Puttanna Kanagal: ಹಲವು ಅದ್ಭುತ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್

Puttanna Kanagal Birth Anniversary: ಇಂದು ಪುಟ್ಟಣ್ಣ ಕಣಗಾಲ್ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರ ವೃತ್ತಿ ಬದುಕಿನ ಮೆಲುಕು ಇಲ್ಲಿದೆ.

Puttanna Kanagal: ಹಲವು ಅದ್ಭುತ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್
ಪುಟ್ಟಣ್ಣ ಕಣಗಾಲ್ (ಸಂಗ್ರಹ ಚಿತ್ರ)
Edited By:

Updated on: Dec 01, 2021 | 1:09 PM

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಚಿತ್ರನಿರ್ದೇಶಕರಲ್ಲಿ ಚಿತ್ರಬ್ರಹ್ಮ ಎಂದೇ ಖ್ಯಾತರಾದ ಪುಟ್ಟಣ್ಣ ಕಣಗಾಲ್ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಇಂದು (ಡಿ.10) ಅವರು ಹುಟ್ಟಿದ ದಿನ. ಸಿದ್ಧ ಮಾದರಿಗಳನ್ನು ಒಡೆದು, ಕನ್ನಡ ಚಿತ್ರರಂಗ ಹೊಸ ದಾರಿಯಲ್ಲಿ ನಡೆಯಲು ಕಾರಣರಾದ ನಿರ್ದೇಶಕರವರು. ಹಲವು ಖ್ಯಾತ ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿಯೂ ಅವರಿಗೆ ಸಲ್ಲುತ್ತದೆ. ಮಹಿಳಾ ಪ್ರದಾನ ಚಿತ್ರಗಳು, ಪ್ರಯೋಗ ಶೀಲ ಚಿತ್ರಗಳು, ಕಮರ್ಷಿಯಲ್ ಚಿತ್ರಗಳು.. ಹೀಗೆ ಪುಟ್ಟಣ್ಣ ಕಣಗಾಲ್ ಹಲವಾರು ಮಾದರಿಗಳಲ್ಲಿ ಕೃಷಿ ಮಾಡಿ ಸೈ ಎನಿಸಿಕೊಂಡವರು. ಪುಟ್ಟಣ್ಣರವರು ಚಿತ್ರರಂಗಕ್ಕೆ ಬರುವ ಮುನ್ನ ನಾಟಕ ಕಂಪೆನಿಯಲ್ಲಿ ಡ್ರೈವರ್ ಆಗಿ ಕಾರ್ಯ ನಿರ್ವಹಿಸಿದ್ದರು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕರಲ್ಲೊಬ್ಬರಾದ ಬಿ.ಆರ್. ಪಂತುಲು ಅವರ ಬಳಿ 1954 ರಲ್ಲಿ ಡೈಲಾಗ್ ಕೋಚ್ ಆಗಿ ಸೇರಿದ ಪುಟ್ಟಣ್ಣ ನಂತರದ ದಿನಗಳಲ್ಲಿ ‘ಪದ್ಮಿನಿ ಪಿಕ್ಚರ್ಸ್’ನ ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದರು. ಕಾದಂಬರಿ ಆಧಾರಿತ ಚಿತ್ರಗಳಿಗೆ ಪುಟ್ಟಣ್ಣ ಕಣಗಾಲ್ ಹೆಚ್ಚು ಒತ್ತು ಕೊಟ್ಟಿದ್ದರು. ಅವರ ವೃತ್ತಿ ಜೀವನದ ಮೊದಲ ಚಿತ್ರ ಮಲಯಾಳಂನ ‘ಸ್ಕೂಲ್ ಮಾಸ್ಟರ್’. ‘ಬೆಳ್ಳಿಮೋಡ’ ಚಿತ್ರದ ಮೂಲಕ ಪುಟ್ಟಣ್ಣ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದರು.​

ಪುಟ್ಟಣ್ಣ ಕಣಗಾಲ್ (ಸಂಗ್ರಹ ಚಿತ್ರ)ಪುಟ್ಟಣ್ಣನವರ ಚಿತ್ರಗಳ ಮೂಲಕ ಬೆಳಕಿಗೆ ಬಂದ ನಟಿಯರಲ್ಲಿ ಕಲ್ಪನಾ, ಆರತಿ, ಪದ್ಮಾ ವಾಸಂತಿ ಹಾಗೂ ಅಪರ್ಣಾ ಮೊದಲಾದವರು ಪ್ರಮುಖರಾಗಿದ್ದಾರೆ. ಅದೇ ರೀತಿಯಾಗಿ ವಿಷ್ಣುವರ್ಧನ್, ಅಂಬರೀಶ್, ರಾಮಕೃಷ್ಣ, ಜೈಜಗದೀಶ್ ಸೇರಿದಂತೆ ಹಲವಾರು ನಟರು ಇವರ ಮೂಲಕ ಬೆಳ್ಳಿ ತೆರೆಯಲ್ಲಿ ಛಾಪು ಮೂಡಿಸಿದರು. ನಾಗರಹಾವು, ಎಡಕಲ್ಲು ಗುಡ್ಡದ ಮೇಲೆ, ರಂಗನಾಯಕಿ, ಶರಪಂಜರ, ಕಥಾ ಸಂಗಮ ಮೊದಲಾದ ಖ್ಯಾತ ಚಿತ್ರಗಳನ್ನು ಪುಟ್ಟಣ್ಣರವರು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ.

ಪುಟ್ಟಣ್ಣ ಕಣಗಾಲ್ (ಸಂಗ್ರಹ ಚಿತ್ರ)

ಜೂನ್ 5,1985ರಲ್ಲಿ ‘ಮಸಣದ ಹೂವು’ ಚಿತ್ರದ ವೇಳೆ ಪುಟ್ಟಣ್ಣ ಕಣಗಾಲ್ ನಿಧನರಾದರು. ಅರ್ಧ ಚಿತ್ರೀಕರಣಗೊಂಡಿದ್ದ ಈ ಚಿತ್ರವನ್ನು ಅವರ ಶಿಷ್ಯರಾದ ಕೆ.ಎಸ್.ಎಲ್.ಸ್ವಾಮಿಯವರು ಪೂರ್ಣಗೊಳಿಸಿದರು. ವೃತ್ತಿ ಜೀವನದಲ್ಲಿ ವೈಶಿಷ್ಟ್ಯಪೂರ್ಣ ಚಿತ್ರಗಳನ್ನು ನೀಡಿದ ಪುಟ್ಟಣ್ಣ ಕಣಗಾಲ್ ಇಂದಿನ ಅದೆಷ್ಟೋ ಚಿತ್ರ ನಿರ್ದೇಶಕರಿಗೆ ಪ್ರೇರಣೆ, ಆದರ್ಶ. ಕನ್ನಡ ಚಿತ್ರರಂಗ ಅವರ ಸಾಧನೆಯನ್ನು ಇಂದು ಸ್ಮರಿಸುತ್ತಿದೆ.

ಇದನ್ನೂ ಓದಿ:

ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ನೆನಪು

Radhe Shyam Song: ರಿಲೀಸ್ ಆಯ್ತು ‘ರಾಧೆ ಶ್ಯಾಮ್’ ಹೊಸ ಹಾಡು; ಅರಿಜಿತ್ ಧ್ವನಿಗೆ ಜೀವ ತುಂಬಿದ ಪ್ರಭಾಸ್- ಪೂಜಾ ಹೆಗ್ಡೆ