ಕೊರೊನಾ ವೈರಸ್ ಎರಡನೇ ಅಲೆ ಭಾರತದಲ್ಲಿ ನಿಯಂತ್ರಣ ತಪ್ಪಿದೆ. ಕೊರೊನಾ ಹರಡದಂತೆ ತಡೆಯಲು ಸರ್ಕಾರ ಸಾಕಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ. ಮತ್ತೊಂದು ಕಡೆ ಕೊರೊನಾ ಲಸಿಕೆ ಅಭಿಯಾನ ಆರಂಭಿಸಿದೆ. ನಟ ವಸಿಷ್ಠ ಸಿಂಹ ಕೂಡ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೂ ಮೊದಲು ಅವರು ರಕ್ತದಾನ ಮಾಡಿದ್ದಾರೆ.
ಕೊರೊನ ಲಸಿಕೆ ಹಾಕಿಸಿಕೊಂಡ ನಂತರ ಕೆಲ ತಿಂಗಳು ರಕ್ತ ದಾನ ಮಾಡಲು ಅವಕಾಶ ಇರುವುದಿಲ್ಲ. ಇದರಿಂದ ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತದ ಅಭಾವ ಎದುರಾಗುವ ಆತಂಕ ಕಾಡಿದೆ. ಹೀಗಾಗಿ, ಕೊರೊನಾ ಲಸಿಕೆ ಪಡೆಯುವುದಕ್ಕೂ ಮೊದಲು ರಕ್ತದಾನ ಮಾಡುವಂತೆ ಕೋರಲಾಗುತ್ತಿದೆ. ಇದಕ್ಕೆ ಈಗ ವಸಿಷ್ಠ ಸಿಂಹ ಧ್ವನಿಯಾಗಿದ್ದಾರೆ.
ಬೆಂಗಳೂರಿನ ವಿವಿಧ ಕಡೆಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದೆ. ಇಂದು (ಮೇ 9) ವಸಿಷ್ಠ ಸಿಂಹ ಮತ್ತು ಕೆಪಿಟಿಸಿಎಲ್ ನೌಕರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಟಿಆರ್ ರಾಮಕೃಷ್ಣಯ್ಯ ರಕ್ತದಾನ ಶಿಬಿರವನ್ನು ಕೆಇಬಿ ಸಮುದಾಯ ಭವನದಲ್ಲಿ ಬೆಳಗ್ಗೆ ಉದ್ಘಾಟನೆ ಮಾಡಿದರು. ನಂತರ ರಕ್ತದಾನ ಮಾಡಿದ್ದಾರೆ. ಈ ಮೂಲಕ ರಕ್ತದಾನ ಮಾಡಿ ಜೀವ ಉಳಿಸಿ ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ: ದಯವಿಟ್ಟು ಲಸಿಕೆ ಹಾಕಿಸಿಕೊಳ್ಳಿ: ನಟ ವಸಿಷ್ಠ ಸಿಂಹಾ