Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಂದುಕೊಂಡಿದ್ದಕ್ಕಿಂತಲೂ ತಡವಾಗುತ್ತೆ’; ‘ಟಾಕ್ಸಿಕ್’ ಬಗ್ಗೆ ಯಶ್ ಕಡೆಯಿಂದ ಬ್ಯಾಡ್ ನ್ಯೂಸ್

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಸಿನಿಮಾ ಮುಂದಿನ ವರ್ಷ ಏಪ್ರಿಲ್ ನಲ್ಲಿ ಬಿಡುಗಡೆ ಆಗಲಿದೆ ಎಂದು ಘೋಷಿಸಲಾಗಿತ್ತು. ಆದರೆ ಘೋಷಿಸಿದ ದಿನಾಂಕದಂದು ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂದು ಯಶ್ ಹೇಳಿಕೊಂಡಿದ್ದಾರೆ.

‘ಅಂದುಕೊಂಡಿದ್ದಕ್ಕಿಂತಲೂ ತಡವಾಗುತ್ತೆ’; ‘ಟಾಕ್ಸಿಕ್’ ಬಗ್ಗೆ ಯಶ್ ಕಡೆಯಿಂದ ಬ್ಯಾಡ್ ನ್ಯೂಸ್
ಟಾಕ್ಸಿಕ್ ಸಿನಿಮಾ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Oct 23, 2024 | 10:29 AM

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಹೀರೋ ಆಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮಲಯಾಳಂನ ಗೀತು ಮೋಹನ್ ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಚಿತ್ರ 2025ರ ಏಪ್ರಿಲ್​ನಲ್ಲಿ ಬಿಡುಗಡೆ ಮಾಡೋದಾಗಿ ತಂಡದವರು ಹೇಳಿಕೊಂಡಿದ್ದರು. ಆದರೆ, ಈಗ ಆಗಿರೋದು ಕೇವಲ 1 ತಿಂಗಳ ಶೂಟ್ ಮಾತ್ರ. ಹೀಗಾಗಿ, ಸಿನಿಮಾ ರಿಲೀಸ್ ಮುಂದಕ್ಕೆ ಹೋಗೋತ್ತದೆಯೇ ಎನ್ನುವ ಪ್ರಶ್ನೆ ಮೂಡೋದು ಸಹಜ. ಇದನ್ನು ಹೌದು ಎಂದು ಯಶ್ ಒಪ್ಪಿಕೊಂಡಿದ್ದಾರೆ.

2025ರ ಏಪ್ರಿಲ್ 10ರಂದು ‘ಟಾಕ್ಸಿಕ್’ ರಿಲೀಸ್ ಮಾಡೋದಾಗಿ ತಂಡ ಹೇಳಿಕೊಂಡಿತ್ತು. ಆದರೆ, ಬಿಗ್ ಬಜೆಟ್ ಚಿತ್ರಗಳಲ್ಲಿ ಅಂದುಕೊಂಡ ದಿನಾಂಕದಂದು ಸಿನಿಮಾ ರಿಲೀಸ್ ಮಾಡೋಕೆ ಸಾಧ್ಯವಾಗುವುದೇ ಇಲ್ಲ. ಒಂದೆರಡು ಬಾರಿ ಸಿನಿಮಾ ರಿಲೀಸ್​ ಅನ್ನು ಮುಂದಕ್ಕೆ ಹಾಕಿದ ಬಳಿಕವೇ ಅದು ರಿಲೀಸ್ ಆಗುತ್ತದೆ. ‘ಪುಷ್ಪ 2’, ‘ಕಲ್ಕಿ 2898 ಎಡಿ’ ಸೇರಿ ಅನೇಕವು ಈ ಸಾಲಿನಲ್ಲಿ ಇವೆ. ಈಗ ಈ ಸಾಲಿಗೆ ‘ಟಾಕ್ಸಿಕ್’ ಕೂಡ ಸೇರ್ಪಡೆ ಆಗುತ್ತಿದೆ.

‘ನಾವು ಸ್ವಲ್ಪ ಮುಂಚಿತವಾಗಿ ಸಿನಿಮಾ ಶೂಟ್ ಪ್ರಾರಂಭಿಸಬೇಕಾಗಿತ್ತು. ಆದರೆ ಅಂದುಕೊಂಡಂತೆ ನಡೆಯಲಿಲ್ಲ. ಡೇಟ್​ ಪ್ರಾಬ್ಲಂ ಆಯಿತು. ಇದು ನಿರೀಕ್ಷೆಗಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡಿತು. ಅಂದುಕೊಂಡ ದಿನಾಂಕದಂದು ನಾವು ಬರಲು ಸಾಧ್ಯವಿಲ್ಲ’ ಎಂದು ಯಶ್ ಹೇಳಿದ್ದಾರೆ.

ಇದನ್ನೂ ಓದಿ:‘ಕೆಜಿಎಫ್ 3’ ಯಾವಾಗ ಎಂದು ಯಶ್​ಗೆ ಪ್ರಶ್ನೆ ಮಾಡಿದ ಶುಭ್​ಮನ್​ ಗಿಲ್; ಉತ್ತರಿಸಿದ ರಾಕಿಂಗ್ ಸ್ಟಾರ್

‘ವಿಶ್ವಾಸಾರ್ಹತೆ ಮುಖ್ಯ. ನಾವು ದಿನಾಂಕ ಘೋಷಿಸಿ ಅಂದು ರಿಲೀಸ್ ಮಾಡಲು ಸಾಧ್ಯವಾಗಿಲ್ಲ ಎಂಬುದು ಹಿಂದೆಂದೂ ಸಂಭವಿಸಿಲ್ಲ. ಇದೇ ಮೊದಲ ಸಲ. ಈ ಚಿತ್ರದಲ್ಲಿ ಎಲ್ಲರನ್ನೂ ಒಟ್ಟಿಗೆ ಸೇರಿಸುವುದು ಸ್ವಲ್ಪ ಕಷ್ಟ’ ಎಂದಿದ್ದಾರೆ ಯಶ್. ದೊಡ್ಡ ಪಾತ್ರವರ್ಗದಿಂದ ತಂಡ ತೊಂದರೆ ಅನುಭವಿಸುತ್ತಿದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದ ‘ಕೆವಿಎನ್’ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ‘ರಾಮಾಯಣ’ ಚಿತ್ರದಲ್ಲೂ ಯಶ್ ಅವರು ಬ್ಯುಸಿ ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ