Toxic Movie Release Highlights: ‘ಟಾಕ್ಸಿಕ್’ ಚಿತ್ರ ಹೇಗಿದೆ? ಇಲ್ಲಿದೆ ವಿಮರ್ಶೆ

ಟಾಕ್ಸಿಕ್​ ಸಿನಿಮಾ ರಿಲೀಸ್​, ಯಶ್​ ಅಭಿಮಾನಿಗಳ ಸಂಭ್ರಮಾಚರಣೆ ನೇರಪ್ರಸಾರ: ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಇಂದು ಪ್ರಪಂಚದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಥಿಯೇಟರ್ ಬಳಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಬೆಳಗಿನ ಜಾವ 6 ಗಂಟೆಯಿಂದಲೇ ಪ್ರದರ್ಶನಗಳು ಆರಂಭವಾಗಿದೆ. ಲೈವ್ ಅಪ್​ಡೇಟ್ ಇಲ್ಲಿದೆ.

Toxic Movie Release Highlights: ‘ಟಾಕ್ಸಿಕ್’ ಚಿತ್ರ ಹೇಗಿದೆ? ಇಲ್ಲಿದೆ ವಿಮರ್ಶೆ
ಯಶ್
Edited By:

Updated on: Aug 26, 2026 | 6:28 PM

ರಾಕಿ ಭಾಯ್ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಇಂದು (ಆಗಸ್ಟ್ 26) ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ನೆಚ್ಚಿನ ನಟನನ್ನು ಬೆಳ್ಳಿತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಬಂದಿದ್ದು, ಚಿತ್ರಮಂದಿರಗಳ ಬಳಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ರಾಜ್ಯಾದ್ಯಂತ ಬೆಳಗಿನ ಜಾವ 6 ಗಂಟೆಯಿಂದಲೇ ಪ್ರದರ್ಶನಗಳು ಆರಂಭಗೊಂಡಿವೆ. ಚಿತ್ರಮಂದಿರಗಳ ಮುಂದೆ ಯಶ್ ಅವರ ಬೃಹತ್ ಕಟೌಟ್‌ಗಳಿಗೆ ಹಾಲಿನ ಅಭಿಷೇಕ, ಪಟಾಕಿ ಸಿಡಿತ ಹಾಗೂ ಮೇಲತಾಳಗಳೊಂದಿಗೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಟಾಕ್ಸಿಕ್ ಸಂಭ್ರಮಾಚರಣೆಯ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ. ಮೊದಲ ಪ್ರದರ್ಶನ ವೀಕ್ಷಿಸಿದ ಪ್ರೇಕ್ಷಕರಿಂದ ಸೋಷಿಯಲ್ ಮೀಡಿಯಾದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಾಸ್ ಆಕ್ಷನ್, ಯಶ್ ಅವರ ಮ್ಯಾನರಿಸಂ ಹಾಗೂ ತಾಂತ್ರಿಕ ಶ್ರೀಮಂತಿಕೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ದೇಶ-ವಿದೇಶಗಳ ಬಾಕ್ಸ್ ಆಫೀಸ್ ಗಳಿಕೆ, ಚಿತ್ರಮಂದಿರಗಳ ರಶ್ ಮತ್ತು ಪ್ರೇಕ್ಷಕರ ಲೈವ್ ರಿಯಾಕ್ಷನ್ ಅಪ್‌ಡೇಟ್‌ಗಳನ್ನು ಇಲ್ಲಿ ನಿರಂತರವಾಗಿ ಪಡೆಯಿರಿ.

YouTube video player

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

LIVE NEWS & UPDATES

The liveblog has ended.
  • 26 Aug 2026 05:21 PM (IST)

    ಮಗನ ಸಿನಿಮಾಕ್ಕೆ ತಾಯಿ ಪುಷ್ಪ ಶುಭಾಶಯ

    ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಇಂದು (ಆಗಸ್ಟ್ 26) ಬಿಡುಗಡೆ ಆಗಿದ್ದು, ಹಲವಾರು ಮಂದಿ ಸಿನಿಮಾಕ್ಕೆ ವಿಷ್ ಮಾಡಿದ್ದಾರೆ. ವಿಶೇಷವೆಂದರೆ ಯಶ್ ಅವರ ತಾಯಿ ಪುಷ್ಪ ಸಹ ವಿಶೇಷವಾಗಿ ವಿಶ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಪುಷ್ಪ ಅವರು, ನಿನ್ನ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾಗೆ ನನ್ನ ಹೃದಯಪೂರ್ವಕ ಶುಭಾಶಯಗಳು. ನಿನ್ನ ಪರಿಶ್ರಮ, ಕನಸು ಮತ್ತು ಸಮರ್ಪಣೆ ಸದಾ ಯಶಸ್ಸಿನ ಶಿಖರಕ್ಕೇರಲಿ’ ಎಂದಿದ್ದಾರೆ.

  • 26 Aug 2026 04:26 PM (IST)

    ಉತ್ತರ ಪ್ರದೇಶದಲ್ಲಿ ಹೇಗಿದೆ ನೋಡಿ ಯಶ್ ಕ್ರೇಜ್

    ಉತ್ತರ ಪ್ರದೇಶದ ಮೀರಟ್​​ನಲ್ಲಿ ಯಶ್ ಕ್ರೇಜ್ ಬಲು ಜೋರಾಗಿದೆ. ಆಗಸ್ಟ್ 26ರಂದು ಸಿನಿಮಾ ಬಿಡುಗಡೆ ದಿನ ಮೀರಟ್ ನಗರದ ಮಲ್ಟಿಪ್ಲೆಕ್ಸ್ ಒಂದರಲ್ಲಿ ಜನ ಟಿಕೆಟ್​​ಗಾಗಿ ಸಾಲು ನಿಂತಿದ್ದಾರೆ. ಬಹುತೇಕ ಮಂದಿ ಯುವಕರೇ ಇದ್ದು, ಯಶ್ ಅವರ ಸಿನಿಮಾ ಅನ್ನು ಮೊದಲ ದಿನ ಮೊದಲ ಶೋ ನೋಡಲು ಉತ್ಸುಕರಾಗಿದ್ದಾರೆ. ವಿಡಿಯೋ ನೋಡಿ…

  • 26 Aug 2026 03:29 PM (IST)

    ‘ಟಾಕ್ಸಿಕ್’ ಅದ್ಭುತ ಎಂದ ರಮೇಶ್ ಬಾಲ

    ಖ್ಯಾತ ಸಿನಿಮಾ ವಿಮರ್ಶಕ, ಬಾಕ್ಸ್ ಆಫೀಸ್ ಅನಲಿಸ್ಟ್ ರಮೇಶ್ ಬಾಲ ‘ಟಾಕ್ಸಿಕ್’ ಸಿನಿಮಾ ವೀಕ್ಷಿಸಿ ಟ್ವೀಟ್ ಮಾಡಿದ್ದು, ಸಿನಿಮಾ ಅದ್ಭುತ ಎಂದಿದ್ದಾರೆ.  ‘ಸಿನಿಮಾ ತಾಂತ್ರಿಕವಾಗಿ ಅದ್ಭುತವಾಗಿದೆ. ಎರಡೂ ಪಾತ್ರಗಳಲ್ಲಿ ಯಶ್ ಅದ್ಭುತವಾಗಿ ನಟಿಸಿದ್ದಾರೆ. ರವಿ ಬಸ್ರೂರು ಅವರ ಸಂಗೀತ ಪ್ರತಿ ಸೀನ್​​ಗೂ ಸಖತ್ ಬಿಲ್ಡಪ್ ಕೊಟ್ಟಿದೆ.  ಅದ್ಭುತವಾದ ಪ್ರೊಡಕ್ಷನ್, ಸಿನಿಮಾಟೊಗ್ರಫಿಯಿಂದ ಈ ಸಿನಿಮಾ ಹಾಲಿವುಡ್ ಫೀಲ್ ನೀಡುತ್ತದೆ. ಸಿನಿಮಾದ ಕೊನೆಯಲ್ಲಿ ಅಪ್ಪ-ಮಗನ ನಡುವಿನ ಭಾವನಾತ್ಮಕ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ ಎಂದಿದ್ದಾರೆ.

  • 26 Aug 2026 02:23 PM (IST)

    ಅಮೆರಿಕದಲ್ಲೂ ಟಾಕ್ಸಿಕ್ ಹವಾ

    YouTube video player

  • 26 Aug 2026 02:22 PM (IST)

    ಟಾಕ್ಸಿಕ್ ನೋಡಲು ಬಂದವರಿಗೆ ಟಿಫಿನ್ ಹಂಚಿದ ಫ್ಯಾನ್ಸ್

    YouTube video player

  • 26 Aug 2026 01:27 PM (IST)

    ಉದ್ದೇಶ ಪೂರ್ವಕವಾಗಿ ನೆಗೆಟಿವ್ ಹಂಚುತ್ತಿದ್ದಾರೆ ತೆಲುಗು ಮಂದಿ?

  • 26 Aug 2026 01:26 PM (IST)

    ‘ಟಾಕ್ಸಿಕ್’ ಸಿನಿಮಾ ನೋಡಿ ದರ್ಶನ್ ಅಭಿಮಾನಿ ಹೇಳಿದ್ದೇನು?

    YouTube video player

  • 26 Aug 2026 12:30 PM (IST)

    ಟಾಕ್ಸಿಕ್ ಸಿನಿಮಾದ ಪೂರ್ಣ ವಿಮರ್ಶೆ ಇಲ್ಲಿದೆ.

    ಟಾಕ್ಸಿಕ್ ಸಿನಿಮಾದ ಪೂರ್ಣ ವಿಮರ್ಶೆ ಇಲ್ಲಿದೆ. ಆ ಬಗ್ಗೆ ಇಲ್ಲಿದೆ ವಿವರ.

    Toxic Review: ಆರಂಭದಿಂದ ಅಂತ್ಯದ ತನಕ ಆ್ಯಕ್ಷನ್ ಅಬ್ಬರದ ‘ಟಾಕ್ಸಿಕ್’

  • 26 Aug 2026 11:30 AM (IST)

    ‘ಧುರಂಧರ್ 2’ ಕಲೆಕ್ಷನ್ ಬೀಟ್ ಮಾಡುತ್ತಾ ‘ಟಾಕ್ಸಿಕ್’

    ‘ಧುರಂಧರ್ 2’ ಕಲೆಕ್ಷನ್ ಬೀಟ್ ಮಾಡುತ್ತಾ ‘ಟಾಕ್ಸಿಕ್’? ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ‘ಧುರಂಧರ್ 2’ ಚಿತ್ರದ ಗಳಿಕೆಯನ್ನು ‘ಟಾಕ್ಸಿಕ್’ ಸಿನಿಮಾ ಬೀಟ್ ಮಾಡುತ್ತದೆಯೇ ಎಂಬುದು ಸದ್ಯದ ಪ್ರಶ್ನೆ.

    From Darr Ke Bhaag Gaya to a ₹100 Cr+ opening in India alone… #Toxic has truly come a long way that too without a Sequel & Franchise Factor Backing it.

    Never underestimate superstars who are MADE BY THE MASSES.

    But one question remains ,what would have happened if… pic.twitter.com/McxvPx3GZO

    — Sumit Kadel (@SumitkadeI) August 25, 2026

  • 26 Aug 2026 11:13 AM (IST)

    ‘ಟಾಕ್ಸಿಕ್’ ವೇಳೆ ತುಮಕೂರಿನಲ್ಲಿ ಅಭಿಮಾನಿಗಳ ಸಂಭ್ರಮ

    ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು, ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಸಿನಿಮಾಗೆ ಸಂಪೂರ್ಣವಾಗಿ ಫೀದಾ ಆಗಿದ್ದಾರೆ. ಥಿಯೇಟರ್ ಮುಂಭಾಗ ಜಮಾಯಿಸಿದ ಅಭಿಮಾನಿಗಳು ಪಟಾಕಿ ಸಿಡಿಸಿ, ಭರ್ಜರಿ ತಮಟೆ ಸದ್ದಿಗೆ ಹೆಜ್ಜೆ ಹಾಕಿ ಹಬ್ಬದಂತೆ ಬಿಡುಗಡೆಯನ್ನು ಆಚರಿಸಿದರು. ಅಷ್ಟೇ ಅಲ್ಲದೆ, ಯಶ್ ಅವರ ಫೋಟೋ ಹಾಗೂ ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡಿ, ದೃಷ್ಟಿ ತೆಗೆದು ಕುಂಬಳಕಾಯಿ ಒಡೆಯುವ ಮೂಲಕ ನೆಚ್ಚಿನ ನಟನಿಗೆ ಶುಭ ಹಾರೈಸಿದರು. ಚಿತ್ರದ ಸಾಹಸ ದೃಶ್ಯಗಳು ಹಾಗೂ ಮೇಕಿಂಗ್‌ಗೆ ಮಾರುಹೋದ ಅಭಿಮಾನಿಗಳು 'ಟಾಕ್ಸಿಕ್' ಸಿನಿಮಾವನ್ನು ಹಾಲಿವುಡ್ ಮಟ್ಟದ ಚಿತ್ರಕ್ಕೆ ಹೋಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

  • 26 Aug 2026 11:03 AM (IST)

    ಟಾಕ್ಸಿಕ್ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು?

    ಟಾಕ್ಸಿಕ್ ಸಿನಿಮಾದ ಮೊದಲ ದಿನದ ಗಳಿಕೆ ನೂರು ಕೋಟಿ ರೂಪಾಯಿ ದಾಟಬಹುದು ಎಂಬ ನಿರೀಕ್ಷೆ ಇದೆ.

  • 26 Aug 2026 10:18 AM (IST)

    ಟಾಕ್ಸಿಕ್ 2000 ಕೋಟಿ ರೂಪಾಯಿ ಗಳಿಕೆ ಫಿಕ್ಸ್?

    ಟಾಕ್ಸಿಕ್ 2000 ಕೋಟಿ ರೂಪಾಯಿ ಗಳಿಕೆ ಫಿಕ್ಸ್ ಎಂಬ ಮಾತುಗಳನ್ನು ಅಭಿಮಾನಿಗಳು ಆಡುತ್ತಿದ್ದಾರೆ. ಸಿನಿಮಾ ನೋಡಿ ಬಂದ ಅಭಿಮಾನಿಗಳು ಎಗ್ಸೈಟ್​ಮೆಂಟ್​ನಿಂದ ಈ ಮಾತು ಹೇಳುತ್ತಿದ್ದಾರೆ.

    YouTube video player

  • 26 Aug 2026 10:05 AM (IST)

    ಟಾಕ್ಸಿಕ್ ಬಗ್ಗೆ ನೆಗೆಟಿವ್ ಮಾತನಾಡುವವರಿಗೆ ಫ್ಯಾನ್ಸ್ ಖಡಕ್ ತಿರುಗೇಟು

  • 26 Aug 2026 09:45 AM (IST)

    ‘ಟಾಕ್ಸಿಕ್’ ಫಸ್ಟ್​ ಡೇ ಫಸ್ಟ್ ಶೋ ನೋಡಿದ ಫ್ಯಾನ್ಸ್ ಹೇಳಿದ್ದಿಷ್ಟು

    YouTube video player

  • 26 Aug 2026 09:28 AM (IST)

    ಟಾಕ್ಸಿಕ್ ಸಿನಿಮಾ ನೋಡಿದ ದರ್ಶನ್ ಅಭಿಮಾನಿ ಪ್ರತಿಕ್ರಿಯೆ

    YouTube video player

  • 26 Aug 2026 09:27 AM (IST)

    ಯಶ್ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ

    ಯಶ್ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿದೆ. ಸಿನಿಮಾ ನೋಡಿದ ಫ್ಯಾನ್ಸ್ ಈಗಾಗಲೇ ವಿಮರ್ಶೆ ತಿಳಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಟಾಕ್ಸಿಕ್ ದೊಡ್ಡ ಮಟ್ಟದ ಸಂಚಲನ ಸೃಷ್ಟಿ ಮಾಡುತ್ತಿದೆ.

  • 26 Aug 2026 09:06 AM (IST)

    ಟಾಕ್ಸಿಕ್ ಸಿನಿಮಾದ ಮೊದಲಾರ್ಧ ವಿಮರ್ಶೆ ಇಲ್ಲಿದೆ ನೋಡಿ

    ಟಾಕ್ಸಿಕ್ ಸಿನಿಮಾದ ಮೊದಲಾರ್ಧ ವಿಮರ್ಶೆ ಇಲ್ಲಿದೆ ನೋಡಿ

    Toxic First Half Review: ಅದ್ದೂರಿಯಾಗಿದೆ ‘ಟಾಕ್ಸಿಕ್’ ಮೊದಲಾರ್ಧ; ಏನೆಲ್ಲ ಇದೆ ನೋಡಿ..

  • 26 Aug 2026 08:51 AM (IST)

    ಟಾಕ್ಸಿಕ್ ಸಿನಿಮಾ ನೋಡಿದ ಅಭಿಮಾನಿಗಳ ಸಂಭ್ರಮ

    ಟಾಕ್ಸಿಕ್ ಸಿನಿಮಾ ನೋಡಿದ ಅಭಿಮಾನಿಗಳ ಸಂಭ್ರಮ

    YouTube video player

  • 26 Aug 2026 08:34 AM (IST)

    ಬೆಂಗಳೂರಲ್ಲಿ ತಲೆ ಎತ್ತಿದ ಯಶ್ ಕಟೌಟ್

  • 26 Aug 2026 08:32 AM (IST)

    ಹೈದರಾಬಾದ್​ನಲ್ಲಿ ಯಶ್ ಕಟೌಟ್

  • 26 Aug 2026 08:31 AM (IST)

    ಟಾಕ್ಸಿಕ್ ನೋಡಲು 40 ಕಿಮಿ ಪ್ರಯಾಣಿಸಿದ ಅಭಿಮಾನಿ

  • 26 Aug 2026 08:16 AM (IST)

    ಸ್ಯಾನ್‌ಫ್ರಾನ್ಸಿಸ್ಕೋನಲ್ಲಿಯೂ 'ಟಾಕ್ಸಿಕ್' ಹವಾ

    ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಕ್ರೇಜ್ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಜೋರಾಗಿದ್ದು, ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋನಲ್ಲಿಯೂ 'ಟಾಕ್ಸಿಕ್' ಹವಾ ಸೃಷ್ಟಿಯಾಗಿದೆ. ಸದ್ಯ ಅಮೆರಿಕದಲ್ಲಿ ನೆಲೆಸಿರುವ ಮೈಸೂರು ಮೂಲದ ಕೃಷ್ಣಕಾಂತ್ ಹಾಗೂ ಅವರ ಗೆಳೆಯರ ತಂಡವು ಬಾವುಟ ಮತ್ತು ವಿಶೇಷ ಟಿ-ಷರ್ಟ್ ಧರಿಸಿ ಅತ್ಯಂತ ಅದ್ಧೂರಿಯಾಗಿ ಸಿನಿಮಾದ ಬಿಡುಗಡೆಯನ್ನು ಆಚರಿಸಿದೆ. ಸ್ಯಾನ್‌ಫ್ರಾನ್ಸಿಸ್ಕೋನ ಚಿತ್ರಮಂದಿರದಲ್ಲಿ ಕೃಷ್ಣಕಾಂತ್ ಅಂಡ್ ಟೀಮ್ ನೆಚ್ಚಿನ ನಟನ ಸಿನಿಮಾಗೆ ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ದೇಶ ವಿದೇಶದಲ್ಲೂ ಕನ್ನಡದ ಪತಾಕೆಯನ್ನು ಹಾರಿಸಿ ಸಂಭ್ರಮಿಸಿದೆ.

  • 26 Aug 2026 07:52 AM (IST)

    ಟಾಕ್ಸಿಕ್ ಬಗೆಗಿನ ಲೈವ್ ಅಪ್​​ಡೇಟ್ ಇಲ್ಲಿದೆ ನೋಡಿ

    YouTube video player

  • 26 Aug 2026 07:52 AM (IST)

    ಬೆಳಗಾವಿಯಲ್ಲಿ ಯಶ್ ಬ್ಯಾನರ್​ಗೆ ದೊಡ್ಡ ಹೂವಿನ ಮಾಲೆ

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ಬೆಳಗಾವಿಯ ಐನಾಕ್ಸ್ ಚಿತ್ರಮಂದಿರದ ಬಳಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಮೊದಲ ಶೋ ಆರಂಭಕ್ಕೂ ಮುನ್ನವೇ ಥಿಯೇಟರ್ ಮುಂಭಾಗ ಜಮಾಯಿಸಿದ ಅಭಿಮಾನಿಗಳು, ಸಿನಿಮಾದ ಬ್ಯಾನರ್‌ಗೆ ಬೃಹತ್ ಹೂಮಾಲೆ ಹಾಕಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ, ಚಿತ್ರಮಂದಿರದ ಎದುರು ಈಡುಗಾಯಿ ಒಡೆದು ಸಂಭ್ರಮಿಸಿದ ಅಭಿಮಾನಿ ಬಳಗ, 'ಟಾಕ್ಸಿಕ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಹೊಸ ಇತಿಹಾಸ ಹಾಗೂ ದಾಖಲೆಗಳನ್ನು ಬರೆಯಲಿ ಎಂದು ಹಾರೈಸಿದರು.

  • 26 Aug 2026 06:54 AM (IST)

    ಅಡ್ವಾನ್ಸ್ ಬುಕಿಂಗ್ ಧಮಾಕಾ

    ‘ಟಾಕ್ಸಿಕ್’ ಸಿನಿಮಾ ಅಡ್ವಾನ್ಸ್ ಬುಕಿಂಗ್ ಧಮಾಕಾ ಮಾಡಿದೆ. ಈ ಚಿತ್ರ ಮೊದಲ ದಿನವೇ 100 ಕೋಟಿ ರೂಪಾಯಿ ಗಳಿಕೆ ಮಾಡುವ ನಿರೀಕ್ಷೆ ಇದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಪ್ರಿಡಿಕ್ಟ್ ಮಾಡಿದ್ದಾರೆ.

  • 26 Aug 2026 06:33 AM (IST)

    12 ಸಾವಿರಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ತೆರೆಕಂಡ ‘ಟಾಕ್ಸಿಕ್’

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರವು ಬರೋಬ್ಬರಿ 4 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಅತ್ಯಂತ ಅದ್ಧೂರಿಯಾಗಿ ವಿಶ್ವಾದ್ಯಂತ ಬಿಡುಗಡೆಯಾಗಿದೆ. ವಿಶ್ವದಾದ್ಯಂತ 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ತೆರೆಕಂಡಿರುವ ಈ ಸಿನಿಮಾ, ಕರ್ನಾಟಕ ಒಂದರಲ್ಲೇ 1,500ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಪ್ರಮುಖ ಥಿಯೇಟರ್‌ಗಳಲ್ಲಿ ಮುಂಜಾನೆಯಿಂದಲೇ ಆರಂಭವಾಗಿರುವ ಪ್ರದರ್ಶನಗಳಿಗೆ ಯಶ್ ಅಭಿಮಾನಿಗಳು ಪಟಾಕಿ ಸಿಡಿಸಿ, ಸಂಭ್ರಮಾಚರಣೆ ಮಾಡುವ ಮೂಲಕ ತಮ್ಮ ನೆಚ್ಚಿನ ನಟನ ಚಿತ್ರವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

  • 26 Aug 2026 06:26 AM (IST)

    ಯಶ್ ಪರದೆಯ ಮೇಲಕ್ಕೆ ಬರ್ತಿದ್ದಂತೆ ಅಭಿಮಾನಿಗಳಿಂದ ಹೂವಿನ ಮಳೆ!

    ಚಾಮರಾಜನಗರದಲ್ಲಿ ಬೆಳಿಗ್ಗೆ 6 ಗಂಟೆಯ ಫಸ್ಟ್ ಡೇ ಫಸ್ಟ್ ಶೋ ನೋಡಲು ಬಸವೇಶ್ವರ ಚಿತ್ರಮಂದಿರದತ್ತ ರಾಕಿ ಭಾಯ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿದರು. ಥಿಯೇಟರ್‌ನಲ್ಲಿ ಯಶ್‌ ಮಾಸ್‌ ಎಂಟ್ರಿ ಸೀನ್‌ಗೆ ಅಭಿಮಾನಿಗಳು ಪರದೆಯ ಮೇಲೆ ಹೂವಿನ ಮಳೆಗರೆದು, ಈಟಿ ಸಾಲುಗಳ ಮೂಲಕ ತಮ್ಮ ನೆಚ್ಚಿನ ನಟನಿಗೆ ಸಂಭ್ರಮದ ಸ್ವಾಗತ ಕೋರಿದರು.

  • 26 Aug 2026 06:20 AM (IST)

    'ಟಾಕ್ಸಿಕ್'ಗೆ ತುಮಕೂರಿನಲ್ಲಿ ಅದ್ದೂರಿ ಸ್ವಾಗತ!

    ಚಿತ್ರಮಂದಿರಗಳ ಮುಂಭಾಗ ಪಟಾಕಿ ಸಿಡಿಸಿ, ನೆಚ್ಚಿನ ನಟನ ಬೃಹತ್ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದರು. ಇದೇ ವೇಳೆ ಅಭಿಮಾನಿಯೊಬ್ಬರು ನಾಲ್ಕೈದು ಸಾಲಿನ ಕವನ ವಾಚಿಸಿ ಶುಭಾಶಯ ಕೋರಿದ್ದಾರೆ. ತುಮಕೂರು ನಗರದ ಗಾಯತ್ರಿ ಥಿಯೇಟರ್‌ನಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಅದ್ದೂರಿ ಪ್ರದರ್ಶನ ಆರಂಭವಾಗಿದೆ.

  • 26 Aug 2026 05:41 AM (IST)

    ಅಭಿಮಾನಿಗಳ ಬಳಿ ಯಶ್ ಕೋರಿಕೆ

    ‘ಟಾಕ್ಸಿಕ್’ ಚಿತ್ರದ ದೃಶ್ಯಗಳನ್ನು ಶೂಟ್ ಮಾಡಿಕೊಳ್ಳದಂತೆ ಅಭಿಮಾನಿಗಳ ಬಳಿ  ಹಾಗೂ ಸಿನಿ ರಸಿಕರ ಬಳಿ ಯಶ್ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

  • 26 Aug 2026 05:39 AM (IST)

    ‘ಟಾಕ್ಸಿಕ್’ ಚಿತ್ರಕ್ಕೆ ಮುಂಜಾನೆಯೇ ಶೋ

    ಬೆಳಿಗ್ಗೆ 6 ಗಂಟೆಗೆ ಶೋ ಆರಂಭ ಆಗಿದೆ. ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಅಭಿಮಾನಿಗಳು ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಲು ರೆಡಿ ಆಗಿದ್ದಾರೆ.

Published On - 5:38 am, Wed, 26 August 26

Loading...
Unable to load recommendations.
Follow Us