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.