Toxic First Half Review: ಅದ್ದೂರಿಯಾಗಿದೆ ‘ಟಾಕ್ಸಿಕ್’ ಮೊದಲಾರ್ಧ; ಏನೆಲ್ಲ ಇದೆ ನೋಡಿ..
Toxic Movie: ಗೀತು ಮೋಹನ್ದಾಸ್ ನಿರ್ದೇಶನ ಮಾಡಿರುವ ‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ ತೆರೆಕಂಡಿದೆ. ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಿ ಸಂಭ್ರಮಿಸಿದ್ದಾರೆ. ಕನ್ನಡದ ಈ ಸಿನಿಮಾ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ, ಜಾಗತಿಕ ಮಟ್ಟದಲ್ಲಿ ಬಿಡುಗಡೆ ಆಗಿದೆ. ಯಶ್ ನಟನೆಯ ಈ ಚಿತ್ರ ಸಖತ್ ಮಾಸ್ ಮೂಡಿಬಂದಿದೆ.

ಮುಖ್ಯಾಂಶಗಳು
- ಕನ್ನಡ, ಹಿಂದಿ ಮುಂತಾದ ಭಾಷೆಗಳಲ್ಲಿ ತೆರೆಕಂಡ ‘ಟಾಕ್ಸಿಕ್’ ಚಿತ್ರ.
- ಸಿಕ್ಕಾಪಟ್ಟೆ ಅದ್ದೂರಿಯಾಗಿ ಮೂಡಿಬಂದಿದೆ ‘ಟಾಕ್ಸಿಕ್’ ಸಿನಿಮಾದ ಪ್ರತಿ ಫ್ರೇಮ್.
- ಭರ್ಜರಿ ಆ್ಯಕ್ಷನ್ ಜೊತೆಗೆ ಅಭಿಮಾನಿಗಳನ್ನು ಸೆಳೆಯುತ್ತಿದೆ ಚಿತ್ರದ ಮೇಕಿಂಗ್.
ನಿರೀಕ್ಷೆಯಂತೆಯೇ ಭರ್ಜರಿಯಾಗಿ ‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆ ಆಗಿದೆ. ಭಾರಿ ಬಜೆಟ್ನಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾಗೆ ಮೊದಲ ದಿನವೇ ಜನರಿಂದ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಿಸಿದೆ. ಯಶ್ (Yash) ಅವರು ‘ಕೆಜಿಎಫ್: ಚಾಪ್ಟರ್ 2’ ಬಳಿಕ ದೊಡ್ಡ ಪರದೆಯಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಅವರ ಜೊತೆ ರುಕ್ಮಿಣಿ ವಸಂತ್, ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ ಮುಂತಾದ ಸ್ಟಾರ್ ಕಲಾವಿದರು ಅಭಿನಯಿಸಿರುವುದರಿಂದ ಚಿತ್ರದ ತೂಕ ಹೆಚ್ಚಿದೆ. ಇಂದು (ಆಗಸ್ಟ್ 26) ಮುಂಜಾನೆಯೇ ಹಲವು ಕಡೆಗಳಲ್ಲಿ ‘ಟಾಕ್ಸಿಕ್’ ಶೋ ಆರಂಭ ಆಗಿದೆ. ಸಿನಿಮಾದ ಫಸ್ಟ್ ಹಾಫ್ನಲ್ಲಿ ಏನೆಲ್ಲ ಇದೆ ಎಂಬುದು ಕೂಡ ಗೊತ್ತಾಗಿದೆ. ‘ಟಾಕ್ಸಿಕ್’ ಸಿನಿಮಾದ ಫಸ್ಟ್ ಹಾಫ್ ವಿಮರ್ಶೆ ಇಲ್ಲಿದೆ ಓದಿ..
- 1947 ಕಾಲದಿಂದ ಶುರುವಾಗುವ ಟಾಕ್ಸಿಕ್ ಕಥೆ. ಗೋವಾದ ಪೋರ್ಚುಗೀಸರ ಕಾಲಘಟ್ಟದಿಂದ ಸಿನಿಮಾ ಆರಂಭ.
- ಸಿಕ್ಕಾಪಟ್ಟೆ ಮಾಸ್ ಆಗಿದೆ ರಾಕಿಂಗ್ ಸ್ಟಾರ್ ಯಶ್ ಎಂಟ್ರಿ ಸೀನ್. ಯಶ್ ಜೊತೆ ಆ್ಯಕ್ಷನ್ ಮೆರೆದ ನಟಿ ನಯನತಾರ.
- ಟಾಕ್ಸಿಕ್ ಸಿನಿಮಾದ ಪ್ರತಿ ಹಂತದಲ್ಲಿ ಪಾತ್ರಗಳಿಗಿಂತ ಹೆಚ್ಚಾಗಿ ಗನ್‌ಗಳು ಸದ್ದು ಮಾಡುತ್ತವೆ. ಅಷ್ಟರಮಟ್ಟಿಗೆ ಆ್ಯಕ್ಷನ್ ಇದೆ.
- ಕಿಯಾರಾ ಅಡ್ವಾಣಿ ಪಾತ್ರದ ಎಂಟ್ರಿ ಬಳಿಕ ಟಾಕ್ಸಿಕ್ ಕಥೆಗೆ ಹೊಸ ತಿರುವು ಸಿಗುತ್ತದೆ. ಆ್ಯಕ್ಷನ್ ಜೊತೆ ಲವ್ ಟ್ರ್ಯಾಕ್ ಶುರು ಆಗುತ್ತೆ.
- ತಬಾಹಿ ಹಾಡು ಮೊದಲಾರ್ಧದಲ್ಲೇ ಇದೆ. ಹೊಡಿಬಡಿ ದೃಶ್ಯಗಳ ನಡುವೆ ಈ ಹಾಡು ರೊಮ್ಯಾಂಟಿಕ್ ರಿಲೀಫ್ ನೀಡುತ್ತದೆ.
- ಅದರ ಬೆನ್ನಲೇ ಬರುತ್ತದೆ ‘ಮನ ಮೋಹಕ’ ಹಾಡು. ಯಶ್ ಹಾಗೂ ತಾರಾ ಸುತಾರಿಯಾ ಕಾಂಬಿನೇಷನ್ ಚೆನ್ನಾಗಿ ಮೂಡಿಬಂದಿದೆ.
- ನಾಡಿಯಾ, ರಾಯ, ರೆಬಿಕಾ ಪಾತ್ರಗಳ ನಡುವೆ ತ್ರಿಕೋನ ಪ್ರೇಮಕಥೆ ಇದೆ. ಆ ಪ್ರೇಮಕಥೆಯ ಜೊತೆ ರಕ್ತದ ಓಕುಳಿ ಹರಿಯುತ್ತದೆ.
- ಲವ್ ಸ್ಟೋರಿ, ಗ್ಯಾಂಗ್‌ಸ್ಟರ್ ಡ್ರಾಮಾ ಮಾತ್ರವಲ್ಲದೇ ಅಕ್ಕ (ನಯನತಾರ) – ತಮ್ಮ (ಯಶ್) ನಡುವಿನ ಎಮೋಷನಲ್ ಕಥೆ ಹೈಲೈಟ್ ಆಗಿದೆ.
- ಮೊದಲಾರ್ಧ ಪೂರ್ತಿ ರಾಯ ಪಾತ್ರ ಆವರಿಸಿಕೊಂಡಿದೆ. ‘ಟಿಕೆಟ್’ ಪಾತ್ರದ ಅಬ್ಬರ ನೋಡಲು ದ್ವಿತೀಯಾರ್ಧಕ್ಕೆ ಕಾಯಬೇಕು.
Toxic Movie Release Live Stream
ಟಾಕ್ಸಿಕ್ ಸಿನಿಮಾ ರಿಲೀಸ್ ಲೈವ್ ಅಪ್ಡೇಟ್ಸ್ಗೆ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:58 am, Wed, 26 August 26




