AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Toxic Review: ಆರಂಭದಿಂದ ಅಂತ್ಯದ ತನಕ ಆ್ಯಕ್ಷನ್ ಅಬ್ಬರದ ‘ಟಾಕ್ಸಿಕ್’

Toxic Review: ಆರಂಭದಿಂದ ಅಂತ್ಯದ ತನಕ ಆ್ಯಕ್ಷನ್ ಅಬ್ಬರದ ‘ಟಾಕ್ಸಿಕ್’
Toxic Review
ಟಾಕ್ಸಿಕ್
A
  • Time - 194 Minutes
  • Released - August 26, 2026
  • Language - Kannada
  • Genre - Action, Crime, Period, Thriller
Cast - ಯಶ್, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮುಂತಾದವರು.
Director - ಗೀತು ಮೋಹನ್​ದಾಸ್.
3
Critic's Rating
ಮದನ್​ ಕುಮಾರ್​
|

Updated on: Aug 26, 2026 | 12:20 PM

Share

ರಾಕಿಂಗ್ ಸ್ಟಾರ್ ಯಶ್ ಹಾಗೂ ಇಡೀ ತಂಡದ ಹಲವು ವರ್ಷಗಳ ಶ್ರಮದ ಫಲವಾಗಿ ‘ಟಾಕ್ಸಿಕ್’ (Toxic) ಸಿನಿಮಾ ಮೂಡಿಬಂದಿದೆ. ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡಿದ ಈ ಚಿತ್ರದಲ್ಲಿ ಅನೇಕ ಸ್ಟಾರ್ ಕಲಾವಿದರು ನಟಿಸಿದ್ದಾರೆ. ಯಶ್ (Yash) ಜೊತೆ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಬಹಳ ಅದ್ದೂರಿಯಾಗಿ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಿಸಿದೆ. ಆಗಸ್ಟ್ 26ರಂದು ತೆರೆಕಂಡಿರುವ ‘ಟಾಕ್ಸಿಕ್’ ಸಿನಿಮಾ ವಿಮರ್ಶೆ (Toxic Film Review) ಇಲ್ಲಿದೆ.

ಯಶ್ ಅವರು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಿಂದ ಅಭೂತಪೂರ್ವ ಯಶಸ್ಸು ಕಂಡ ಬಳಿಕ ಮುಂದೇನು ಮಾಡುತ್ತಾರೆ ಎಂಬ ಕೌತುಕ ಎಲ್ಲರಿಗೂ ಇತ್ತು. ಏನೇ ಮಾಡಿದರೂ ‘ಕೆಜಿಎಫ್ 2’ ಸಿನಿಮಾಗಿಂತಲೂ ದೊಡ್ಡದಾಗಿ ಮಾಡಲೇಬೇಕಾದ ಸವಾಲು ಅವರ ಮುಂದಿತ್ತು. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ‘ಟಾಕ್ಸಿಕ್’ ಸಿನಿಮಾವನ್ನು. ಈ ಸಿನಿಮಾದ ಮೇಕಿಂಗ್ ಬಹಳ ಶ್ರೀಮಂತವಾಗಿದೆ. ಸಿನಿಮಾ ಆರಂಭವಾದಾಗಿನಿಂದ ಅಂತ್ಯ ಆಗುವ ತನಕ ಅಬ್ಬರವೇ ತುಂಬಿದೆ.

ಟಾಕ್ಸಿಕ್ ಸಿನಿಮಾದ ಕಥೆ ಏನು?

‘ಟಾಕ್ಸಿಕ್’ ಸಿನಿಮಾದಲ್ಲಿ ಹಲವು ಕಥೆಯ ಎಳೆಗಳು ಇವೆ. ನಯನತಾರಾ ಹಾಗೂ ಯಶ್ ಪಾತ್ರಗಳ ನಡುವೆ ಅಕ್ಕ-ತಮ್ಮನ ಸೆಂಟಿಮೆಂಟ್ ಇದೆ. ಯಶ್ ಮಾಡಿರುವ ದ್ವಿಪಾತ್ರಗಳಾದ ರಾಯ ಹಾಗೂ ಟಿಕೆಟ್ ನಡುವೆ ತಂದೆ-ಮಗನ ಸೇಡಿನ ಕಥೆ ಇದೆ. ಕಿಯಾರಾ ಅಡ್ವಾಣಿ, ಯಶ್ ಹಾಗೂ ತಾರಾ ಸುತಾರಿಯಾ ನಿರ್ವಹಿಸಿದ ಪಾತ್ರಗಳ ನಡುವೆ ತ್ರಿಕೋನ ಪ್ರೇಮಕಥೆ ಇದೆ. ಜೂಜಾಟ ಮತ್ತು ಮಾದಕ ದ್ರವ್ಯದ ಜಾಲಕ್ಕೆ ಸಂಬಂಧಿಸಿದ ಗ್ಯಾಂಗ್​ಸ್ಟರ್ ಕಹಾನಿ ಕೂಡ ಇದೆ. ಇದೆಲ್ಲವನ್ನೂ ಒಟ್ಟಾಗಿ ಸೇರಿಸಿ ನಿರ್ದೇಶಕಿ ಗೀತು ಮೋಹನ್​ದಾಸ್ ಅವರು ‘ಟಾಕ್ಸಿಕ್’ ಸಿನಿಮಾ ಮಾಡಿದ್ದಾರೆ.

ಆ್ಯಕ್ಷನ್ ದೃಶ್ಯಗಳಿಗೆ ಆದ್ಯತೆ:

ಯಶ್ ಅವರ ಅಭಿಮಾನಿಗಳಿಗೆ ಈ ಸಿನಿಮಾ ಹೇಳಿ ಮಾಡಿಸಿದಂತಿದೆ. ಪ್ರತಿ ದೃಶ್ಯದಲ್ಲಿಯೂ ಹೀರೋ ಪಾತ್ರವನ್ನು ಮಾಸ್ ಆಗಿ ಕಟ್ಟಿಕೊಡಲಾಗಿದೆ. ಆ್ಯಕ್ಷನ್ ದೃಶ್ಯಗಳಿಗೆ ಕೊರತೆಯೇ ಇಲ್ಲ. ಪದೇ ಪದೇ ಗುಂಡಿನ ಸದ್ದು ಕೇಳಿಸುತ್ತದೆ. ಹೀರೋ ಕೋಪಗೊಂಡಾಗಲೆಲ್ಲ ರಕ್ತದ ಹೊಳೆಯೇ ಹರಿಯುತ್ತದೆ. ಪಾತ್ರಗಳು ಮಾತನಾಡುವುದಕ್ಕಿಂತ ಹೆಚ್ಚಾಗಿ ಗನ್​ಗಳೇ ಘರ್ಜಿಸುತ್ತವೆ. ಹೊಡಿಬಡಿ ದೃಶ್ಯಗಳನ್ನು ನೋಡಿ ಎಂಜಾಯ್ ಮಾಡುವ ಪ್ರೇಕ್ಷಕರಿಗೆ ‘ಟಾಕ್ಸಿಕ್’ ಸಿನಿಮಾ ಮನರಂಜನೆ ನೀಡುತ್ತದೆ.

ಹತ್ತು ಹಲವು ಪಾತ್ರ:

ಈ ಸಿನಿಮಾದಲ್ಲಿ ಹಲವು ಪಾತ್ರಗಳು ಹೈಲೈಟ್ ಆಗಿವೆ. ಯಶ್ ಅವರು ರಾಯ ಮತ್ತು ಟಿಕೆಟ್ ಎಂಬ ಎರಡು ಪಾತ್ರಗಳನ್ನು ನಿಭಾಯಿಸಿದ್ದಾರೆ. ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಅವರು ಕೂಡ ಸಿನಿಮಾದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಕಥೆಯನ್ನು ಹಿಡಿದಿಡುವಂತಹ ಪಾತ್ರದಲ್ಲಿ ನಯನತಾರಾ ಅವರು ಕಾಣಿಸಿಕೊಂಡಿದ್ದಾರೆ. ಕೆಲವೇ ಹೊತ್ತು ಕಾಣಿಸಿಕೊಂಡರೂ ಕೂಡ ಹುಮಾ ಖುರೇಷಿ ಅವರು ಗಮನ ಸೆಳೆಯುತ್ತಾರೆ. ರುಕ್ಮಿಣಿ ವಸಂತ್ ಅವರು ಬರುವುದು ದ್ವಿತೀಯಾರ್ಧದಲ್ಲಿ ಮಾತ್ರ.

ದೀರ್ಘಾವಧಿ ಸಿನಿಮಾ:

‘ಟಾಕ್ಸಿಕ್’ ಸಿನಿಮಾದ ಅವಧಿ ಬರೋಬ್ಬರಿ 3 ಗಂಟೆ 14 ನಿಮಿಷ ಇದೆ. ಹಲವು ಕಾಲಘಟ್ಟದಲ್ಲಿ ಸಾಗುವ ಕಹಾನಿಯನ್ನು ಈ ಅವಧಿಯಲ್ಲಿ ತೆರೆದಿಡಲಾಗಿದೆ. ಆದರೂ ಕೂಡ ಒಂದಷ್ಟು ದೃಶ್ಯಗಳಲ್ಲಿ ಅಗತ್ಯವಾದ ವಿವರಣೆ ಮಿಸ್ ಆಗಿದೆ ಎನಿಸುತ್ತದೆ. ಅದರತ್ತ ನಿರ್ದೇಶಕರು ಗಮನ ಹರಿಸಿದ್ದರೆ ಚೆನ್ನಾಗಿ ಇರುತ್ತಿತ್ತು. ಸಿನಿಮಾದ ಅವಧಿ ಕೊಂಚ ತಗ್ಗಿದ್ದರೆ ಪ್ಲಸ್ ಆಗುವ ಸಾಧ್ಯತೆ ಇತ್ತು. ಸಾಹಸ ದೃಶ್ಯಗಳಿಗೆ ಹೆಚ್ಚಿನ ಸಮಯ ಮೀಸಲಾಗಿದೆ.

ಇಲ್ಲಿ ಎಲ್ಲವೂ ಮಾಸ್:

ಇಡೀ ಸಿನಿಮಾವನ್ನು ಸಖತ್ ಮಾಸ್ ಆಗಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಹೀರೋ ಯಾವುದೇ ಸ್ಥಿತಿಯಲ್ಲಿ ಇದ್ದರೂ ಆತನ ಮಾಸ್ ಎಲಿಮೆಂಟ್ ಕಡಿಮೆ ಆಗುವುದಿಲ್ಲ. ಅದನ್ನು ಸಿನಿಮಾದುದ್ದಕ್ಕೂ ಕಾಪಾಡಿಕೊಳ್ಳಲಾಗಿದೆ. ಇದರಿಂದಾಗಿ ಕಥೆಯ ಇನ್ನಿತರ ಅಂಶಗಳು ಸ್ವಲ್ಪ ಕಡೆಗಣಿಸಲ್ಪಟ್ಟಿವೆ ಎನಿಸುತ್ತದೆ. ಕಥೆಯಲ್ಲಿ ಎಮೋಷನಲ್ ಗುಣ ಇದ್ದರೂ ಕೂಡ ಪ್ರೇಕ್ಷಕರಿಗೆ ಕನೆಕ್ಟ್ ಆಗುವಲ್ಲಿ ಸ್ವಲ್ಪ ಹಿನ್ನಡೆ ಆಗಿದೆ. ಎಲ್ಲವನ್ನೂ ಮಾಸ್, ಕಮರ್ಷಿಯಲ್ ಆಗಿ ಬಿಂಬಿಸುವ ಪ್ರಯತ್ನದಿಂದಲೇ ಈ ರೀತಿ ಆಗಿದೆ.

ದ್ವಿಪಾತ್ರದಲ್ಲಿ ಸೈ ಎನಿಸಿಕೊಂಡ ಯಶ್:

ಯಶ್ ಅವರು ತಂದೆ ಮತ್ತು ಮಗನಾಗಿ ಎರಡು ಪಾತ್ರಗಳನ್ನು ನಿಭಾಯಿಸಿದ್ದಾರೆ. ಎರಡೂ ಪಾತ್ರಗಳಿಗೆ ಅವರು ನ್ಯಾಯ ಒದಗಿಸಿದ್ದಾರೆ. ರಾಯ ಯುವಕನಾಗಿದ್ದಾಗ ಆ ಪಾತ್ರದ ಶೇಡ್ ಒಂದು ರೀತಿ ಇರುತ್ತದೆ. ನಂತರ ಅದೇ ಪಾತ್ರಕ್ಕೆ ಬಿಳಿ ಗಡ್ಡ ಮೂಡುವಷ್ಟು ವಯಸ್ಸಾದಾಗ ಯಶ್ ಅವರು ಬೇರೆಯದೇ ರೀತಿಯ ಅಭಿನಯ ನೀಡಿದ್ದಾರೆ. ಟಿಕೆಟ್ ಅವತಾರದಲ್ಲಿ ಬಂದಾಗ ಸಂಪೂರ್ಣ ಬೇರೆಯದೇ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಕ್ಲೈಮ್ಯಾಕ್ಸ್​ನಲ್ಲಿ ರಾಯ ಪಾತ್ರದಲ್ಲಿ ಅವರ ನಟನೆಗೆ ಚಪ್ಪಾಳೆ ಸಲ್ಲುತ್ತದೆ.

ಇದನ್ನೂ ಓದಿ: ಯಶ್ ಹುಟ್ಟೂರು ಹಾಸನದಲ್ಲಿ ‘ಟಾಕ್ಸಿಕ್’ ಚಿತ್ರಕ್ಕೆ ಅದ್ದೂರಿ ಸ್ವಾಗತ

ಒಟ್ಟಾರೆಯಾಗಿ ಹೇಳುವುದಾದರೆ, ‘ಟಾಕ್ಸಿಕ್’ ಸಿನಿಮಾ ನಿಂತಿರುವುದೇ ಆ್ಯಕ್ಷನ್ ದೃಶ್ಯಗಳ ಆಧಾರದ ಮೇಲೆ. ಕಥೆಯ ಗಟ್ಟಿತನವನ್ನು ಪಕ್ಕಕ್ಕೆ ಇಟ್ಟು, ಹೆಚ್ಚಿನ ಲಾಜಿಕ್ ಕೇಳದೇ ಎಂಜಾಯ್ ಮಾಡಿದರೆ ಈ ಸಿನಿಮಾ ಇಷ್ಟ ಆಗುತ್ತದೆ. ಸ್ಟಾರ್ ಹೀರೋ, ದೊಡ್ಡ ನಿರ್ಮಾಣ ಸಂಸ್ಥೆ, ಜಾಗತಿಕ ಮಟ್ಟದ ತಂತ್ರಜ್ಞರು, ಬೃಹತ್ ಬಜೆಟ್, ಬಹುತಾರಾಗಣ ಇರುವ ಸಿನಿಮಾ ಎಂಬ ಕಾರಣಕ್ಕೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡು ನೋಡುವ ಪ್ರೇಕ್ಷಕರಿಗೆ ಇನ್ನೂ ಏನೋ ಬೇಕಿತ್ತು ಎಂಬ ಭಾವನೆ ಮೂಡುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಜನರ ನಿದ್ದೆಗೆಡಿಸಿದ್ದ ಹುಲಿ ಕೊನೆಗೂ ಬಂಡೀಪುರ ಅರಣ್ಯ ಸಿಬ್ಬಂದಿ ಬಲೆಗೆ
ಜನರ ನಿದ್ದೆಗೆಡಿಸಿದ್ದ ಹುಲಿ ಕೊನೆಗೂ ಬಂಡೀಪುರ ಅರಣ್ಯ ಸಿಬ್ಬಂದಿ ಬಲೆಗೆ
ಮೈಸೂರು ದಸರಾ 2026: ಗಜಪಡೆಗೆ ಸಚಿವ ಯತೀಂದ್ರರಿಂದ ಚಾಲನೆ
ಮೈಸೂರು ದಸರಾ 2026: ಗಜಪಡೆಗೆ ಸಚಿವ ಯತೀಂದ್ರರಿಂದ ಚಾಲನೆ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ ಸಚಿವ ನಾಗೇಂದ್ರ
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ ಸಚಿವ ನಾಗೇಂದ್ರ
ಬಿಡದಿ ಟೌನ್​ಶಿಪ್, ಹೈಕೋರ್ಟ್​ನಿಂದ ಯಾವುದೇ ಸಾಮಾನ್ಯ ತಡೆ ಇಲ್ಲ: ಪ್ರಾಧಿಕಾರ
ಬಿಡದಿ ಟೌನ್​ಶಿಪ್, ಹೈಕೋರ್ಟ್​ನಿಂದ ಯಾವುದೇ ಸಾಮಾನ್ಯ ತಡೆ ಇಲ್ಲ: ಪ್ರಾಧಿಕಾರ
ಯಶ್‌ಗೆ ವಿಶೇಷ ಸರ್ಪ್ರೈಸ್ ನೀಡಿದ ಮಂಗಳೂರಿನ ಅಭಿಮಾನಿ
ಯಶ್‌ಗೆ ವಿಶೇಷ ಸರ್ಪ್ರೈಸ್ ನೀಡಿದ ಮಂಗಳೂರಿನ ಅಭಿಮಾನಿ
ಯಶ್ ಹುಟ್ಟೂರು ಹಾಸನದಲ್ಲಿ ‘ಟಾಕ್ಸಿಕ್’ ಚಿತ್ರಕ್ಕೆ ಅದ್ದೂರಿ ಸ್ವಾಗತ
ಯಶ್ ಹುಟ್ಟೂರು ಹಾಸನದಲ್ಲಿ ‘ಟಾಕ್ಸಿಕ್’ ಚಿತ್ರಕ್ಕೆ ಅದ್ದೂರಿ ಸ್ವಾಗತ
ಬೀದರ್‌ನಲ್ಲಿ 'ಟಾಕ್ಸಿಕ್' ಅಬ್ಬರ; ರಾರಾಜಿಸುತ್ತಿದೆ ರಾಕಿ ಭಾಯ್ ಕಟೌಟ್​ಗಳು
ಬೀದರ್‌ನಲ್ಲಿ 'ಟಾಕ್ಸಿಕ್' ಅಬ್ಬರ; ರಾರಾಜಿಸುತ್ತಿದೆ ರಾಕಿ ಭಾಯ್ ಕಟೌಟ್​ಗಳು
ಚಿಕ್ಕಬಳ್ಳಾಪುರ: ಟಾಕ್ಸಿಕ್ ಕ್ರೇಜ್, ಯಶ್ ಅಭಿಮಾನಿಗಳಿಂದ ಅದ್ಧೂರಿ ಸಂಭ್ರಮ
ಚಿಕ್ಕಬಳ್ಳಾಪುರ: ಟಾಕ್ಸಿಕ್ ಕ್ರೇಜ್, ಯಶ್ ಅಭಿಮಾನಿಗಳಿಂದ ಅದ್ಧೂರಿ ಸಂಭ್ರಮ
ಟಾಕ್ಸಿಕ್ ರಿಲೀಸ್​; ಬೆಂಗಳೂರು ಥಿಯೇಟರ್ ಮುಂದೆ ಅಭಿಮಾನಿಗಳ ಸಂಭ್ರಮ
ಟಾಕ್ಸಿಕ್ ರಿಲೀಸ್​; ಬೆಂಗಳೂರು ಥಿಯೇಟರ್ ಮುಂದೆ ಅಭಿಮಾನಿಗಳ ಸಂಭ್ರಮ
'ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿದ್ದು ನಾನೇ' ಎಂದ ಮಾಜಿ ಸಿಎಂ!
'ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿದ್ದು ನಾನೇ' ಎಂದ ಮಾಜಿ ಸಿಎಂ!