‘ಟಾಕ್ಸಿಕ್’ ಗಾಗಿ ಕೆಲಸ ಮಾಡುತ್ತಿದೆ ಹಾಲಿವುಡ್​ನ ಖ್ಯಾತ ಸಂಸ್ಥೆ

Toxic Movie: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷೆಯ ಸಿನಿಮಾ ಎನಿಸಿಕೊಂಡಿದೆ. ‘ಟಾಕ್ಸಿಕ್’ ಸಿನಿಮಾಕ್ಕೆ ಹಾಲಿವುಡ್​ನ ಖ್ಯಾತ ಕಂಪೆನಿಯೊಂದು ವಿಎಫ್​ಎಕ್ಸ್ ಕೆಲಸ ಮಾಡಿಕೊಡಲಿದೆ.

‘ಟಾಕ್ಸಿಕ್’ ಗಾಗಿ ಕೆಲಸ ಮಾಡುತ್ತಿದೆ ಹಾಲಿವುಡ್​ನ ಖ್ಯಾತ ಸಂಸ್ಥೆ
Follow us
ಮಂಜುನಾಥ ಸಿ.
|

Updated on: Oct 23, 2024 | 12:14 PM

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರಿ ದೊಡ್ಡ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿದೆ. ಸಿನಿಮಾವನ್ನು ಹಾಲಿವುಡ್​ ಗುಣಮಟ್ಟದಲ್ಲಿ ತೆರೆಗೆ ತರಲು ಚಿತ್ರತಂಡ ಅವಿರತ ಶ್ರಮಿಸುತ್ತಿದೆ. ಸಿನಿಮಾದಲ್ಲಿ ಕನ್ನಡದ ಕಲಾವಿದರ ಜೊತೆಗೆ ಬೇರೆ ಬೇರೆ ಚಿತ್ರರಂಗದ ಖ್ಯಾತನಾಮ ನಟ-ನಟಿಯರು ಕೆಲಸ ಮಾಡುತ್ತಿದ್ದಾರೆ. ಕೆಲವು ವಿದೇಶಿ ನಟ-ನಟಿಯರು ಸಹ ಸಿನಿಮಾದಲ್ಲಿದ್ದಾರೆ. ಕೆಲವು ಹಾಲಿವುಡ್ ತಂತ್ರಜ್ಞರು ಸಹ ‘ಟಾಕ್ಸಿಕ್’ ಚಿತ್ರತಂಡದಲ್ಲಿದ್ದಾರೆ. ಜೊತೆಗೆ ಕೆಲವು ವಿದೇಶಿ ಸಂಸ್ಥೆಗಳು ‘ಟಾಕ್ಸಿಕ್’ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿವೆ.

ಹಾಲಿವುಡ್​ನ ಬ್ಲಾಕ್ ಬಸ್ಟರ್ ಸಿನಿಮಾಗಳಾದ ‘ಡೂನ್’, ‘ಇಂಟರ್ಸ್ಟೆಲ್ಲರ್’ ಇನ್ನೂ ಕೆಲವು ಐಕಾನಿಕ್, ಆಸ್ಕರ್ ವಿಜೇತ ಸಿನಿಮಾಕ್ಕೆ ವಿಎಫ್​ಎಕ್ಸ್ ನೀಡಿರುವ ‘ಡಿಎನ್​ಇಜಿ’ ಸಂಸ್ಥೆ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಕ್ಕೆ ವಿಎಫ್​ಎಕ್ಸ್ ನೀಡುತ್ತಿದೆ. 1998 ರಲ್ಲಿ ಪ್ರಾರಂಭವಾದ ಈ ಬ್ರಿಟೀಷ್ ಮೂಲದ ಕಂಪೆನಿ ಹಾಲಿವುಡ್​ನ ಹಲವು ಅತ್ಯುತ್ತಮ ಸಿನಿಮಾಗಳಿಗೆ ವಿಎಫ್​ಎಕ್ಸ್​ ಮಾಡಿಕೊಟ್ಟಿದೆ. ಈ ವರೆಗೆ ಸುಮಾರು 2000 ಕ್ಕೂ ಹೆಚ್ಚು ಸಿನಿಮಾಗಳಿಗೆ ಡಿಎನ್​ಇಜಿ ಸಂಸ್ಥೆ ಕೆಲಸ ಮಾಡಿದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಸಾಕಷ್ಟು ವಿಎಫ್​ಎಕ್ಸ್ ದೃಶ್ಯಗಳಿದ್ದು, ಅವುಗಳನ್ನು ಅತ್ಯುತ್ತಮ ಸಂಸ್ಥೆಯಿಂದಲೇ ಮಾಡಿಸುವ ಉದ್ದೇಶದಿಂದಾಗಿ ಡಿಎನ್​ಇಜಿ ಸಂಸ್ಥೆಯ ಸಹಾಯ ಪಡೆಯಲಾಗಿತ್ತಿದೆ. ಡಿಎನ್​ಇಜಿ ಸಂಸ್ಥೆಗೆ ಭಾರಿ ದೊಡ್ಡ ಮೊತ್ತದ ಹಣವನ್ನು ಸಂಭಾವನೆಯಾಗಿ ಚಿತ್ರತಂಡ ನೀಡುತ್ತಿದೆ. ಕೆಲವು ಅತ್ಯುತ್ತಮ ವಿಷ್ಯುಲ್ ಎಫೆಕ್ಟ್ ದೃಶ್ಯಗಳನ್ನು ‘ಟಾಕ್ಸಿಕ್’ ಸಿನಿಮಾದಲ್ಲಿ ನೋಡಲು ಸಿಗುವುದು ಖಾತ್ರಿ.

ಇದನ್ನೂ ಓದಿ:‘ಅಂದುಕೊಂಡಿದ್ದಕ್ಕಿಂತಲೂ ತಡವಾಗುತ್ತೆ’; ‘ಟಾಕ್ಸಿಕ್’ ಬಗ್ಗೆ ಯಶ್ ಕಡೆಯಿಂದ ಬ್ಯಾಡ್ ನ್ಯೂಸ್

ಡಿಎನ್​ಇಜಿ ಸಂಸ್ಥೆ ಖ್ಯಾತ ನಿರ್ದೇಶಕ ಕ್ರಿಸ್ಟೊಫರ್ ನೋಲನ್​ರ ಬಹುತೇಕ ಎಲ್ಲ ಸಿನಿಮಾಗಳಿಗೂ ಕೆಲಸ ಮಾಡಿದೆ. ನೋಲನ್ ನಿರ್ದೇಶನದ, ‘ಇಂಟರ್ಸ್ಟೆಲ್ಲರ್’, ‘ಇನ್ಸೆಪ್ಷನ್’, ‘ಟೆನೆಟ್’, ‘ದಿ ಡಾರ್ಕ್ ನೈಟ್’, ‘ಡಂಕಿರ್ಕ್’, ‘ಆಪನ್​ಹೈಮರ್’ ಸಿನಿಮಾಗಳಿಗೆ ವಿಎಫ್​ಎಕ್ಸ್​ ಮಾಡಿದೆ. ನೋಲನ್ ಸಿನಿಮಾಗಳ ಹೊರತಾಗಿ ‘ಡೂನ್’, ‘ಹ್ಯಾರಿ ಪಾಟರ್’, ‘ಬ್ಲಾಕ್ ಮಿರರ್ಸ್’, ‘ಬ್ಲೇಡ್ ರನ್ನರ್’, ‘ಚೆರ್ನೊಬೆಲ್’, ‘ಮಿಷನ್ ಇಂಪಾಸಿಬಲ್’, ‘ಡೈ ಅನದರ್ ಡೇ’, ‘ಡೈ ಹಾರ್ಡ್’ ಹಲವು ಜೇಮ್ಸ್ ಬಾಂಡ್ ಸಿನಿಮಾಗಳು. ಫಾಸ್ಟ್ ಆಂಡ್ ಫ್ಯೂರಿಯಸ್ ಸರಣಿಯ ಸಿನಿಮಾಗಳು, ಮೇಟ್ರಿಕ್ಸ್ ಸಿನಿಮಾ ಸರಣಿಗಳಿಗೂ ಸಹ ಈ ಸಂಸ್ಥೆ ಕೆಲಸ ಮಾಡಿದೆ. ಆಸ್ಕರ್ ಸೇರಿದಂತೆ ಹಲವು ಪ್ರಶಸ್ತಿಗಳಿಗೂ ಸಹ ಈ ಸಿನಿಮಾ ಭಾಜನವಾಗಿದೆ.

‘ಟಾಕ್ಸಿಕ್’ ಸಿನಿಮಾದ ಆಕ್ಷನ್ ಅನ್ನು ಹಾಲಿವುಡ್​ನ ಖ್ಯಾತ ಫೈಟ್ ಕೊರಿಯೋಗ್ರಾಫರ್ ಜೆಜೆ ಪೆರ್ರಿ ಕೆಲಸ ಮಾಡಲಿದ್ದಾರೆ. ಕೆಲವು ಅತ್ಯುತ್ತಮ ಆಕ್ಷನ್ ದೃಶ್ಯಗಳು ‘ಟಾಕ್ಸಿಕ್’ ಸಿನಿಮಾದಲ್ಲಿ ಇರಲಿವೆ. ಸಿನಿಮಾದಲ್ಲಿ ನಯನತಾರಾ, ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಸಿನಿಮಾ 2025ರ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ ಎನ್ನಲಾಗಿತ್ತು. ಆದರೆ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಲಿದೆ ಎಂದು ಸ್ವತಃ ಯಶ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ