ಸೂಪರ್ ಫಿಟ್ನೆಸ್ಗಾಗಿ ‘ಪೂಜಾ’ ಮಂದಿರದಲ್ಲಿ ಇವೆಲ್ಲಾ ನಡೆಯುತ್ತವೆ!
ಬಹುಭಾಷಾ ನಟಿ ಪೂಜಾ ಹೆಗ್ಡೆ ಬಾಲಿವುಡ್ ಸಿನಿಮಾ ಮೊಹೆಂಜೋದಾರೊ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯಗೊಂಡ ತಾರೆ. ರೂಪದರ್ಶಿ ಪೂಜಾ ಅವರ ನಟನೆ ನೋಡಿ ಮೆಚ್ಚಿದ ಪ್ರೇಕ್ಷಕ ಇವರ ಪರ್ಫೆಕ್ಟ್ ಫಿಟ್ನೆಸ್ಗೂ ಫಿದಾ ಆಗಿದ್ದಾರೆ. ಹಾಗಾದ್ರೆ ನಟಿ ಪೂಜಾ ಹೆಗ್ಡೆ ಆಕರ್ಷಕ ಮೈಕಟ್ಟಿನ ಫಿಟ್ನೆಸ್ ಗುಟ್ಟು ನಿತ್ಯದ ಜಿಮ್ ವರ್ಕೌಟ್ ಅಂತೆ. ಇವರು ವರ್ಕೌಟ್ ವಿಷಯದಲ್ಲಿ ತುಂಬಾನೇ ಪರ್ಟಿಕ್ಯುಲರ್ ಅಂತೆ. ಹಾಗಾಗಿ ವಾರದಲ್ಲಿ ನಾಲ್ಕು ದಿನ ತಪ್ಪದೇ […]

ಬಹುಭಾಷಾ ನಟಿ ಪೂಜಾ ಹೆಗ್ಡೆ ಬಾಲಿವುಡ್ ಸಿನಿಮಾ ಮೊಹೆಂಜೋದಾರೊ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯಗೊಂಡ ತಾರೆ.

ರೂಪದರ್ಶಿ ಪೂಜಾ ಅವರ ನಟನೆ ನೋಡಿ ಮೆಚ್ಚಿದ ಪ್ರೇಕ್ಷಕ ಇವರ ಪರ್ಫೆಕ್ಟ್ ಫಿಟ್ನೆಸ್ಗೂ ಫಿದಾ ಆಗಿದ್ದಾರೆ. ಹಾಗಾದ್ರೆ ನಟಿ ಪೂಜಾ ಹೆಗ್ಡೆ ಆಕರ್ಷಕ ಮೈಕಟ್ಟಿನ ಫಿಟ್ನೆಸ್ ಗುಟ್ಟು ನಿತ್ಯದ ಜಿಮ್ ವರ್ಕೌಟ್ ಅಂತೆ. ಇವರು ವರ್ಕೌಟ್ ವಿಷಯದಲ್ಲಿ ತುಂಬಾನೇ ಪರ್ಟಿಕ್ಯುಲರ್ ಅಂತೆ. ಹಾಗಾಗಿ ವಾರದಲ್ಲಿ ನಾಲ್ಕು ದಿನ ತಪ್ಪದೇ ಜಿಮ್ ವರ್ಕೌಟ್ ಮಾಡ್ತಾರೆ. ಈ ವರ್ಕೌಟ್ಗಳು ಇವರ ಟೋನ್ಡ್ ಬಾಡಿಗೆ ಸಹಕಾರಿಯಾಗಿದೆಯಂತೆ.
https://www.instagram.com/p/B1YWyzwgMRE/?utm_source=ig_web_copy_link

ವರ್ಕೌಟ್ ಅಂತ ಬಂದಾಗ ಇವರು ತುಂಬ ಕಾನ್ಷಿಯಸ್ ಆಗಿರುರುವುದರಿಂದ ಜಿಮ್ನಲ್ಲಿ ತ್ರೆಡ್ಮಿಲ್ ವಾಲ್ಕ್, ವೇಟ್ ಲಿಫ್ಟಿಂಗ್ ಮತ್ತು ಕಾರ್ಡಿಯೋ ಎಕ್ಸಸೈಸ್ ಮಾಡ್ತಾರಂತೆ. ವೇಟ್ ಟ್ರೇನಿಂಗ್ ಮತ್ತು ಫಂಕ್ಷನಲ್ ಎಕ್ಸಸೈಜ್ಗಳ ಕಡೆ ಹೆಚ್ಚಿನ ಗಮನ ಹರಿಸ್ತಾರಂತೆ ಫಿಟ್ನೆಸ್ ಪ್ರೀಕ್ ಪೂಜಾ. ಈ ಎಲ್ಲಾ ವ್ಯಾಯಾಮಗಳು ಫಿಸಿಕಲೀ ಸ್ಟ್ರಾಂಗ್ ಮಾಡಿ ಫಿಟ್ನೆಸ್ ಕಾಯ್ದುಕೊಳ್ಳೋಕೆ ಸಹಾಯ ಆಗುತ್ತೆ ಅನ್ನೋದು ಪೂಜಾ ಮಾತು. ಇಂಟ್ರೆಸ್ಟಿಂಗ್ ಅಂದ್ರೆ ಇವರು ಯಾವುದೇ ರೀತಿಯ ಪುಷ್ ಅಪ್ಸ್ ಎಕ್ಸಸೈಸ್ ಅಳವಡಿಸಿಕೊಳ್ಳಲ್ವಂತೆ.
ಇನ್ನು ಪೂಜಾ ಅವರ ಫಿಟ್ನೆಸ್ ಹಿಂದಿನ ಮತ್ತೊಂದು ಗುಟ್ಟು ನಿತ್ಯ ಯೋಗವಂತೆ. ನಿತ್ಯ ಯೋಗ ಇವರನ್ನು ದೈಹಿಕ ಮತ್ತು ಮಾನಸಿಕವಾಗಿ ಫಿಟ್ ಆಗುವಂತೆ ಮಾಡಿದೆ. ಇದ್ರಿಂದ ದಿನವಿಡೀ ಚೈತನ್ಯದಿಂದ ಇರಲು ಸಹಕಾರಿಯಾಗುತ್ತೆ ಅಂತಾರೆ ಈ ಚೆಲುವೆ.
https://www.instagram.com/p/BzN53k4gA3p/?utm_source=ig_web_copy_link


Published On - 4:39 pm, Tue, 22 October 19




