Kabzaa Movie: ‘ಕಬ್ಜ’ ಆಡಿಯೋ ರಿಲೀಸ್​ಗೆ ಶಿಡ್ಲಘಟ್ಟದಲ್ಲಿ ಸಿದ್ಧವಾಗ್ತಿದೆ ಬೃಹತ್​ ವೇದಿಕೆ; ಸರ್ವರಿಗೂ ಆಹ್ವಾನ ನೀಡಿದ ಚಿತ್ರತಂಡ

Upendra | R Chandru: ರವಿ ಬಸ್ರೂರು ಅವರು ‘ಕಬ್ಜ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಿಡ್ಲಘಟ್ಟದಲ್ಲಿ ಆಡಿಯೋ ರಿಲೀಸ್​ ಮಾಡಲು ವೇದಿಕೆ ಸಿದ್ಧವಾಗುತ್ತಿದೆ.

Kabzaa Movie: ‘ಕಬ್ಜ’ ಆಡಿಯೋ ರಿಲೀಸ್​ಗೆ ಶಿಡ್ಲಘಟ್ಟದಲ್ಲಿ ಸಿದ್ಧವಾಗ್ತಿದೆ ಬೃಹತ್​ ವೇದಿಕೆ; ಸರ್ವರಿಗೂ ಆಹ್ವಾನ ನೀಡಿದ ಚಿತ್ರತಂಡ
ಉಪೇಂದ್ರ, ಶ್ರೀಯಾ ಶರಣ್, ಕಿಚ್ಚ ಸುದೀಪ್

Updated on: Feb 12, 2023 | 3:51 PM

ಕನ್ನಡದ ‘ಕಬ್ಜ’ ಸಿನಿಮಾ (Kabzaa Movie) ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಮೊದಲು ಪೋಸ್ಟರ್​, ಆಮೇಲೆ ಟೀಸರ್​, ನಂತರ ಟೈಟಲ್​ ಟ್ರ್ಯಾಕ್​ ಮೂಲಕ ಭಾರಿ ಕೌತುಕ ಮೂಡಿಸಿದ ಈ ಸಿನಿಮಾದ ಬಿಡುಗಡೆಗಾಗಿ ಸಿನಿಪ್ರಿಯರು ಕಾದಿದ್ದಾರೆ. ಚಿತ್ರದ ರಿಲೀಸ್​ಗೆ ದಿನಗಣನೆ ಆರಂಭ ಆಗಿದೆ. ಮಾರ್ಚ್​ 17ರಂದು ವಿಶ್ವಾದ್ಯಂತ ‘ಕಬ್ಜ’ ತೆರೆಕಾಣಲಿದೆ. ಚಿತ್ರದ ಕೊನೇ ಹಂತದ ಕೆಲಸಗಳಲ್ಲಿ ನಿರ್ದೇಶಕ ಆರ್. ಚಂದ್ರು ಬ್ಯುಸಿ ಆಗಿದ್ದಾರೆ. ಈಗ ಆಡಿಯೋ ಬಿಡುಗಡೆಗೆ (Kabzaa Movie Audio Release) ಸಕಲ ಸಿದ್ಧತೆ ನಡೆದಿದೆ. ಫೆಬ್ರವರಿ 26ರಂದು ಶಿಡ್ಲಘಟ್ಟದಲ್ಲಿ ‘ಕಬ್ಜ’ ಹಾಡುಗಳನ್ನು ರಿಲೀಸ್​ ಮಾಡಲು ತಯಾರಿ ನಡೆಯುತ್ತಿದೆ. ಅದಕ್ಕಾಗಿ ಬೃಹತ್​ ವೇದಿಕೆ ನಿರ್ಮಾಣ ಆಗುತ್ತಿದೆ. ಉಪೇಂದ್ರ (Upendra),  ಕಿಚ್ಚ ಸುದೀಪ್, ಶ್ರೀಯಾ ಶರಣ್​​ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.

ಶಿಡ್ಲಘಟ್ಟದ ಜೂನಿಯರ್​ ಕಾಲೇಜು ಮೈದಾನದಲ್ಲಿ ‘ಕಬ್ಜ’ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 26ರಂದು ಸಂಜೆ 6 ಗಂಟೆಗೆ ಆರಂಭ ಆಗುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತೀಯ ಚಿತ್ರರಂಗದ ಹಲವು ದಿಗ್ಗಜ ನಟರಿಗೆ ಆಹ್ವಾನ ನೀಡಲಾಗಿದೆ. ಅಂದು ವೇದಿಕೆಯಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ. ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಲಿ ಎಂಬುದು ‘ಕಬ್ಜ’ ತಂಡದ ಆಶಯ.

ಇದನ್ನೂ ಓದಿ: ‘ಕಬ್ಜ’ ಬೆಡಗಿ ಶ್ರೀಯಾ ಶರಣ್​ ಸುಂದರ ಫೋಟೋಸ್​

ಇದನ್ನೂ ಓದಿ
‘ಈ ಹಬ್ಬಕ್ಕೆ ಉಪ್ಪಿ ಇರಲೇಬೇಕು, ಅವ್ರು ಪೂಜೆ ಮಾಡಿದ್ರೆ ಮಾತ್ರ ನಮಗೆ ಸಂತೋಷ’: ಪ್ರಿಯಾಂಕಾ ಉಪೇಂದ್ರ
ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರದ ಸೆಟ್​​ಗೆ ಶಿವರಾಜ್​ಕುಮಾರ್​-ಗೀತಾ ಭೇಟಿ
Upendra: ‘ಯುಐ’ ಚಿತ್ರಕ್ಕೆ ಶೂಟಿಂಗ್​ ಶುರು; ಸೆಟ್​ನಲ್ಲಿ ಡೈರೆಕ್ಟರ್​ ಕ್ಯಾಪ್​ ಧರಿಸಿ ನಿಂತ ಉಪೇಂದ್ರ
Kabza Movie: 7 ಭಾಷೆಗಳಲ್ಲಿ ಧೂಳೆಬ್ಬಿಸಲಿದೆ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ; ಭರದಿಂದ ಸಾಗುತ್ತಿದೆ ಡಬ್ಬಿಂಗ್​ ಕೆಲಸ

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಕಬ್ಜ’ ಸಿನಿಮಾ ರಿಲೀಸ್​ ಆಗಲಿದೆ. ಹಾಗಾಗಿ ಪ್ರಚಾರ ಕೂಡ ಅಷ್ಟೇ ಜೋರಾಗಿ ನಡೆಯುತ್ತಿದೆ. ಕೆಲವೇ ದಿನಗಳ ಹಿಂದೆ ಹೈದರಾಬಾದ್​ನಲ್ಲಿ ಅದ್ದೂರಿಯಾಗಿ ಟೈಟಲ್​ ಟ್ರ್ಯಾಕ್​ ಬಿಡುಗಡೆ ಮಾಡಲಾಯಿತು. ದೇಶದ ಪ್ರಮುಖ ನಗರದಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ಮಾಡಿ ಗಮನ ಸೆಳೆಯುವ ಚಿತ್ರತಂಡ ಸಿದ್ಧವಾಗಿದೆ.

ಇದನ್ನೂ ಓದಿ: Kabzaa: ನಾರ್ತ್​ ಅಮೆರಿಕದಲ್ಲಿ ಕನ್ನಡದ ‘ಕಬ್ಜ’ ಚಿತ್ರಕ್ಕೆ ಭಾರಿ ಡಿಮ್ಯಾಂಡ್​; ರಿಲೀಸ್​ಗೆ ಭರ್ಜರಿ ತಯಾರಿ

ಹೈದರಾಬಾದ್​ನಲ್ಲಿ ನಡೆದ ಕಾರ್ಯಕ್ರಮ ಯಶಸ್ವಿ ಆಗಿದೆ. ಅದೇ ರೀತಿ ಚೆನ್ನೈನಲ್ಲೂ ಫೆಬ್ರವರಿ 16ರಂದು ‘ಕಬ್ಜ’ ತಂಡ ಅದ್ದೂರಿಯಾಗಿ ಒಂದು ಇವೆಂಟ್​ ಮಾಡಲಿದೆ. ಉಪೇಂದ್ರ ಮತ್ತು ಸುದೀಪ್​ ಅವರಿಗೆ ಪರಭಾಷೆಯಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಎಲ್ಲ ಕಡೆಗಳಲ್ಲೂ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುವ ಸಾಧ್ಯತೆ ದಟ್ಟವಾಗಿದೆ. ಅದಕ್ಕೆ ತಕ್ಕಂತೆ ಪ್ರಚಾರ ಮಾಡಲಾಗುತ್ತಿದೆ.

ರವಿ ಬಸ್ರೂರು ಅವರು ‘ಕಬ್ಜ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಬಿಡುಗಡೆ ಆಗಿರುವ ಶೀರ್ಷಿಕೆ ಗೀತೆಗೆ ಭಾರಿ ಮೆಚ್ಚುಗೆ ಸಿಕ್ಕಿದೆ. ಇನ್ನುಳಿದ ಎಲ್ಲ ಹಾಡುಗಳನ್ನು ಕೇಳಲು ಫ್ಯಾನ್ಸ್​ ಕಾದಿದ್ದಾರೆ. ಶಿಡ್ಲಘಟ್ಟದಲ್ಲಿ ನಡೆಯುವ ಆಡಿಯೋ ರಿಲೀಸ್​ ಕಾರ್ಯಕ್ರಮಕ್ಕೆ ಅತಿಥಿಯಾಗಿ ಯಾರೆಲ್ಲ ಆಗಮಿಸಲಿದ್ದಾರೆ ಎಂಬ ಬಗ್ಗೆ ಸದ್ಯದಲ್ಲೇ ಮಾಹಿತಿ ಸಿಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us