ನಾಗಮಂಡಲ, ಸೂರ್ಯವಂಶ ಮುಂತಾದ ಸಿನಿಮಾಗಳಲ್ಲಿ ನಟಿಸಿ ಕರುನಾಡಿನಲ್ಲಿ ಜನಪ್ರಿಯವಾದ ನಟಿ ವಿಜಯಲಕ್ಷ್ಮೀ ಅವರ ಸಹೋದರಿ ಉಷಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಚೆನ್ನೈನಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಷಾ ಅವರಿಗೆ ಸಹಾಯ ಮಾಡುವಂತೆ ಅವರು ಸ್ಯಾಂಡಲ್ವುಡ್ ನಟ ಶಿವರಾಜ್ಕುಮಾರ್ ಬಳಿ ಮನವಿ ಮಾಡಿಕೊಂಡಿದ್ದರು. ಈಗ ವಿನೋದ್ ರಾಜ್ ಅವರು ಸಹಾಯ ಮಾಡಿದ್ದಾರೆ.
ಉಷಾ ಅವರಿಗೆ ಇತ್ತೀಚೆಗೆ ಅನಾರೋಗ್ಯ ಕಾಡಿತ್ತು. ಅವರಿಗೆ ಶಸ್ತ್ರಚಿಕಿತ್ಸೆ ಮಾಡಿಸೋಕೆ ಹಣ ಬೇಕಾಗಿದೆ. . ದಯವಿಟ್ಟು ಇದನ್ನು ಶಿವಣ್ಣ ಅವರ ಗಮನಕ್ಕೆ ತನ್ನಿ ಎಂದು ಕೇಳಿಕೊಳ್ಳುತ್ತೇನೆ. ಇಲ್ಲಿಯೂ ರಜನಿಕಾಂತ್ ಮುಂತಾದ ದೊಡ್ಡ ನಟರು ಇದ್ದಾರೆ. ಅವರಿಗೆ ಕರ್ನಾಟಕದ ಹಿರಿಯರು ವಿಷಯ ತಿಳಿಸಿದರೆ ನಮಗೆ ಸಹಾಯ ಆಗುತ್ತದೆ. ನನಗೆ ಅದನ್ನು ಒಬ್ಬಳೇ ಹೇಗೆ ಮಾಡಬೇಕು ಎಂದು ಗೊತ್ತಾಗುತ್ತಿಲ್ಲ’ ಎಂದು ಅವರು ಅಸಹಾಯಕತೆ ತೋಡಿಕೊಂಡಿದ್ದರು.
ಈ ಬಗ್ಗೆ ವಿಡಿಯೋ ಮಾಡಿರುವ ವಿಜಯಲಕ್ಷ್ಮೀ, ‘ಉಷಾ ಅವರು ಇಂದು ಮಾತನಾಡಿದ್ದಾರೆ. ವಿನೋದ್ ರಾಜ್ ಅವರು ಐದು ಸಾವಿರ ರೂಪಾಯಿ ಸಹಾಯ ಮಾಡಿದ್ದಾರೆ. ಶಿವಣ್ಣ ಅವರು ಆಶೀರ್ವಾದ ಮಾಡಿದ್ದಾರೆ. ನನ್ನ ಕಡೆಯಿಂದ ಏನೋ ತಪ್ಪಾಗಿದ್ದರೂ ಕ್ಷಮಿಸಿ. ನನ್ನ ಮನಸು ತುಂಬಾನೇ ಹಗುರವಾಗಿದೆ’ ಎಂದಿದ್ದಾರೆ.
‘ಯಾರೂ ಸಹಾಯ ಮಾಡಿಲ್ಲ ಅನ್ನೋ ಬೇಸರವಿಲ್ಲ. ಶಿವಣ್ಣ, ಯಶ್ ಮೊದಲಾದವರ ಆಶೀರ್ವಾದ ಇದೆ. ಕರ್ನಾಟಕದ ಅಭಿಮಾನಿಗಳು ಕರೆ ಮಾಡಿ ಧೈರ್ಯ ತುಂಬಿದರು. ಇದು ನಾನು ಹೃದಯದಿಂದ ಹೇಳುತ್ತಿದ್ದೇನೆ. ನೀವು ಇಲ್ಲದೆ ಇದ್ದರೆ ನಾನು ಅನಾಥೆ. ಭವಿಷ್ಯದ ಬಗ್ಗೆ ನನಗೆ ನಂಬಿಕೆ ಬಂದಿದೆ. ಮಾಧ್ಯಮದವರೂ ನನಗೆ ಸಹಾಯ ಮಾಡಿದ್ದಾರೆ. ಅವರಿಗೂ ಧನ್ಯವಾದ ಎಂದಿದ್ದಾರೆ’ ವಿಜಯಲಕ್ಷ್ಮೀ.
ಇದನ್ನೂ ಓದಿ: ಚಿಂತಾಜನಕ ಸ್ಥಿತಿಯಲ್ಲಿ ‘ಸೂರ್ಯವಂಶ’ ನಟಿ ವಿಜಯಲಕ್ಷ್ಮೀ ಸಹೋದರಿ; ಸಹಾಯಕ್ಕಾಗಿ ಶಿವಣ್ಣನಿಗೆ ಮನವಿ