AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ ಸಿನಿಮಾ ಪ್ರಚಾರಕ್ಕೆ ಯಶ್ ಭರ್ಜರಿ ಯೋಜನೆ

Toxic movie: ‘ಟಾಕ್ಸಿಕ್’ ಸಿನಿಮಾದ ಆನ್​​ಲೈನ್ ಪ್ರಚಾರ ಈಗಾಗಲೇ ಆರಂಭವಾಗಿದೆ. ಟೀಸರ್, ಪೋಸ್ಟರ್, ಹಾಡು ಬಿಡುಗಡೆ ಒಂದರ ಹಿಂದೆ ಒಂದು ನಡೆಯುತ್ತಲೇ ಇದೆ. ಇದೀಗ ಯಶ್ ಖುದ್ದು ಫೀಲ್ಡಿಗಿಳಿದು ಸಿನಿಮಾದ ಆಫ್​​ಲೈನ್ ಪ್ರಚಾರಕ್ಕೆ ಮುಂದಾಗಿದ್ದಾರೆ. ಸಿನಿಮಾದ ಪ್ರಚಾರಕ್ಕೆ ಭರ್ಜರಿ ಯೋಜನೆಯನ್ನೇ ಯಶ್ ಹಾಕಿಕೊಂಡಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಪ್ರಚಾರಕ್ಕೆ ಯಶ್ ಭರ್ಜರಿ ಯೋಜನೆ
Toxic Movie Pr
ಮಂಜುನಾಥ ಸಿ.
|

Updated on: Jul 14, 2026 | 6:22 PM

Share

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಎರಡು ಬಾರಿ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಇದೀಗ ಕೊನೆಗೂ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ದೇಶದಾದ್ಯಂತ ಅಭಿಮಾನಿಗಳು ಸಿನಿಮಾದ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾದ ಆನ್​​ಲೈನ್ ಪ್ರಚಾರ ಈಗಾಗಲೇ ಆರಂಭವಾಗಿದೆ. ಟೀಸರ್, ಪೋಸ್ಟರ್, ಹಾಡು ಬಿಡುಗಡೆ ಒಂದರ ಹಿಂದೆ ಒಂದು ನಡೆಯುತ್ತಲೇ ಇದೆ. ಇದೀಗ ಯಶ್ ಖುದ್ದು ಫೀಲ್ಡಿಗಿಳಿದು ಸಿನಿಮಾದ ಆಫ್​​ಲೈನ್ ಪ್ರಚಾರಕ್ಕೆ ಮುಂದಾಗಿದ್ದಾರೆ. ಸಿನಿಮಾದ ಪ್ರಚಾರಕ್ಕೆ ಭರ್ಜರಿ ಯೋಜನೆಯನ್ನೇ ಯಶ್ ಹಾಕಿಕೊಂಡಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಆಫ್​​ಲೈನ್ ಪ್ರಚಾರ ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ. ಪ್ರಚಾರ ಕಾರ್ಯ ಮುಂಬೈನಿಂದ ಶುರುವಾಗಲಿದ್ದು, ಕೊನೆಗೆ ಅದು ಕರ್ನಾಟಕಕ್ಕೆ ಬರಲಿದೆ ಎನ್ನಲಾಗುತ್ತಿದೆ. ಯಶ್ ಅವರು ಈ ಹಿಂದೆ ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾಗಳಿಗೆ ಮಾಡಿದಂತೆ ದೇಶದ ಪ್ರಮುಖ ನಗರಗಳಿಗೆ ತೆರಳಿ ಭರ್ಜರಿ ಪ್ರಚಾರ ಮಾಡಲಿದ್ದಾರೆ. ಪ್ರತಿ ನಗರದಲ್ಲೂ ಒಂದು ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜನೆ ಮಾಡಲಿದ್ದಾರೆ ಎಂಬದ ಸುದ್ದಿಯೂ ಇದೆ.

‘ಟಾಕ್ಸಿಕ್’ ಸಿನಿಮಾವನ್ನು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ನಿರ್ಮಾಣ ಮಾಡಿರುವ ಕಾರಣ ಸಿನಿಮಾದ ಓವರ್ ಸೀಸ್ ಪ್ರಚಾರದ ಹೊರೆಯೂ ಯಶ್ ಅವರ ಮೇಲಿದೆ. ಈಗಾಗಲೇ ಕಾಮಿಕಾನ್​​ನಲ್ಲಿ ಸಿನಿಮಾದ ತುಣುಕುಗಳನ್ನು ಪ್ರದರ್ಶಿಸಿದ್ದು, ವಿದೇಶಿ ವಿತರಕರು ಸಿನಿಮಾದ ಬಗ್ಗೆ ಭಾರಿ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಸಿನಿಮಾವನ್ನು ವಿದೇಶಗಳಲ್ಲಿ ಪ್ರೇಕ್ಷಕರಿಗೆ ತಲುಪಿಸಲು ಖುದ್ದು ಯಶ್ ಅವರು ಹಲವು ದಿನಗಳ ಕಾಲ ಅಮೆರಿಕ ಸೇರಿದಂತೆ ಇನ್ನೂ ಕೆಲವು ದೇಶಗಳ ಪ್ರವಾಸ ಸಹ ಮಾಡಲಿದ್ದು, ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನಗಳನ್ನು ಸಹ ನೀಡಲಿದ್ದಾರೆ.

ಇದನ್ನೂ ಓದಿ:ಅಂತಾರಾಷ್ಟ್ರೀಯ ವೇದಿಕೆಯಲ್ಲಿ ರಾಮಾಯಣ; ಫಸ್ಟ್‌ ಲುಕ್: ರಣಬೀರ್, ಯಶ್ ಭಾಗಿ

ಅಂತಿಮವಾಗಿ ಕರ್ನಾಟಕದಲ್ಲಿ ಭಾರಿ ದೊಡ್ಡ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಿದ್ದಾರಂತೆ ಯಶ್ ಮತ್ತು ‘ಟಾಕ್ಸಿಕ್’ ತಂಡ. ಸಿನಿಮಾದ ಎಲ್ಲ ಪ್ರಮುಖ ನಟ-ನಟಿಯರು ಒಟ್ಟಿಗೆ ಆ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಿನಿಮಾ ಬಿಡುಗಡೆಗೆ ಒಂದು ವಾರ ಇದ್ದಂತೆ ಈ ಪ್ರೀ ರಿಲೀಸ್ ಕಾರ್ಯಕ್ರಮ ಬೆಂಗಳೂರು ಅಥವಾ ಸುತ್ತ ಮುತ್ತಲಿನ ನಗರಗಳಲ್ಲಿ ನಡೆಯಲಿದೆ.

‘ಟಾಕ್ಸಿಕ್’ ಸಿನಿಮಾದ ಪ್ರಚಾರಕ್ಕಾಗಿಯೇ ಸುಮಾರು 20 ಕೋಟಿ ಬಜೆಟ್ ಅನ್ನು ಮೀಸಲಿಡಲಾಗಿದೆ ಎನ್ನಲಾಗುತ್ತಿದೆ. ಅದರಲ್ಲೂ ಈ ಬಾರಿ ಹೆಚ್ಚಿನ ಹಣವನ್ನು ವಿದೇಶಗಳಲ್ಲಿ ಸಿನಿಮಾದ ಮಾರುಕಟ್ಟೆಗೆ ಖರ್ಚು ಮಾಡಲಾಗಲಿದೆಯಂತೆ. ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಪುನೀತ್, ದರ್ಶನ್ ಜೀವನದಲ್ಲಿ ಆ ಎರಡು ಘಟನೆ ನಡೆಯಬಾರದಿತ್ತು: ಡಾಲಿ ಧನಂಜಯ್
ಪುನೀತ್, ದರ್ಶನ್ ಜೀವನದಲ್ಲಿ ಆ ಎರಡು ಘಟನೆ ನಡೆಯಬಾರದಿತ್ತು: ಡಾಲಿ ಧನಂಜಯ್
ಬೇತಾಳ ದೇವಾಲಯದ ಮೇಲೆ ಬೇತಮಂಗಲ ಪೊಲೀಸರಿಂದ ದಿಢೀರ್​​ ದಾಳಿ
ಬೇತಾಳ ದೇವಾಲಯದ ಮೇಲೆ ಬೇತಮಂಗಲ ಪೊಲೀಸರಿಂದ ದಿಢೀರ್​​ ದಾಳಿ
ರಾಜ್ಯ ಸರ್ಕಾರದ ವಿರುದ್ಧ ಅಶೋಕ್​​ ಸ್ಫೋಟಕ ಆರೋಪ
ರಾಜ್ಯ ಸರ್ಕಾರದ ವಿರುದ್ಧ ಅಶೋಕ್​​ ಸ್ಫೋಟಕ ಆರೋಪ
ಸಿದ್ದರಾಮಯ್ಯ ಜೊತೆಗಿನ ಭಿನ್ನಾಭಿಪ್ರಾಯ ಒಪ್ಪಿಕೊಂಡ ಸತೀಶ್​​ ಜಾರಕಿಹೊಳಿ
ಸಿದ್ದರಾಮಯ್ಯ ಜೊತೆಗಿನ ಭಿನ್ನಾಭಿಪ್ರಾಯ ಒಪ್ಪಿಕೊಂಡ ಸತೀಶ್​​ ಜಾರಕಿಹೊಳಿ
KRS ಡ್ಯಾಂನಲ್ಲಿ ಅನುಮತಿಯಿಲ್ಲದೆ ಮಣ್ಣು ಪರೀಕ್ಷೆ: ರೈತರ ತೀವ್ರ ವಿರೋಧ
KRS ಡ್ಯಾಂನಲ್ಲಿ ಅನುಮತಿಯಿಲ್ಲದೆ ಮಣ್ಣು ಪರೀಕ್ಷೆ: ರೈತರ ತೀವ್ರ ವಿರೋಧ
ಅಬ್ಬಿ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ!
ಅಬ್ಬಿ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ!
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ