ಉಪೇಂದ್ರ ಬಳಿಕ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಕೈ ಹಾಕಿದ ಅಣ್ಣನ ಮಗ ನಿರಂಜನ್

|

Updated on: Apr 15, 2023 | 8:23 PM

Niranjan: ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಪ್ಯಾನ್ ಇಂಡಿಯಾ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ. ಸಿನಿಮಾದ ಹೆಸರು ಹಂಟರ್.

ಉಪೇಂದ್ರ ಬಳಿಕ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಕೈ ಹಾಕಿದ ಅಣ್ಣನ ಮಗ ನಿರಂಜನ್
ನಿರಂಜನ್ ಸುಧೀಂದ್ರ
Follow us on

ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆದ ಕಬ್ಜ (Kabzaa) ಮೂಲಕ ಉಪೇಂದ್ರ (Upendra) ತಮ್ಮ ಮೊದಲ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಿ ಯಶಸ್ವಿಯಾಗಿದ್ದಾರೆ. ಇದೀಗ ಉಪೇಂದ್ರ ಕುಟುಂಬದಿಂದ ಚಿತ್ರರಂಗಕ್ಕೆ ಕಾಲಿಟ್ಟಿರುವ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಸಹ ಚಿಕ್ಕಪ್ಪನ ಹಾದಿ ಹಿಡಿದಿದ್ದು, ತಾವೂ ಸಹ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ‌ ಮಗ ನಿರಂಜನ್ ಸುಧೀಂದ್ರ “ಹಂಟರ್” ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದು, ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ಸಿನಿಮಾದ ಚಿತ್ರೀಕರಣ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ನಡೆಯುತ್ತಿದೆ.

ಸಿನಿಮಾ ಕುರಿತಂತೆ ಮಾತನಾಡಿದ ನಿರ್ಮಾಪಕ ತ್ರಿವಿಕ್ರಮ್ ಸಾಫಲ್ಯ, ”ನಮ್ಮ ತ್ರಿವಿಕ್ರಮ್ ಸಿನಿಮಾಸ್ ಲಾಂಛನದಲ್ಲಿ “ಹಂಟರ್” ಸಿನಿಮಾ ನಿರ್ಮಾಣವಾಗುತ್ತಿದೆ. ನಿರಂಜನ್ ಸುಧೀಂದ್ರ ಈ ಚಿತ್ರದ ನಾಯಕ. ಸೌಮ್ಯ ಮೆನನ್ ನಾಯಕಿ. ಕಬೀರ್ ಬೇಡಿ, ಸುಮನ್, ಶರತ್ ಕುಮಾರ್, ಸಾಧುಕೋಕಿಲ ಮುಂತಾದ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಎಪ್ಪತ್ತರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನವೆಂಬರ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ” ಎಂದು ಮಾಹಿತಿ ನೀಡಿದ್ದಾರೆ.

ಸಿನಿಮಾವನ್ನು ವಿನಯ್ ಕೃಷ್ಣ ಎಂಬುವರು ನಿರ್ದೇಶನ ಮಾಡುತ್ತಿದ್ದು, ‘ಸೀಜರ್’ ಸಿನಿಮಾದ ಬಳಿಕ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರ “ಹಂಟರ್”. ಇದೊಂದು ಕಂಪ್ಲೀಟ್ ಆಕ್ಷನ್ ಥ್ರಿಲ್ಲರ್. ಈ ಚಿತ್ರಕ್ಕಾಗಿ ಎಪ್ಪತ್ತೈದು ಕೆಜಿ ತೂಕವಿದ್ದ ನಿರಂಜನ್, ಮತ್ತಷ್ಟು ತೂಕ ಹೆಚ್ಚಿಸಿಕೊಂಡಿದ್ದಾರೆ. ಗಣೇಶ್ ಮಾಸ್ಟರ್ ಸಾಹಸ ಸಂಯೋಜನೆ ಮಾಡಿದ್ದಾರೆ. ಕಬೀರ್ ಬೇಡಿ, ಸುಮನ್, ಶರತ್ ಕುಮಾರ್ ಅವರಂತಹ ಕಲಾವಿದರೊಂದಿಗೆ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ. ಚಂದನ್ ಶೆಟ್ಟಿ “ಹಂಟರ್” ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಜೂನ್ ವೇಳೆಗೆ ಚಿತ್ರೀಕರಣ ಮುಕ್ತಾಯವಾಗಲಿದೆ” ಎಂದಿದ್ದಾರೆ.

ಇದನ್ನೂ ಓದಿ:ಮತ ಎಣಿಕೆಗೆ ಎರಡು ದಿನ ಬೇಕೆ? ಏಕೆಂದು ಬಲ್ಲವರು ತಿಳಿಸುತ್ತೀರಾ? ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ಪ್ರಶ್ನೆ ಎತ್ತಿದ ಉಪೇಂದ್ರ

”ಈ ಚಿತ್ರ ಫೈಟ್ ನೊಂದಿಗೆ ಶುರುವಾಗಿ ಫೈಟ್ ನಲ್ಲೇ ಮುಕ್ತಾಯವಾಗುತ್ತದೆ. ಆಕ್ಷನ್ ಥ್ರಿಲ್ಲರ್ ಚಿತ್ರವಾಗಿರುವುದರಿಂದ ನಾನು ಸಾಕಷ್ಟು ಅಭ್ಯಾಸ ಮಾಡಿದ್ದೇನೆ. ನನ್ನ ಸಿನಿಮಾ ವೃತ್ತಿ ಜೀವನದಲ್ಲೇ ಅದ್ದೂರಿ ಸಿನಿಮಾ ಇದು ಎಂದರೆ ತಪ್ಪಾಗಲಾರದು. ಉತ್ತರ ಹಾಗೂ ದಕ್ಷಿಣ ಭಾರತದ ದಿಗ್ಗಜ ನಟರೊಂದಿಗೆ ನಟಿಸುವ ಅವಕಾಶ ನನಗೆ ಈ ಚಿತ್ರದಲ್ಲಿ ಸಿಕ್ಕಿದೆ. ಎರಡು ಶೇಡ್ ಗಳಲ್ಲಿ ನನ್ನ ಪಾತ್ರವಿರುತ್ತದೆ” ಎಂದು ನಾಯಕ ನಿರಂಜನ್ ಸುಧೀಂದ್ರ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

ನಾನು ಹೆಡ್ ಕಾನ್ಸ್‌ಟೇಬಲ್ ಪಾತ್ರ ನಿರ್ವಹಣೆ ಮಾಡುತ್ತಿದ್ದೇನೆ. ನಾನು ಹಾಗೂ ಶರತ್ ಕುಮಾರ್ ಬಹಳ ದಿನಗಳ ನಂತರ ಒಟ್ಟಾಗಿ ಅಭಿನಯಿಸುತ್ತಿದ್ದೇವೆ ಎಂದು ನಟ ಸುಮನ್ ಹೇಳಿದರು. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನನ್ನ ಪಾತ್ರ ಚೆನ್ನಾಗಿದೆ. ಈ ತಂಡದ ಜೊತೆ ಕೆಲಸ ಮಾಡಿದ್ದು ಖುಷಿಯಾಗಿದೆ ಎಂದರು ನಟ ಶರತ್ ಕುಮಾರ್. ನಾನು ಮೂಲತಃ ಕೇರಳದವಳು. ಕನ್ನಡದಲ್ಲಿ ಮೊದಲ ಚಿತ್ರ ಎನ್ನುತ್ತಾರೆ ನಾಯಕಿ ಸೌಮ್ಯ ಮೆನನ್. ಛಾಯಾಗ್ರಹಕ ಜೈ ಆನಂದ್ ಸಹ “ಹಂಟರ್” ಬಗ್ಗೆ ಮಾತನಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:22 pm, Sat, 15 April 23