Exclusive: ಚಿತ್ರರಂಗಕ್ಕೆ ಎಂಟ್ರಿ ಕೊಡಲು ಹಿರಿಯ ನಟ ಅಭಿಜಿತ್ ಮಗ ಬಾಲಾಜಿ ರೆಡಿ; ತೆರೆಮರೆಯಲ್ಲಿ ನಡೆದಿದೆ ಸಿದ್ಧತೆ

ಕನ್ನಡ ಚಿತ್ರರಂಗದ ಹಿರಿಯ ನಟ ಅಭಿಜಿತ್ ಅವರ ಪುತ್ರ ಬಾಲಾಜಿ ಬೆಳ್ಳಿ ಪರದೆಗೆ ಪದಾರ್ಪಣೆ ಮಾಡಲು ಸಕಲ ಸಿದ್ಧತೆ ನಡೆಸಿದ್ದಾರೆ. ಡ್ಯಾನ್ಸ್ ಹಾಗೂ ನಟನೆಯ ತರಬೇತಿ ಪಡೆಯುತ್ತಿರುವ ಬಾಲಾಜಿ, ಲವ್ ಸ್ಟೋರಿ ಕಥೆಯೊಂದಿಗೆ ಮುಂದಿನ ವರ್ಷದ ಆರಂಭದಲ್ಲಿ ಸ್ಯಾಂಡಲ್‌ವುಡ್‌ಗೆ ಭರ್ಜರಿ ಎಂಟ್ರಿ ಕೊಡಲಿದ್ದಾರೆ.

Exclusive: ಚಿತ್ರರಂಗಕ್ಕೆ ಎಂಟ್ರಿ ಕೊಡಲು ಹಿರಿಯ ನಟ ಅಭಿಜಿತ್ ಮಗ ಬಾಲಾಜಿ ರೆಡಿ; ತೆರೆಮರೆಯಲ್ಲಿ ನಡೆದಿದೆ ಸಿದ್ಧತೆ
ಅಭಿಜಿತ್
Image Credit source: Tv9 Kannada

Updated on: Nov 12, 2026 | 3:21 PM

ಮುಖ್ಯಾಂಶಗಳು

  • ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಸ್ಟಾರ್ ಕಿಡ್ ಎಂಟ್ರಿ
  • ಹಿರಿಯ ನಟ ಅಭಿಜಿತ್ ಪುತ್ರ ಬಾಲಾಜಿ ಲಾಂಚ್‌ಗೆ ಭರ್ಜರಿ ಸಿದ್ಧತೆ
  • ಮಗನ ಸಿನಿಮಾ ಕುರಿತು ನಟ ಅಭಿಜಿತ್ ಎಕ್ಸ್‌ಕ್ಲೂಸಿವ್ ಮಾತು

ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ ಬರೋದು ಹೊಸದೇನು ಅಲ್ಲ. ಸ್ಯಾಂಡಲ್​ವುಡ್​, ಬಾಲಿವುಡ್ ಸೇರಿದಂತೆ ಎಲ್ಲ ಕಡೆಗಳಲ್ಲೂ ಈ ಸಂಪ್ರದಾಯ ಚಾಲ್ತಿಯಲ್ಲಿದೆ. ಈಗ ಕನ್ನಡದ ಹಿರಿಯ ನಟ ಅಭಿಜಿತ್ ಅವರ ಮಗ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲು ರೆಡಿ ಆಗಿದ್ದಾರೆ. ಅದು ಕೂಡ ಸಕಲ ಸಿದ್ಧತೆಯೊಂದಿಗೆ ಅನ್ನೋದು ವಿಶೇಷ. ಈ ಬಗ್ಗೆ ಅಭಿಜಿತ್ ಅವರು ‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಮಾತನಾಡಿದ್ದಾರೆ.

ಅಭಿಜಿತ್ ಅವರ ಮಗನ ಹೆಸರು ಬಾಲಾಜಿ. ಅವರನ್ನು ಬೆಳ್ಳಿ ಪರದೆಗೆ ಪರಿಚಯಿಸಲು ಅಭಿಜಿತ್ ಅವರು ತೆರೆಮರೆಯಲ್ಲಿ ತಯಾರಿ ನಡೆಸಿದ್ದಾರೆ. ಅಭಿಜಿತ್ ಅವರ ಬಳಿ ಸದ್ಯ ಎರಡು ಆಯ್ಕೆಗಳಿವೆ. ಒಂದು ತಮ್ಮದೇ ಬ್ಯಾನರ್ ‘ಬಾಲಾಜಿ ಕ್ರಿಯೇಷನ್ಸ್​’ ಮೂಲಕ ಮಗನ ಲಾಂಚ್ ಮಾಡೋದು. ಇದಲ್ಲದೆ, ಇನ್ನೂ ಕೆಲವು ನಿರ್ಮಾಣ ಸಂಸ್ಥೆಗಳು ಆಸಕ್ತಿ ತೋರಿಸಿದ್ದು ಆ ಬಗ್ಗೆಯೂ ಚರ್ಚೆಗಳು ನಡೆದಿವೆ. ಇವರೆಡರಲ್ಲಿ ಒಂದು ಆಯ್ಕೆ ಫೈನಲ್ ಆಗಲಿದೆ.

Loading...

‘ಕಥೆಗಳ ಆಯ್ಕೆ ನಡೆಯುತ್ತಿದೆ. ಬಾಲಾಜಿ ಡ್ಯಾನ್ಸ್ ಹಾಗೂ ನಟನೆ ಕಲಿಯುತ್ತಿದ್ದಾನೆ. ಚಿತ್ರರಂಗಕ್ಕೆ ಬರೋದು ದೊಡ್ಡ ವಿಷಯ ಅಲ್ಲವೇ ಅಲ್ಲ. ಬಂದಮೇಲೆ ಉಳಿದುಕೊಳ್ಳೋದು ಮುಖ್ಯವಾಗುತ್ತದೆ. ಹಾಗೆ ಉಳಿದುಕೊಳ್ಳಬೇಕು ಎಂದರೆ ಸಿದ್ಧತೆ ಬೇಕು. ಆ ಸಿದ್ಧತೆಗಳನ್ನು ನನ್ನ ಮಗ ಮಾಡಿಕೊಳ್ಳುತ್ತಿದ್ದಾನೆ. ಪ್ರತಿ ದಿನವೂ ಅಪ್​​ಡೇಟ್ ಆಗಬೇಕು, ಆಗ ಮಾತ್ರ ಬಣ್ಣದ ಲೋಕದಲ್ಲಿ ಉಳಿಯಬಹುದು’ ಎಂಬುದು ಅಭಿಜಿತ್ ಅಭಿಪ್ರಾಯ.

ಇದನ್ನೂ ಓದಿ: ಕರ್ಣ ಧಾರಾವಾಹಿಗೆ ಕಂಬ್ಯಾಕ್ ಮಾಡಿದ ನಮ್ರತಾ ಗೌಡ 

ಸ್ಟಾರ್ ಹೀರೋಗಳ ಮಕ್ಕಳು ಚಿತ್ರರಂಗಕ್ಕೆ ಬರುತ್ತಾರೆ ಎಂದರೆ ಅಭಿಮಾನಿಗಳಲ್ಲಿ ಒಂದು ಕುತೂಹಲ ಇದ್ದೇ ಇರುತ್ತದೆ. ಈ ಕಾರಣಕ್ಕೆ ಅಭಿಜಿತ್ ಅವರು ಈ ಬಗ್ಗೆ ಹೆಚ್ಚು ಜಾಗೃತೆವಹಿಸುತ್ತಿದ್ದಾರೆ. ‘ಅಭಿಜಿತ್ ಮಗ ಎಂದಾಗ ಜನರಲ್ಲಿ ಒಂದು ಕುತೂಹಲ ಇರುತ್ತದೆ. ಆ ಕುತೂಹಲವನ್ನು ಪೂರ್ಣಗೊಳಿಸುವ ಶಕ್ತಿಯನ್ನು ಮಗನು ಬೆಳೆಸಿಕೊಳ್ಳಬೇಕು’ ಎನ್ನುತ್ತಾರೆ ಅಭಿಜಿತ್. ಮಗನ ನಟನೆಗೆ ಅವರು ಕೂಡ ಟಿಪ್ಸ್ ನೀಡುವ ಕೆಲಸ ಮಾಡುತ್ತಿದ್ದಾರೆ.

ಯುವಕರು ಚಿತ್ರರಂಗಕ್ಕೆ ಬರುತ್ತಾರೆ ಎಂದಾಗ ಕಾಲೇಜು ಕಥೆ, ಲವ್​ ಸ್ಟೋರಿ ಆಯ್ಕೆ ಮಾಡಿಕೊಳ್ಳೋದು ಹೆಚ್ಚು. ಅಭಿಜಿತ್ ಮಗ ಕೂಡ ಇದೇ ಮಾದರಿಯ ಕಥೆ ಆಯ್ಕೆ ಮಾಡಿಕೊಳ್ಳುವ ಯೋಜನೆಯಲ್ಲಿದ್ದಾರೆ. ‘ಆರಂಭದಲ್ಲೇ ಪೊಲೀಸ್ ನಂತಹ ಗಂಭೀರ ಪಾತ್ರ ಮಾಡೋಕೆ ಆಗಲ್ಲ. ಲವ್​ ಸ್ಟೋರಿ ರೀತಿಯ ಕಥೆಗಳು ಯುವಕರಿಗೆ ಹೆಚ್ಚು ಸೂಕ್ತ’ ಎಂಬುದು ಅಭಿಜಿತ್ ಮಾತು. ಮುಂದಿನ ವರ್ಷದ ಆರಂಭದ ವೇಳೆಗೆ ಈ ಲಾಂಚ್ ನಡೆಯಲಿದ್ದು ಆ ಸಿನಿಮಾ ಪಾತ್ರವರ್ಗ, ತಾಂತ್ರಿಕ ವರ್ಗದ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:18 pm, Thu, 12 November 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us