ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಕಥೆ ಬಗ್ಗೆ ಸಿಕ್ತು ದೊಡ್ಡ ಅಪ್​​ಡೇಟ್

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಒಂದು ತಿಂಗಳಿರುವಾಗಲೂ ಪ್ರಚಾರವಿಲ್ಲ. ಈ ಮಧ್ಯೆ, 1940-70ರ ಗೋವಾ ಕ್ರೈಮ್ ಕಥೆಯ ಕುರಿತು ಕಥೆ ಸೋರಿಕೆಯಾಗಿದೆ. ಮಾರ್ಚ್ 19ರಂದು ಬಿಡುಗಡೆಯಾಗುವ ಈ ಚಿತ್ರಕ್ಕೆ 'ಧುರಂಧರ್ 2' ಸ್ಪರ್ಧೆಯೊಡ್ಡಲಿದೆ. ಯಶ್ ಎದುರು ಗೆಲುವು ಕಷ್ಟ ಎನ್ನಲಾಗುತ್ತಿದೆ. ಮಾರ್ಚ್ ಮೊದಲ ವಾರದಲ್ಲಿ ಟ್ರೇಲರ್ ಬರಲಿದೆ.

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಕಥೆ ಬಗ್ಗೆ ಸಿಕ್ತು ದೊಡ್ಡ ಅಪ್​​ಡೇಟ್
ಯಶ್

Updated on: Feb 18, 2026 | 1:31 PM

‘ಟಾಕ್ಸಿಕ್’ ಸಿನಿಮಾ ರಿಲೀಸ್​​ಗೆ ಇನ್ನು ಒಂದು ತಿಂಗಳು ಕೂಡ ಬಾಕಿ ಉಳಿದಿಲ್ಲ. ಈ ಚಿತ್ರದ ಪ್ರಚಾರ ಕಾರ್ಯ ಇನ್ನೂ ಆರಂಭ ಆಗಿಲ್ಲ ಎಂಬ ಬೇಸರ ಯಶ್ ಅಭಿಮಾನಿಗಳಿಗೆ ಇದೆ. ಈ ಮಧ್ಯೆ ಸಿನಿಮಾದ ಕಥೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಒಂದಿ ಹರಿದಾಡುತ್ತಿದೆ. ಸಿನಿಮಾದ ಥೀಮ್ ಯಾವ ರೀತಿ ಇರಬಹುದು ಎಂಬ ಕುತೂಹಲಕ್ಕೆ ತೆರೆ ಬಿದ್ದಂತೆ ಆಗಿದೆ.

‘ಟಾಕ್ಸಿಕ್’ ಸಿನಿಮಾದ ಕಥೆಯ ಬಗ್ಗೆ ಫಾರ್​ ಫಿಲ್ಮ್ಸ್ ಕೋ ಎಲ್​​ಎಲ್​ಎಲ್​ಸಿ ಎಂಬುವವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಟಾಕ್ಸಿಕ್’ ಸಿನಿಮಾ 1940-70ರ ಅವಧಿಯಲ್ಲಿ ಗೋವಾದಲ್ಲಿ ನಡೆಯುವ ಕಥೆಯಂತೆ. ಕ್ರೈಮ್ ಲೋಕವನ್ನು ಹಿಂಸೆ, ಭಯ ಮೊದಲಾದ ವಿಷಯಗಳ ಮೂಲಕ ಕಟ್ಟುವ ಕಥೆಯನ್ನು ಈ ಸಿನಿಮಾ ಹೊಂದಿದೆ ಎಂದು ಹೇಳಲಾಗುತ್ತಾ ಇದೆ.

ಸಾಮಾನ್ಯವಾಗಿ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಒಂದಷ್ಟು ಥಿಯರಿಗಳು ಹುಟ್ಟಿಕೊಳ್ಳೋದು ಸಾಮಾನ್ಯ. ಈಗ ‘ಟಾಕ್ಸಿಕ್’ ವಿಷಯದಲ್ಲೂ ಹೀಗೆಯೇ ಆಗಿರಬಹುದು ಎಂಬುದು ಕೆಲವರ ಊಹೆ. ‘ಟಾಕ್ಸಿಕ್’ ಟ್ರೇಲರ್ ರಿಲೀಸ್ ಆದ ಬಳಿಕವೇ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಮಾರ್ಚ್ ಮೊದಲ ವಾರದಲ್ಲಿ ಟಾಕ್ಸಿಕ್ ಟ್ರೇಲರ್ ಬರಲಿದೆ.

ಮಾರ್ಚ್ 19ರಂದು ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಎದುರು ‘ಧುರಂಧರ್ 2’ ಸಿನಿಮಾ ರಿಲೀಸ್ ಆಗುತ್ತಿದೆ. ಯಶ್ ಎದುರು ರಿಲೀಸ್ ಆಗಿ ಗೆಲುವು ಸಾಧಿಸಿದವರೇ ಇಲ್ಲ ಎಂದರೂ ತಪ್ಪಾಗಲಾರದು. ಶಾರುಖ್ ಖಾನ್ (ಝೀರೋ), ದಳಪತಿ ವಿಜಯ್ (ಬೀಸ್ಟ್​) ಈ ಮೊದಲು ಯಶ್ ಸಿನಿಮಾ ಎದುರು ಬಂದು ಮಂಡಿ ಊರಿದ್ದಾರೆ. ಇದೇ ಪರಿಸ್ಥಿತಿ ‘ಧುರಂಧರ್ 2’ ಚಿತ್ರಕ್ಕೂ ಬರಲಿದೆ ಎಂಬ ಮಾತು ಕೇಳಿ ಬಂದಿವೆ.

‘ಟಾಕ್ಸಿಕ್’ ಸಿನಿಮಾನ ಮಲಯಾಳಂ ಗೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕಿಯಾರಾ ಅಡ್ವಾಣಿ,ರುಕ್ಮಿಣಿ ವಸಂತ್, ಹುಮಾ ಖುರೇಶಿ, ನಯನತಾರಾ, ತಾರಾ ಸುತಾರಿಯಾ ಮೊದಲಾದವರು ನಟಿಸಿದ್ದಾರೆ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us