ಅಂಬರೀಷ್​ ಪ್ರೀತಿಯ ‘ಕನ್ವರ್’​ ನಿಧನ; ಈ ಶ್ವಾನವನ್ನು ಗಿಫ್ಟ್​ ಆಗಿ ಕೊಟ್ಟಿದ್ದು ಕನ್ನಡದ ಸ್ಟಾರ್​ ನಟ

|

Updated on: May 24, 2021 | 6:06 PM

ಕನ್ವರ್​ ಮೇಲೆ ಅಭಿಷೇಕ್​ಗೆ ವಿಶೇಷ ಕಾಳಜಿ ಇತ್ತು. ಅವರು ಮುದ್ದಿನಿಂದ ಅದನ್ನು ಸಾಕಿದ್ದರು. ಅಭಿಷೇಕ್​ ಮಾಸ್ಟರ್​ ಮಾಡೋಕೆ ಲಂಡನ್​ಗೆ ತೆರಳಿದಾಗ ಕನ್ವರ್​ ಊಟ್​ ಮಾಡುವುದನ್ನೇ ನಿಲ್ಲಿಸಿದ್ದ.

ಅಂಬರೀಷ್​ ಪ್ರೀತಿಯ ‘ಕನ್ವರ್’​ ನಿಧನ; ಈ ಶ್ವಾನವನ್ನು ಗಿಫ್ಟ್​ ಆಗಿ ಕೊಟ್ಟಿದ್ದು ಕನ್ನಡದ ಸ್ಟಾರ್​ ನಟ
ಅಂಬಿ ಸಾಕಿದ ಶ್ವಾನಗಳ ಜತೆ ಅಭಿಷೇಕ್​
Follow us on

ಅಂಬರೀಷ್​ ಶ್ವಾನ ಪ್ರಿಯರು. ಹೀಗಾಗಿ, ಅವರು ನಾಯಿಗಳನ್ನು ಸಾಕೋಕೆ ಇಷ್ಟಪಡುತ್ತಿದ್ದರು. ಕನ್ವರ್​ ಹಾಗೂ ಬುಲ್​ಬುಲ್​ ಹೆಸರಿನ ಎರಡು ಶ್ವಾನಗಳನ್ನು ಸಾಕಿದ್ದರು. ವಿಶೇಷ ಎಂದರೆ ಈ ಎರಡೂ ನಾಯಿಗಳಿಗೆ ಹೆಸರಿಟ್ಟಿದ್ದು ಅಂಬಿ ಮಗ ಅಭಿಷೇಕ್​​. ಹಾಗಾದರೆ ಇವುಗಳನ್ನು ಕೊಟ್ಟಿದ್ದು ಯಾರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕನ್ವರ್ ಹೆಸರಿನ ಶ್ವಾನವನ್ನು ನೀಡಿದ್ದು ರಿಯಲ್​ ಸ್ಟಾರ್​ ಉಪೇಂದ್ರ. ಅಂಬರೀಷ್​ ಅವರು ಪ್ರಾಣಿ ಪ್ರಿಯರು ಎಂದು ಅರಿತಿದ್ದ ಉಪೇಂದ್ರ ಈ ಶ್ವಾನವನ್ನು ನೀಡಿದ್ದರು. ಎರಡು ವರ್ಷಗಳ ನಂತರ ಬಂದಿದ್ದು ಬುಲ್​ಬುಲ್​. ಇದಕ್ಕೆ ಹೆಸರಿಟ್ಟಿದ್ದು, ಕೂಡ ಅಭಿಷೇಕ್​. ‘ನಾಗರಹಾವು’ ಸಿನಿಮಾದಲ್ಲಿ ಅಂಬರೀಷ್​ ಹೇಳುವ ‘ಏನ್​ ಬುಲ್​ಬುಲ್​ ಮಾತಾಡಕಿಲ್ವಾ?’ ಡೈಲಾಗ್​​ ಭಾರೀ ಫೇಮಸ್​ ಆಗಿತ್ತು. ಹೀಗಾಗಿ, ಬುಲ್​ಬುಲ್​ ಎಂದು ಹೆಸರಿಡಲಾಗಿತ್ತು.

ಅಂಬರೀಷ್​ ಫೇವರೆಟ್​ ಶ್ವಾನ:

ಅಂಬರೀಷ್ ಬದುಕಿರುವಾಗ ಕನ್ವರ್‌  ಶ್ವಾನ ಅಂಬಿಗೆ ಮೋಸ್ಟ್ ಫೇವರಿಟ್ ಆಗಿತ್ತು. ಅಲ್ಲದೇ ಅಂಬರೀಷ್ ಅವರು ಕನ್ವರ್‌ನನ್ನು ಪ್ರತಿದಿನ ವಾಕಿಂಗ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಈ ಶ್ವಾನ ಅಂಬರೀಷ್​​​ ಅವರನ್ನು ತುಂಬಾನೇ ಹಚ್ಚಿಕೊಂಡಿತ್ತು. 2018ರ ನವೆಂಬರ್​ 24ರಂದು ಅಂಬರೀಶ್​ ಮೃತಪಟ್ಟಿದ್ದರು. ಅಂಬಿ ಅಗಲಿದ ಕ್ಷಣ ಈ ಶ್ವಾನ ಊಟ ಕೂಡ ಮಾಡದೇ ಕಂಬನಿ ಸುರಿಸುತ್ತಿತ್ತು.  ಕನ್ವರ್‌  ಕೂಡ ಅಂಬಿಯನ್ನು  ಹಚ್ಚಿಕೊಂಡಿತ್ತು. ಅಂಬರೀಷ್​ ಮೃತಪಟ್ಟ ನಂತರ ಕನ್ವರ್​ ಅಷ್ಟಾಗಿ ಆ್ಯಕ್ಟಿವ್​ ಆಗಿರಲಿಲ್ಲ. ಇದೀಗ ಅಂಬಿ ಪ್ರೀತಿಯ ಕನ್ವರ್‌ ಇಹಲೋಕ ತ್ಯಜಿಸಿದೆ.

ಅಭಿ ದೇವರಾಗಿದ್ದರು!

ಕನ್ವರ್​ ಮೇಲೆ ಅಭಿಷೇಕ್​ಗೆ ವಿಶೇಷ ಕಾಳಜಿ ಇತ್ತು. ಅವರು ಮುದ್ದಿನಿಂದ ಅದನ್ನು ಸಾಕಿದ್ದರು. ಅಭಿಷೇಕ್​ ಮಾಸ್ಟರ್​ ಮಾಡೋಕೆ ಲಂಡನ್​ಗೆ ತೆರಳಿದಾಗ ಕನ್ವರ್​ ಊಟ್​ ಮಾಡುವುದನ್ನೇ ನಿಲ್ಲಿಸಿದ್ದ. ಎಲ್ಲವನ್ನೂ ಒತ್ತಾಯಪೂರ್ವಕವಾಗಿ ಅವನಿಗೆ ನೀಡಬೇಕಿತ್ತು. ಅಭಿ ವಾಪಾಸಾದ ನಂತರ ಆತ ಮತ್ತೆ ಊಟ ಮಾಡಲು ಆರಂಭಿಸಿದ್ದ. ಅಭಿ ಎಂದರೆ ಕನ್ವರ್​ಗೆ ದೇವರು.

ಹೂವಿ ಹಾಕಿ ಅಂತ್ಯ ಸಂಸ್ಕಾರ:

ಅಂಬಿ ಪರಮಾಪ್ತರಾಗಿದ್ದ ಶ್ರೀನಿವಾಸ್, ಕನ್ವರ್‌  ಫೋಟೊಗಳನ್ನ ಹಂಚಿಕೊಂಡಿದ್ದಾರೆ. ಕನ್ವರ್​  ನಿಧನಕ್ಕೆ ಕುಟುಂಬವರ್ಗವೂ ಬೇಸರದಲ್ಲಿದೆ ಎಂದಿದ್ದಾರೆ. ಈ ವಿಚಾರ ಕೇಳಿ ಅಂಬಿ ಅಭಿಮಾನಿಗಳು ಕೂಡ ಬೇಸರ ಹೊರ ಹಾಕಿದ್ದಾರೆ. ಈ ಶ್ವಾನಕ್ಕೆ ಹೂವು ಹಾಕಿ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಕೊನೆವರೆಗೂ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ಅಂಬಿ

ಅಂಬರೀಷ್​ ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಛಾಪು ಮೂಡಿಸಿದ್ದರು. ಕೊನೆಯದಿನದವರೆಗೂ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು. 2018ರ ನವೆಂಬರ್​ 24ರಂದು ಅವರು ಮೃತಪಟ್ಟ ನಂತರ ಇಡೀ ಚಿತ್ರರಂಗ ಕಂಬನಿ ಮಿಡಿದಿತ್ತು. ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿತ್ತು.

ಇದನ್ನೂ ಓದಿ: ಅಂಬರೀಷ್ ಮೃತಪಟ್ಟಾಗ ಊಟ ಬಿಟ್ಟಿದ್ದ ಅವರ ಮನೆಯ ಪ್ರೀತಿಯ ಶ್ವಾನ ಕನ್ವರ್‌ ನಿಧನ

Published On - 6:03 pm, Mon, 24 May 21