‘ಟಾಕ್ಸಿಕ್’: ಹಿಂದೆಂದೂ ಕಾಣಿಸದ ಅವತಾರದಲ್ಲಿ ರುಕ್ಮಿಣಿ ವಸಂತ್

Rukmini Vasanth in Toxic: ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿರುವ ನಟಿಯರ ಪೋಸ್ಟರ್​ಗಳನ್ನು ಒಂದೊಂದಾಗಿ ಬಿಡುಗಡೆ ಮಾಡಲಾಗುತ್ತಿದೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಅವರುಗಳ ಪೋಸ್ಟರ್​​ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಇದೀಗ ನಟಿ ರುಕ್ಮಿಣಿ ವಸಂತ್ ಅವರ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ.

‘ಟಾಕ್ಸಿಕ್’: ಹಿಂದೆಂದೂ ಕಾಣಿಸದ ಅವತಾರದಲ್ಲಿ ರುಕ್ಮಿಣಿ ವಸಂತ್
Rukmini Vasanth

Updated on: Jan 06, 2026 | 11:16 AM

ಯಶ್ (Yash) ನಟಿಸಿ, ಸಹ ನಿರ್ಮಾಣ ಮಾಡುತ್ತಿರುವ ‘ಟಾಕ್ಸಿಕ್’ ಪ್ರಸ್ತುತ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ. ಮಾರ್ಚ್ 19 ರಂದು ಸಿನಿಮಾ ಬಿಡುಡಗೆ ಆಗಲಿದ್ದು, ಸಿನಿಮಾದ ಪ್ರಚಾರಕ್ಕೆ ನಿಧಾನಕ್ಕೆ ಚಾಲನೆ ನೀಡಲಾಗುತ್ತಿದೆ. ಇದರ ಭಾಗವಾಗಿ ಸಿನಿಮಾದಲ್ಲಿ ನಟಿಸಿರುವ ನಟಿಯರ ಪೋಸ್ಟರ್​ಗಳನ್ನು ಒಂದೊಂದಾಗಿ ಬಿಡುಗಡೆ ಮಾಡಲಾಗುತ್ತಿದೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಅವರುಗಳ ಪೋಸ್ಟರ್​​ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಇದೀಗ ನಟಿ ರುಕ್ಮಿಣಿ ವಸಂತ್ ಅವರ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ.

ಇಂದು (ಜನವರಿ 06) ರುಕ್ಮಿಣಿ ವಸಂತ್ ಅವರ ಕ್ಯಾರೆಕ್ಟರ್ ಪೋಸ್ಟರ್ ಅನ್ನು ನಟ ಯಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರುಕ್ಮಿಣಿ ಎಂದಿನಂತೆ ಅದ್ಭುತವಾಗಿ ಕಾಣುತ್ತಿದ್ದಾರೆ. ಪೋಸ್ಟರ್​​ನಲ್ಲಿ ತುಸು ಗ್ಲಾಮರಸ್ ಧಿರಿಸು ತೊಟ್ಟಿರುವ ರುಕ್ಮಿಣಿ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ನೋಡಿದರೆ ರುಕ್ಮಿಣಿ ಅವರದ್ದು ನೆಗೆಟಿವ್ ಶೇಡ್ ಇರಬಹುದಾದ ಪಾತ್ರವೇ ಎಂಬ ಅನುಮಾನವೂ ಸಹ ಮೂಡುತ್ತಿದೆ.

‘ಟಾಕ್ಸಿಕ್’ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ಅವರ ಪಾತ್ರದ ಹೆಸರು ಮೆಲಿಸಾ ಎಂದಾಗಿದೆ. ಯಾವುದೋ ಪಾರ್ಟಿಯೊಂದರ ಮಧ್ಯೆ ಬಲು ಗಂಭೀರವಾಗಿ ನಡೆದು ಬರುತ್ತಿದ್ದಾರೆ ರುಕ್ಮಿಣಿ ವಸಂತ್. ತಾರಾ ಸುತಾರಿಯಾ ಅವರ ಪಾತ್ರ ಕೈಯಲ್ಲಿ ಬಂದೂಕು ಹಿಡಿದಿದ್ದರೆ ರುಕ್ಮಿಣಿ ವಸಂತ್ ಕೈಯಲ್ಲಿ ಪರ್ಸ್ ಒಂದನ್ನು ಹಿಡಿದಿದ್ದಾರೆ. ರುಕ್ಮಿಣಿ ಅವರ ಪಾತ್ರ ರಫ್ ಆಂಡ್ ಟಫ್ ಅಲ್ಲದೇ ಇದ್ದರು ಬಲು ಗಂಭೀರವಾದ ಪಾತ್ರ ಎಂದು ಪೋಸ್ಟರ್​​ನಿಂದ ಊಹಿಸಬಹುದಾಗಿದೆ.

ಇದನ್ನೂ ಓದಿ:ಯಶ್ ಬಾಲ್ಯದಲ್ಲಿ ಹೇಗೆ ಕಾಣ್ತಿದ್ರು ನೋಡಿ; ಇಲ್ಲಿದೆ ಕ್ಯೂಟ್ ಫೋಟೋ

‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾಕ್ಕೆ ಕೆವಿಎನ್ ಬಂಡವಾಳ ಹೂಡಿದೆ. ಯಶ್ ಅವರು ತಮ್ಮ ಮಾನ್​​ಸ್ಟರ್ ಮೈಂಡ್​ ನಿರ್ಮಾಣ ಸಂಸ್ಥೆಯ ಮೂಲಕ ಸಹ ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಕೆಲ ವಿದೇಶಿ ತಂತ್ರಜ್ಞರು ಸಹ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:05 am, Tue, 6 January 26