ನಟ ವಸಿಷ್ಠ ಸಿಂಹ (Vasishta Simha) ಅವರು ಕನ್ನಡದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ವಿಲನ್ ಆಗಿ, ಹೀರೋ ಆಗಿ, ಪೋಷಕ ಪಾತ್ರಗಳ ಮೂಲಕ ಅವರು ಗಮನ ಸೆಳೆದಿದ್ದಾರೆ. ಈಗ ‘ವಿಐಪಿ’ ಚಿತ್ರದ ಮೂಲಕ ಅವರು ಪ್ರೇಕ್ಷಕರ ಎದುರು ಬರೋಕೆ ರೆಡಿ ಆಗಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಸಖತ್ ಗಮನ ಸೆಳೆಯುತ್ತಿದೆ. ಈ ಪೋಸ್ಟರ್ನಲ್ಲಿ ವಸಿಷ್ಠ ಸಿಂಹ ಬ್ಯಾಟ್ ಹಿಡಿದು ಫೀಲ್ಡ್ಗೆ ಇಳಿದಿದ್ದಾರೆ. ಹಾಗಂತ ಇದು ಕ್ರಿಕೆಟ್ ಫೀಲ್ಡ್ ಕಥೆ ಅಲ್ಲ. ಅವರು ಬ್ಯಾಟ್ ಹಿಡಿದ್ದು ದುಷ್ಟರ ಸಂಹಾರಕ್ಕಾಗಿ.
ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪ್ರಸನ್ನನಾಥ ಸ್ವಾಮೀಜಿ ಅವರು ‘ವಿಐಪಿ’ ಚಿತ್ರದ ಮೊದಲ ಲುಕ್ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ವಸಿಷ್ಠ ಸಿಂಹ ಹಾಗೂ ಚಿತ್ರತಂಡ ಅಲ್ಲಿ ಉಪಸ್ಥಿತಿ ಇತ್ತು. ಈ ಪೋಸ್ಟರ್ನಲ್ಲಿ ವಸಿಷ್ಠ ಸಿಂಹ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪ್ರಸನ್ನನಾಥ ಸ್ವಾಮೀಜಿ ತಂಡಕ್ಕೆ ಶುಭಕೋರಿದ್ದಾರೆ.
‘ವಿಐಪಿ’ ಚಿತ್ರಕ್ಕೆ ಈಗಾಗಲೇ ಎರಡು ಹಂತದಲ್ಲಿ ಶೂಟಿಂಗ್ ನಡೆದಿದೆ. ಬೆಂಗಳೂರು ಹಾಗೂ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಈ ಭಾಗದಲ್ಲಿ ಮಾತಿನ ಭಾಗದ ಚಿತ್ರೀಕರಣ ಹಾಗೂ ಆ್ಯಕ್ಷನ್ ಸನ್ನಿವೇಶಗಳನ್ನು ಇದು ಒಳಗೊಂಡಿದೆ. ‘ಕೆಜಿಎಫ್’ ಖ್ಯಾತಿಯ ವಿಕ್ರಂ ಮೋರ್ ಹಾಗೂ ‘ಯುವ’ ಚಿತ್ರಿ ಖ್ಯಾತಿಯ ಅರ್ಜುನ್ ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ.
ಕಲಾ ಸೃಷ್ಟಿ ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ‘ವಿಐಪಿ’ ಸಿನಿಮಾ ಮೂಡಿ ಬಂದಿದೆ. ಆರ್.ಎಸ್. ಮೋಹನ್ ಕುಮಾರ್ ಹಾಗೂ ಆರ್. ಅಚ್ಯುತ್ ರಾವ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ‘ಬ್ರಹ್ಮ’ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ತಮನ್ನಾ ಭಾಟಿಯಾ ಜೊತೆ ನಟ ವಸಿಷ್ಠ ಸಿಂಹ ನಟನೆ, ಸಿನಿಮಾ ಯಾವುದು?
‘ವಿಐಪಿ’ ಚಿತ್ರದಲ್ಲಿ ವಸಿಷ್ಠ ಸಿಂಹ ಅವರಿಗೆ ಜೊತೆಯಾಗಿ ತೇಜಸ್ವಿನಿ ಶರ್ಮ ನಟಿಸುತ್ತಿದ್ದಾರೆ. ಸುನೀಲ್ ಪುರಾಣಿಕ್, ಅಫ್ಜಲ್, ಬಲ ರಾಜವಾಡಿ, ಸುಚೇಂದ್ರ ಪ್ರಸಾದ್, ಸ್ಪರ್ಶ ರೇಖಾ, ಹನುಮಂತೇಗೌಡ, ರಣವೀರ್, ರಾಮ್ ಕಶ್ಯಪ್ ಮುಂತಾದವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ