ಮತ್ತೆ ಖಾಕಿ ತೊಟ್ಟು ಅಬ್ಬರಿಸ್ತಿದ್ದಾರೆ ಸೂಪರ್​ಸ್ಟಾರ್, ವಿಮಾನದಲ್ಲೂ ಅಬ್ಬರಿಸಿದ ತಲೈವಾ ಪೋಸ್ಟರ್

ಮತ್ತೆ ಖಾಕಿ ತೊಟ್ಟು ಅಬ್ಬರಿಸ್ತಿದ್ದಾರೆ ಸೂಪರ್​ಸ್ಟಾರ್, ವಿಮಾನದಲ್ಲೂ ಅಬ್ಬರಿಸಿದ ತಲೈವಾ ಪೋಸ್ಟರ್

ತಲೈವಾ ಸೂಪರ್​ ಸ್ಟಾರ್​ ರಜನಿಕಾಂತ್ ಅಂದ್ರೇನೆ ಒಂದು ಕ್ರೇಜ್​. ಅದ್ರಲ್ಲೂ ತಲೈವಾನ ಸಿನಿಮಾ ಬರ್ತಿದೆ ಅಂದ್ರೆ ಅಭಿಮಾನಿಗಳ ಕ್ರೇಜ್​ಗೆ ಎಲ್ಲೆ ಇರೋದೇ ಇಲ್ಲ. ಅಷ್ಟರ ಮಟ್ಟಿಗೆ ರಜನಿ ಫ್ಯಾನ್ಸ್ ಸಂಭ್ರಮ ಪಡ್ತಾರೆ. ಅದು ರಜನಿಯ ದರ್ಬಾರ್​ ಸಿನಿಮಾ ವಿಚಾರದಲ್ಲೂ ನಿಜ ಆಗಿದೆ.

ಸ್ಟೈಲ್ ಕಿಂಗ್, ಸೂಪರ್​ಸ್ಟಾರ್ ರಜನಿಕಾಂತ್ ಸಿನಿಮಾ ಅಂದ್ರೆ ಅಭಿಮಾನಿಗಳ ಪಾಲಿಗೆ ಹಬ್ಬವೋ ಹಬ್ಬ. ಅದ್ರಲ್ಲೂ ಖಾಕಿ ಪಾತ್ರದಲ್ಲಿ ಖಡಕ್​ ಲುಕ್​ನಲ್ಲಿ ಕಾಣಿಸಿಕೊಂಡ್ರೆ ಅದರ ಖದರ್​ ಬೇರೆಯೇ ಇರುತ್ತೆ. ಸದ್ಯ ಹಲವು ವರ್ಷಗಳ ಬಳಿಕ ಖಾಕಿ ತೊಟ್ಟು ದರ್ಬಾರ್ ನಡೆಸೋಕೆ ತಲೈವಾ ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಮತ್ತು ಟ್ರೇಲರ್ ಹಾಗೂ ಟೀಸರ್​ನಿಂದಲೇ ರಜನಿಯ ಹವಾ ಜೋರಾಗಿದೆ.

ರಜನಿಯ ದರ್ಬಾರ್ ಪ್ರಚಾರದ ಅಬ್ಬರ ಯಾವ ಮಟ್ಟಿಗೆ ಇದೆ ಅಂದ್ರೆ, ತಲೈವಾ ಕಲರವ ಆಗಸಕ್ಕೂ ಮುಟ್ಟಿದೆ. ಹೌದು, ದರ್ಬಾರ್ ಸಿನಿಮಾದ ಪೋಸ್ಟರ್​​ಗಳು ಆಕಾಶದಲ್ಲಿ ತೇಲಾಡ್ತಿವೆ. ವಿಮಾನದ ಮೇಲೆ ದರ್ಬಾರ್​ ಸಿನಿಮಾ ಪೋಸ್ಟರ್​ಗಳನ್ನ ಹಾಕಲಾಗಿದೆ. ಈ ಮೂಲಕ ರಜನಿಕಾಂತ್​ ಸಿನಿಮಾದ ಪ್ರಮೋಷನ್​ನ ಒಂದು ಹಂತ ಮೇಲೆ ಕೊಂಡೊಯ್ದಿದೆ ಚಿತ್ರತಂಡ.

ಈ ಹಿಂದೆ ಕಬಾಲಿ ಸಿನಿಮಾ ತೆರೆಗೆ ಬಂದಾಗಲೂ ಹೀಗೆ ಆಗಿತ್ತು. ಕಾರು, ಬೈಕ್​, ಆಟೋರಿಕ್ಷಾದಿಂದ ಹಿಡಿದು, ವಿಮಾನದ ಮೇಲೂ ಹವಾ ಎಬ್ಬಿಸಿತ್ತು. ಈಗ ಮತ್ತದೇ ಕ್ರೇಜ್​ ಮರುಕಳಿಸಿದೆ. ಸದ್ಯ ಈ ಪೊಸ್ಟರ್​ಗಳನ್ನ ಸಂಗೀತ ನಿರ್ದೇಶಕ ಅನಿರುದ್ಧ್ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ದರ್ಬಾರ್​ ಪೋಸ್ಟರ್​ ಇರೋ ವಿಮಾನಗಳ ಫೊಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿವೆ. ರಜನಿ ದರ್ಬಾರ್​ ಕಂಡು ಅಭಿಮಾನಿಗಳು ದಂಗಾಗಿ ಹೋಗಿದ್ದಾರೆ.

ಎ.ಆರ್.​ ಮುರುಗದಾಸ್​ ನಿರ್ದೇಶನದಲ್ಲಿ ರಜನಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ, ಜನವರಿ 9ರಂದು ವಿಶ್ವಾದ್ಯಂತ ರಜನಿಕಾಂತ್​ ದರ್ಬಾರ್​ ತೆರೆ ಮೇಲೆ ಶುರುವಾಗಲಿದೆ. ನಯನ​ತಾರಾ ಮತ್ತು ರಜನಿಕಾಂತ್​ ಜೋಡಿ ಹೇಗಿರಲಿದೆ ಅನ್ನೋ ಕುತೂಹಲಕ್ಕೂ ಅಂದೇ ತೆರೆಬೀಳಲಿದೆ.

 

Click on your DTH Provider to Add TV9 Kannada