
ರಕ್ಷಿತ್ ಶೆಟ್ಟಿ ನಿರ್ದೇಶನದ ‘ಉಳಿದವರು ಕಂಡಂತೆ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾ ರಿಲೀಸ್ ಆಗಿದ್ದು 2014ರಲ್ಲಿ. ರಕ್ಷಿತ್ ಶೆಟ್ಟಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಬರುವ ಪ್ರತಿ ಪಾತ್ರವೂ ಗಮನ ಸೆಳೆಯಿತು ಎಂದರೂ ತಪ್ಪಾಗಲಿಕ್ಕಿಲ್ಲ. ಈ ಚಿತ್ರದಲ್ಲಿ ಬರುವ ಡೆಮೋಕ್ರಸಿ ಪಾತ್ರ ಮೆಚ್ಚುಗೆ ಪಡೆಯಿತು. ಈ ಪಾತ್ರ ಮಾಡಿದ ಸೋಹನ್ ಶೆಟ್ಟಿ ಈಗ ಏನು ಮಾಡುತ್ತಿದ್ದಾರೆ ನೋಡೋಣ.
‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ಡೆಮೋಕ್ರಸಿ ಹೆಸರಿನ ಪಾತ್ರ ಭರ್ಜರಿ ಮೆಚ್ಚುಗೆ ಪಡೆಯಿತು. ಅವಿನಾಶ್ ಕಾಮತ್ ಅವರು ಸೋಹನ್ ಶೆಟ್ಟಿಯನ್ನು ಮಾತನಾಡಿಸಿದ್ದಾರೆ. ಈ ಸಿನಿಮಾ ಮಾಡುವಾಗ 12 ವರ್ಷ. ಅವರು ಇಂಜಿನಿಯರಿಂಗ್ ಓದಿ, ಬೆಂಗಳೂರಿನಲ್ಲಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಅವಕಾಶ ಸಿಕ್ಕರೆ ಮತ್ತೆ ನಟಿಸೋ ಆಸಕ್ತಿ ಅವರಿಗೆ ಇದೆ.
ಸೋಹನ್ಗೆ ಓದೋಕೆ ಇಷ್ಟ ಇರಲಿಲ್ಲ. ಈ ಕಾರಣಕ್ಕೆ ‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ನಟಿಸೋಕೆ ಆಡಿಷನ್ ನೀಡಿದರು. ಆಡಿಷನ್ನಲ್ಲಿ ಅವರು ಆಯ್ಕೆ ಆದರು ಮತ್ತು ಸಿನಿಮಾ ಮಾಡುವ ಅವಕಾಶ ಸಿಕ್ಕಿತು. ಆ ಬಳಿಕ ಸೋಹನ್ ಅವರಿಗೆ ಸಾಕಷ್ಟು ಆಫರ್ಗಳು ಬಂದವು. ಈ ಪೈಕಿ, ‘ಸಹಿಪ್ರಾ ಶಾಲೆ ಕಾಸರಗೋಡು’, ‘ಹಂಬಲ್ ಪೊಲಿಟಿಷಿಯನ್ ನೋಗರಾಜ್’ ಸೇರಿ ಕೆಲವು ಸಿನಿಮಾಗಳಲ್ಲಿ ನಟಿಸಿದರು.
ಆ ಬಳಿಕ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಅವರ ತಾಯಿ ಹೇಳಿದರು ಮತ್ತು ಸೋಹನ್ ಹಾಗೆಯೇ ಮಾಡಿದರು. ಈ ಕಾರಣಕ್ಕೆ ಅವರಿಗೆ ನಟಿಸೋಕೆ ಸಾಧ್ಯ ಆಗಲೇ ಇಲ್ಲ. ಈಗ ಅವರು ನಟನೆಯಿಂದ ದೂರ ಇದ್ದಾರೆ. ಹಾಗಂತ ಬಂದ ಅವಕಾಶಗಳಿಗೆ ಅವರು ಬೇಡ ಎನ್ನುತ್ತಿಲ್ಲ. ಸಿಕ್ಕ ಅವಕಾಶಗಳನ್ನು ಅವರು ಒಪ್ಪಿ ನಟಿಸಲು ರೆಡಿ ಇದ್ದಾರೆ.
ಇದನ್ನೂ ಓದಿ: ರಿಷಬ್ ನಟನೆಯ ‘ಕಾಂತಾರ: ಚಾಪ್ಟರ್ 1’ ಬಗ್ಗೆ ಮಾತನಾಡಿದ ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ ಅವರು ಈಗ ‘ರಿಚರ್ಡ್ ಆ್ಯಂಟನಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ‘ಉಳಿದವರು ಕಂಡಂತೆ’ ಸಿನಿಮಾದ ಸೀಕ್ವೆಲ್ ಇದು. ಹೀಗಾಗಿ, ಈ ಚಿತ್ರದಲ್ಲಿ ಡೆಮೊಕ್ರಸಿ ಪಾತ್ರ ಕೂಡ ಇರುತ್ತದೆಯೇ ಎನ್ನುವ ಕುತೂಹಲ ಮೂಡಿದೆ. ಇದಕ್ಕೆ ರಕ್ಷಿತ್ ಕಡೆಯಿಂದಲೇ ಉತ್ತರ ಸಿಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.