Tv9 Facebook Live | ಕನ್ನಡ ಸಿನಿಮಾ OTT ಪ್ಲಾಟ್​ಫಾರ್ಮ್​ಗಳಲ್ಲಿ ವಿಫಲವಾಗಲು ಏನು ಕಾರಣ?

ಹಿಂದಿ ಮತ್ತು ಇಂಗ್ಲಿಷ್ ಚಿತ್ರ ಜಗತ್ತು ಒಟಿಟಿಗೆ ಹೋಗಿ ಹಣ ಮಾಡಿಕೊಂಡಷ್ಟು ಸ್ಯಾಂಡಲ್​ವುಡ್​ನಲ್ಲಿ ಆಗಲಿಲ್ಲ. ಇದಕ್ಕೇನು ಕಾರಣ? ಸ್ಯಾಂಡಲ್​ವುಡ್ ಈ ಹೊಸ ಜಗತ್ತಿನಲ್ಲಿ ಯಶಸ್ಸು ಗಳಿಸಲು ವಿಫಲವಾಯ್ತೇ?

Tv9 Facebook Live | ಕನ್ನಡ ಸಿನಿಮಾ OTT ಪ್ಲಾಟ್​ಫಾರ್ಮ್​ಗಳಲ್ಲಿ ವಿಫಲವಾಗಲು ಏನು ಕಾರಣ?
ಹಿರಿಯ ಪತ್ರಕರ್ತ ಶರಣು ಹುಲ್ಲೂರು , ನಟಿ ಅನಿತಾ ಭಟ್, ನಿರ್ದೇಶಕ ಪವನ್ ಒಡೆಯರ್ .
Follow us
preethi shettigar
|

Updated on:Dec 24, 2020 | 6:19 PM

ಬೆಂಗಳೂರು: ಕೋವಿಡ್ ಲಾಕ್​ಡೌನ್ ಮುಗಿದು ಕರ್ನಾಟಕದಲ್ಲಿ ಚಿತ್ರಮಂದಿರಗಳು ತೆರೆದ ಮೇಲೂ ಜನರು ಕಾಣುತ್ತಿಲ್ಲ ಎನ್ನುವುದು ಎಷ್ಟರಮಟ್ಟಿಗೆ ನಿಜವೋ ಅಷ್ಟೇ ನಿಜ ಜನರು ಒಟಿಟಿ ಪ್ಲಾಟ್​ಫಾರ್ಮ್​ಗಳಿಗೆ ವಾಲುತ್ತಿದ್ದಾರೆ ಎನ್ನುವುದು. ಹಾಗಿದ್ದರೆ ಸ್ಯಾಂಡಲ್​ವುಡ್​ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಕಂಡರು ಯಶಸ್ಸನ್ನು ಪಡೆಯುವಲ್ಲಿ ವಿಫಲವಾಗುತ್ತಿದೇಯೇ ಎಂಬ ಪ್ರಶ್ನೆ ಮೂಡುವುದು ಸಹಜ ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಹೌದು, ಕೊರೊನಾ ಕಾಲದಲ್ಲಿ ಚಿತ್ರಮಂದಿರಗಳು ಮುಚ್ಚಿದ್ದು, ಸಾಕಷ್ಟು ಸಿನಿಮಾಗಳು ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಬಿಡುಗಡೆಯಾದವು. ಆದರೆ ಹಿಂದಿ ಮತ್ತು ಇಂಗ್ಲಿಷ್ ಚಿತ್ರ ಜಗತ್ತು ಒಟಿಟಿಗೆ ಹೋಗಿ ಹಣ ಮಾಡಿಕೊಂಡಷ್ಟು ಸ್ಯಾಂಡಲ್​ವುಡ್​ನಲ್ಲಿ ಆಗಲಿಲ್ಲ. ಇದಕ್ಕೆ ಪ್ರೇಕ್ಷಕರು ಬೇರೆ ಭಾಷೆಯ ಕಡೆಗೆ ವಾಲಿರುವುದು ಒಂದು ಕಾರಣವಾದರೆ ಇನ್ನೊಂದು ಕಾರಣ ಕನ್ನಡ ಚಿತ್ರರಂಗ ಒಟಿಟಿಗಳಿಗೆ ಈಗಷ್ಟೇ ಮುಖ ಮಾಡಿವೆ ಎನ್ನುವುದು. ಹಾಗಿದ್ದರೆ ಸ್ಯಾಂಡಲ್ ವುಡ್ ಈ ಹೊಸ ಜಗತ್ತಿನಲ್ಲಿ ಯಶಸ್ಸು ಗಳಿಸಲು ವಿಫಲವಾಯ್ತೇ?

‘ಟಿವಿ9 ಕನ್ನಡ ಡಿಜಿಟಲ್’ ಗುರುವಾರ ನಡೆಸಿದ ಫೇಸ್​ಬುಕ್ ಲೈವ್​ ಸಂವಾದದಲ್ಲಿ ಇದೇ ವಿಷಯವನ್ನು ಚರ್ಚಿಸಲಾಯಿತು. ಹಿರಿಯ ಪತ್ರಕರ್ತ ಶರಣು ಹಲ್ಲೂರು, ನಟಿ ಅನಿತಾ ಭಟ್, ನಿರ್ದೇಶಕ ಪವನ್ ಒಡೆಯರ್ ಸಂವಾದದಲ್ಲಿ ಪಾಲ್ಗೊಂಡಿದ್ದರು. ಆ್ಯಂಕರ್ ಸೌಮ್ಯಾ ಹೆಗಡೆ ಸಂವಾದ ನಿರ್ವಹಿಸಿದರು.

ಕನ್ನಡ ಚಿತ್ರರಂಗಕ್ಕಿದು ಸವಾಲು: ಪವನ್ ಒಡೆಯರ್

ಸಂವಾದದಲ್ಲಿ ಮಾತನಾಡಿದ ನಿರ್ದೇಶಕ ಪವನ್ ಒಡೆಯರ್, ‘ಒಟಿಟಿ ಅಷ್ಟೇ ಅಲ್ಲ ಚಿತ್ರಮಂದಿರಗಳಲ್ಲೂ ಕೂಡ ಈ ರೀತಿಯ ಸಮಸ್ಯೆ ಇತ್ತು. ಹಿಂದಿ ಮತ್ತು ತೆಲುಗು ಸಿನಿಮಾಗಳಿಗೆ ಸಿಗುವ ಪ್ರಾಶಸ್ತ್ಯ ನಮಗೆ ಸಿಗಲಿಲ್ಲ ಎನ್ನುವ ಕಲ್ಪನೆ ಒಂದು ಕಡೆ ಇದ್ದರೆ, ಇನ್ನೊಂದು ಕಡೆ ನಾವು ಮಾಡುವ ಸಿನಿಮಾದ ಮಾದರಿಗಳು ಜನರಿಗೆ ಬಹುಶಃ ಇಷ್ಟವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಬಹಳಷ್ಟು ಅಪ್​ಡೆಟ್ ಆಗಬೇಕು ಅಂದರೆ ಬೇರೆ ಭಾಷಾ ಸಿನಿಮಾಗಳು ವಿಷಯ ಅಧಾರಿತವಾಗಿರುತ್ತದೆ ಆದರೆ ಇಲ್ಲಿನ ಸಿನಿಮಾಗಳು ಸ್ಟಾರ್​ಗಳ ಮೇಲೆ ಹೆಚ್ಚು ಗಮನ ಹರಿಸುವ ಸಿನಿಮಾಗಳಾಗಿರುತ್ತದೆ ಇದು ಕೂಡ ನಮ್ಮ ಸಿನಿಮಾಗಳ ಜನಪ್ರೀಯತೆಗೆ ದೊಡ್ಡ ಏಟು ನೀಡುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಕೊರೊನಾ ಸಂದರ್ಭದಲ್ಲಿ ಜನ ಒಟಿಟಿಗಳತ್ತ ವಾಲಿದರು. ಇದರಿಂದ ಜನರ ಅಂಗೈಯಲ್ಲಿ ವಿಶ್ವದ ಎಲ್ಲಾ ಸಿನಿಮಾಗಳು ಸಿಗುವಂತಾಯ್ತು. ಆಗ ಜನರಿಗೆ ಕನ್ನಡ ಸಿನಿಮಾಗಳಿಗಿಂತ ಬೇರೆ ಸಿನಿಮಾಗಳು ಇಷ್ಟವಾದ ಸಾಧ್ಯತೆಗಳನ್ನು ತಳ್ಳಿಹಾಕಲು ಅಗುವುದಿಲ್ಲ. ಇದು ನಮಗೆ ಒಂದು ರೀತಿಯ ಸವಾಲು, ಇದನ್ನು ಎದುರಿಸಲು ನಾವು ಪ್ರಯತ್ನ ಪಡುತ್ತಿದ್ದೇವೆ. ನಿಧಾನವಾಗಿ ತಕ್ಕಮಟ್ಟಿಗೆ ಯಶಸ್ಸನ್ನೂ ಕಾಣುತ್ತಿದ್ದೇವೆ. ಚಿತ್ರಮಂದಿರಕ್ಕೆ ಒಟಿಟಿಯಲ್ಲಿ ಯಾವುದೇ ನಿರ್ಬಂಧಗಳಿಲ್ಲ, ಹೀಗಾಗಿ ಹೆಚ್ಚು ಜನ ಅದರ ಕಡೆ ಗಮನ ಹರಿಸುತ್ತಿದ್ದಾರೆ. ಹಾಗೆ ಇದರಲ್ಲಿ ಕೆಲವು ಕಾರ್ಯತಂತ್ರವನ್ನು ಕೂಡ ಮಾಡುತ್ತಾರೆ. ಅದರಲ್ಲೂ ಮುಖ್ಯವಾಗಿ ಸರಣಿಗಳ ವಿಷಯಕ್ಕೆ ಬಂದಾಗ ಕೆಲವು ಕಾರ್ಯತಂತ್ರಗಳ ಅಗತ್ಯವಿದೆ. ಉದಾ: ಸ್ಕ್ಯಾಮ್ 1992 ಸರಣಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಮಾಡಿದ ಗಿಮಿಕ್ ಜನರನ್ನು ಸೆಳೆಯುವಲ್ಲಿ ಮುಖ್ಯ ಪಾತ್ರ ವಹಿಸಿತು. ಹೀಗಾಗಿ ಕನ್ನಡ ಚಿತ್ರರಂಗvu ಮಡಿವಂತಿಕೆಯ ಮಾರುಕಟ್ಟೆ ಕಾರ್ಯತಂತ್ರವನ್ನು ಬಿಟ್ಟು ಹೊರಬರಬೇಕು’ ಎಂದು ಅವರು ಸಲಹೆ ನೀಡಿದರು.

ಬಜೆಟ್ ಮತ್ತು ದಲ್ಲಾಳಿಗಳು

ಹಿಂದಿ ಮತ್ತು ಇತರ ಸಿನಿಮಾಗಳಿಗೆ ಹೋಲಿಸಿದರೆ ಕನ್ನಡ ಸಿನಿಮಾ ಹಿಂದೆ ಉಳಿದಿದೆ. ಇಲ್ಲಿ ಇಂಟರ್​ನೆಟ್ ಬಳಸುವ ಸಂಖ್ಯೆ ಕಡಿಮೆ ಅದರಲ್ಲೂ ನೋಡುವ ಹಲವರು ಬೇರೆ ಭಾಷೆ ಕಡೆಗೆ ಒಲವು ತೊರಿದ್ದಾರೆ. ಈ ನಿಟ್ಟಿನಲ್ಲಿ ಒಟಿಟಿ ವಿಚಾರದಲ್ಲಿ ಕನ್ನಡ ಸಿನಿಮಾಗಳಿಗೆ ಹೆಚ್ಚಿನ ಭವಿಷ್ಯ ಇಲ್ಲ. ಇಲ್ಲಿ ಸಿನಿಮಾಗಳು ಬಿಡುಗಡೆಯಾದಾಗ ಅದರ ಬಗ್ಗೆ ಜನರಿಗೆ ಮಾಹಿತಿ ಇರುವುದಿಲ್ಲ. ಉದಾ: ಭೀಮಸೇನ ನಳಮಹಾರಾಜ ಸಿನಿಮಾವನ್ನೇ ನಾವು ಇಲ್ಲಿ ಗಮನಿಸಬಹುದು ಎಂದು ನಟಿ ಅನಿತಾ ಭಟ್ ಹೇಳಿದರು.

ಹಿರಿಯ ಪತ್ರಕರ್ತ ಶರಣು ಹುಲ್ಲೂರು ಮಾತನಾಡಿ, ಒಟಿಟಿಯಲ್ಲಿನ ಯಾವುದೇ ವೇದಿಕೆ ಅಂದರೆ ಹಿಂದಿ, ಮಲಯಾಳಂ, ತಮಿಳು, ತೆಲುಗು ಇವುಗಳಿಗೆ ಹೊಲಿಸಿದರೆ ಕನ್ನಡಕ್ಕೆ ಇರುವ ಬಜೆಟ್ ಬಹಳ ಕಡಿಮೆ. ಹಲವು ದಲ್ಲಾಳಿಗಳ ಕಪಿಮುಷ್ಟಿಯಲ್ಲಿ ಒಟಿಟಿಗಳಿದ್ದು, ಅವರು ನೇರವಾಗಿ ಕನ್ನಡ ಸಿನಿಮಾಗಳನ್ನು ಕೊಂಡುಕೊಳ್ಳಲು ಒಪ್ಪುವುದಿಲ್ಲ. ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹವನ್ನು ಕೂಡ ನೀಡುವುದಿಲ್ಲ ಹೀಗಾಗಿ ಕನ್ನಡ ಸಿನಿಮಾಗಳು ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಕಡಿಮೆ ಇದೆ ಎನ್ನುವುದು ನಿಜ. ವಿಷಯಾಧಾರಿತ ಸಿನಿಮಾಗಳು ಕನ್ನಡದಲ್ಲಿ ಬರುತ್ತಿಲ್ಲ ಎನ್ನುವುದು ತಪ್ಪು. ಮೊನ್ನೆಯಷ್ಟೇ ತೆರೆಕಂಡ ಸಿನಿಮಾ ಆ್ಯಕ್ಟ್ 1978 ಹೆಚ್ಚಿನ ಯಶಸ್ಸನ್ನು ಕಂಡಿದೆ. ಹೀಗಾಗಿ ಇತ್ತೀಚೆಗೆ ಬಂದ ಸಿನಿಮಾಗಳನ್ನು ಕೊಳ್ಳುವಲ್ಲಿ ಒಟಿಟಿಯಲ್ಲಿನ ದಲ್ಲಾಳಿಗಳ ಪರಿಣಾಮ ಬಹಳಷ್ಟಿದೆ’ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಿನಿಮಾ ಮಾಡುವಾಗ ವಿಶ್ವವನ್ನು ಗಮನದಲ್ಲಿರಿಸಿಕೊಳ್ಳಬೇಕು. ಕೇವಲ ಕನ್ನಡ ಪ್ರೇಕ್ಷಕರನ್ನು ಗುರಿಯಾಗಿಸಿ ಸಿನಿಮಾ ಮಾಡುವುದನ್ನು ಕಡಿಮೆ ಮಾಡಿದರೆ ಯಶಸ್ಸು ಕಾಣಲು ಸಾಧ್ಯ. ಜನರ ನಿರೀಕ್ಷೆಯ ಮೇಲೆ ಸಿನಿಮಾ ಮಾಡುವುದು ಬಹಳ ಮುಖ್ಯ. ಕಥೆಗಾರರು ನಾನಾ ಆಲೋಚನೆಯೊಂದಿಗೆ ಚಿತ್ರಕಥೆಗಳನ್ನು ಬರೆದರೆ ಖಂಡಿತಾ ಯಶಸ್ಸು ಸಿಗುತ್ತದೆ ಎಂದು ಅವರು ಹೇಳಿದರು.

OTT Platforms ‘ಮುಚ್ಚುಮರೆ ಇಲ್ಲದ’ ಆನ್​ಲೈನ್ ವೇದಿಕೆಗಳಿಗೆ ಮೂಗುದಾರ ಹಾಕಬೇಕಾ?!

Published On - 6:12 pm, Thu, 24 December 20