AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂಶಿಕಾ ಪ್ರಕರಣ: ‘ಜನಪ್ರಿಯತೆಯಿಂದ ಬುದ್ಧಿವಂತಿಕೆ ಮೌನವಾಗಿದೆಯೇ?’; ಮಕ್ಕಳ ಪಾಲಕರಿಗೆ ನಟಿ ಮಾಳವಿಕಾ ಬುದ್ಧಿವಾದ

ಸಣ್ಣ ವಯಸ್ಸಿನಲ್ಲೇ ಸಾಕಷ್ಟು ಜನಪ್ರಿಯತೆ ಪಡೆದ ಅನೇಕರಿದ್ದಾರೆ. ಕೆಲವೊಮ್ಮೆ ಈ ಜನಪ್ರಿಯತೆ ಮುಳುವಾದ ಉದಾಹರಣೆಯೂ ಇದೆ. ಈ ಬಗ್ಗೆ ಮಾಳವಿಕಾ ಮಾತನಾಡಿದ್ದಾರೆ.

ವಂಶಿಕಾ ಪ್ರಕರಣ: ‘ಜನಪ್ರಿಯತೆಯಿಂದ ಬುದ್ಧಿವಂತಿಕೆ ಮೌನವಾಗಿದೆಯೇ?’; ಮಕ್ಕಳ ಪಾಲಕರಿಗೆ ನಟಿ ಮಾಳವಿಕಾ ಬುದ್ಧಿವಾದ
ಮಾಳವಿಕಾ-ವಂಶಿಕಾ
Follow us
ರಾಜೇಶ್ ದುಗ್ಗುಮನೆ
|

Updated on: Jul 17, 2023 | 12:09 PM

ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳ ಸಂಖ್ಯೆ ಹೆಚ್ಚುತ್ತಿದೆ. ಸಣ್ಣ ವಯಸ್ಸಿನಲ್ಲೇ ಸಾಕಷ್ಟು ಜನಪ್ರಿಯತೆ ಪಡೆದ ಅನೇಕರಿದ್ದಾರೆ. ಕೆಲವೊಮ್ಮೆ ಈ ಜನಪ್ರಿಯತೆ ಮುಳುವಾದ ಉದಾಹರಣೆಯೂ ಇದೆ. ಇದಕ್ಕೆ ಉತ್ತಮ ಸಾಕ್ಷಿ ವಂಶಿಕಾ. ಅವಳಿಗೆ ಸಣ್ಣ ವಯಸ್ಸಿನಲ್ಲೇ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಇದನ್ನು ಕೆಲವರು ದುರ್ಬಳಕೆ ಮಾಡಿಕೊಂಡಿದ್ದಾರೆ. ವಂಶಿಕಾ (Vanshika) ಹೆಸರಲ್ಲಿ ಸಾಕಷ್ಟು ಜನರಿಗೆ ಮೋಸ ಮಾಡಲಾಗಿದೆ. ಇದು ವಂಶಿಕಾ ಮನಸ್ಸಿನ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಈ ಕುರಿತು ಹಿರಿಯ ನಟಿ ಮಾಳವಿಕಾ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಂಶಿಕಾ ಹೆಸರು ಉಲ್ಲೇಖಿಸದೇ ಒಂದಷ್ಟು ವಿಚಾರಗಳನ್ನು ಬರೆದುಕೊಂಡಿದ್ದಾರೆ.

‘ನಾನು ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ನಟಿಸಿದ್ದೆ. ನನ್ನ ಸಮಯದಲ್ಲಿ ನಟಿಸಿದ್ದ ಅನೇಕರ ಬಗ್ಗೆ ನನಗೆ ತಿಳಿದಿದೆ. ಮಕ್ಕಳಿಗೆ ಸಿಗುತ್ತಿರುವ ಎಕ್ಸ್​ಪೋಶರ್​ಗಳನ್ನು ಯಾವಾಗ ನಿಲ್ಲಿಸಬೇಕು ಎಂಬುದು ಪಾಲಕರಿಗೆ ಗೊತ್ತಿರಬೇಕು. ಮಗು ತನ್ನನ್ನು ಗಂಭೀರವಾಗಿ ಪರಿಗಣಿಸುವ ಮೊದಲು ಅದನ್ನು ನಿಲ್ಲಿಸಬೇಕು’ ಎಂದು ಮಾಳವಿಕಾ ಅಭಿಪ್ರಾಯ ತಿಳಿಸಿದ್ದಾರೆ.

‘ಮಗು ತಾನು ಸ್ಟಾರ್ ಎಂದು ಭಾವಿಸುತ್ತಿದೆ ಎಂಬುದನ್ನು ಪೋಷಕರು ಗ್ರಹಿಸಬಹುದು. ಅದು ಬಣ್ಣದ ಲೋಕ ತೊರೆಯುವ ದಿನ. ಮಗು ಸಂಪಾದಿಸುವ ಹಣದಿಂದ, ಮಗು ಗಳಿಸಿದ ಸ್ಟಾರ್‌ಡಮ್‌ನಿಂದ ಪೋಷಕರು ಪ್ರಭಾವಿತರಾಗಬಾರದು. ಆಮಿಷದಿಂದ ದೂರವಿರುವುದು ಕಠಿಣ ಆದರೆ ಅಸಾಧ್ಯವಲ್ಲ’ ಎಂದಿದ್ದಾರೆ ಮಾಳವಿಕಾ ಅವಿನಾಶ್.

‘ನನಗೆ ಮತ್ತು ಇತರ ಕೆಲವರಿಗೆ ನಾವು ದೊಡ್ಡವರಾದ ಮೇಲೆ ನಮಗೆ ಸ್ಟಾರ್​ಡಂ ಸಿಕ್ಕಿತು. ಸಣ್ಣವನಾಗಿದ್ದಾಗ ನಾನು ಜನಪ್ರಿಯ ಬಾಲ ಕಲಾವಿದೆ ಆಗಿರಲಿಲ್ಲ ಎನ್ನುವ ಬಗ್ಗೆ ಖುಷಿ ಇದೆ. ದೊಡ್ಡವನಾಗಿ ನಾನು ಗಳಿಸಿದ ಖ್ಯಾತಿಗೆ ನಾನು ಆದ್ಯತೆ ನೀಡುತ್ತೇನೆ. ಬಾಲನಟಿಯಾಗಿ ಮೆರೆದ ಬಹುತೇಕರಿಗೆ ದೊಡ್ಡವರಾದಾಗ ಮಿಂಚುವ ಅವಕಾಶ ಸಿಗೋದು ಬಹಳ ವಿರಳ ಅಥವಾ ಇಲ್ಲವೇ ಇಲ್ಲ. ಬಹುಶಃ ಇದು ಪ್ರಕೃತಿಯ ನಿಯಮ. ಎಲ್ಲರಿಗೂ ಎಲ್ಲವೂ ಸಿಗುವುದಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ವಂಶಿಕಾ ಹೆಸರಿನಲ್ಲಿ ವಂಚನೆ ಎಸಗಿದ ಆರೋಪಿ ನಿಶಾ ನರಸಪ್ಪ ವಿರುದ್ಧ ದಾಖಲಾದ ಮತ್ತಷ್ಟು ದೂರುಗಳು

ನೃತ್ಯ, ನಟನೆ ಇದು ನಿಮಗೆ ಅಲ್ಪಾವಧಿಯ ಖ್ಯಾತಿಯನ್ನು ತರಬಲ್ಲದು ಎಂದಿರುವ ಮಾಳವಿಕಾ ಅವಿನಾಶ್ ಅವರು ರಿಯಾಲಿಟಿ ಶೋಗಳ ಬಗ್ಗೆ ಆತಂಕ ಹೊರಹಾಕಿದ್ದಾರೆ.  ‘ಹಣ ಮತ್ತು ಜನಪ್ರಿಯತೆಯಿಂದ ಬುದ್ಧಿವಂತಿಕೆಯು ಮೌನವಾಗಿದೆಯೇ ಅಥವಾ ಇದು ಕೇವಲ ಕರ್ಮವೇ? ತಾತ್ಕಾಲಿಕ ವೈಭವಕ್ಕಾಗಿ ಹೆತ್ತವರು ಮಗುವಿನ ಮುಗ್ಧತೆಯನ್ನು ತುಳಿದು ಹಾಕುವುದನ್ನು ಕಂಡಾಗ ನನಗೆ ಬೇಸರವಾಗುತ್ತದೆ’ ಎಂದು ಮಾಳವಿಕಾ ಅವಿನಾಶ್ ಬರಹ ಪೂರ್ಣಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ