‘ನಾವು ಪೊಲೀಸರ ದಾರಿ ತಪ್ಪಿಸಿಲ್ಲ’; ನಕಲಿ ಮಚ್ಚು ಕೊಟ್ಟಿದ್ದಕ್ಕೆ ಸ್ಪಷ್ಟನೆ ಕೊಟ್ಟ ರಜತ್

|

Updated on: Mar 26, 2025 | 7:30 AM

ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ವಿನಯ್ ಗೌಡ ಮತ್ತು ರಜತ್ ಕಿಶನ್ ರೀಲ್ಸ್‌ಗಾಗಿ ಬಳಸಿದ ನಕಲಿ ಮಚ್ಚಿನಿಂದಾಗಿ ಪೊಲೀಸರ ತನಿಖೆ ಎದುರಿಸುತ್ತಿದ್ದಾರೆ. ಪೊಲೀಸರಿಗೆ ಫೈಬರ್ ಮಚ್ಚು ಸಿಕ್ಕಿದ್ದು, ನಿಜವಾದ ಮಚ್ಚು ಕಾಣೆಯಾಗಿದೆ. ಇದರಿಂದಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರು ತಪ್ಪು ಮಾಡಿಲ್ಲ ಎಂದು ವಾದಿಸಿದ್ದಾರೆ.

‘ನಾವು ಪೊಲೀಸರ ದಾರಿ ತಪ್ಪಿಸಿಲ್ಲ’; ನಕಲಿ ಮಚ್ಚು ಕೊಟ್ಟಿದ್ದಕ್ಕೆ ಸ್ಪಷ್ಟನೆ ಕೊಟ್ಟ ರಜತ್
ರಜತ್ ಕಿಶನ್
Follow us on

ಮಚ್ಚು ಹಿಡಿದು ಸ್ಟೈಲಿಶ್ ಆಗಿ ರೀಲ್ಸ್ ಮಾಡಿದ ವಿನಯ್ ಗೌಡ (Vinay Gowda) ಹಾಗೂ ರಜತ್ ಕಿಶನ್​ಗೆ ಸಂಕಷ್ಟ ಹೆಚ್ಚಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ಇವರು ಈಗ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗಿದ್ದಾರೆ. ನಿಜವಾದ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಲ್ಲದೆ, ವಿಚಾರಣೆ ವೇಳೆ ಪೊಲೀಸರಿಗೆ ರಬ್ಬರ್ ಮಚ್ಚನ್ನು ನೀಡಿದ್ದಾರೆ. ಇದು ಪೊಲೀಸರ ಸಿಟ್ಟನ್ನು ಹೆಚ್ಚಿಸಿದೆ. ಸದ್ಯ ನಿಜವಾದ ಮಚ್ಚಿಗಾಗಿ ಹುಡುಕಾಟ ನಡೆಯುತ್ತಿದೆ. ಹೀಗಿರುವಾಗಲೇ ರಜತ್ ಹಾಗೂ ವಿನಯ್ ಪೊಲೀಸರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂದೆಲ್ಲ ವರದಿ ಆಗಿತ್ತು. ಇದಕ್ಕೆ ಸ್ಪಷ್ಟನೆ ಸಿಕ್ಕಿದೆ.

ರೀಲ್ಸ್​ಗೆ ಬಳಕೆ ಮಾಡಿದ್ದು ಅಸಲಿ ಮಚ್ಚಾದರೆ ಪೊಲೀಸರ ಕೈ ಸೇರಿರುವುದು ಫೈಬರ್ ಮಚ್ಚು. ಪರಿಶೀಲನೆ ಬಳಿಕ ಈ ವಿಚಾರ ಹೊರ ಬಿತ್ತು. ವಿನಯ್ ಹಾಗೂ ರಜತ್ ಅವರು ಪೊಲೀಸರನ್ನು ಬಕ್ರಾ ಮಾಡುವ ಕೆಲಸ ಮಾಡಿದ್ದಾರೆ ಎಂದು ವರದಿ ಆದವು. ಆದರೆ, ಇದು ಕಣ್ತಪ್ಪಿನಿಂದ ಆಗಿದ್ದು ಎಂದು ರಜತ್ ಅವರು ಸ್ಪಷ್ಟನೆ ನೀಡಿದ್ದಾರೆ. ಪೊಲೀಸರ ಕೈಗೆ ಫೈಬರ್ ಮಚ್ಚು ಸೇರಲು ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ.

‘ನಾನು ವಿನಯ್ ರೀಲ್ಸ್ ಮಾಡಿದ್ದೆವು. ಕಲಾವಿದರಾಗಿ ರೀಲ್ಸ್ ಮಾಡಿದ್ದು ಅಷ್ಟೇ ಹೊರತು, ಯಾವುದೇ ಕೆಟ್ಟ ಉದ್ದೇಶಕ್ಕೆ ಮಾಡಿಲ್ಲ. ರೀಲ್ಸ್ ಮಾಡಲು ಬಳಸಿದ್ದ ಮಚ್ಚನ್ನು ಸೆಟ್ ಕಡೆಯಿಂದ ಕಳುಹಿಸಿಕೊಟ್ಟಿದ್ದರು. ನಾವು ಪೊಲೀಸರ ಬಳಿ ಇದ್ದ ಕಾರಣ ಅವರು ಯಾವ ಮಚ್ಚು ಕಳುಹಿಸಿ ಕೊಟ್ಟಿದ್ದಾರೆ ಎಂಬುದು ಗೊತ್ತಿರಲಿಲ್ಲ. ನಾವು ನೋಡಿರಲೂ ಇಲ್ಲ. ಪೊಲೀಸರಿಗೆ ಬೇರೆ ಮಚ್ಚು ಹೋಗಿದೆ ಅನ್ನೋದು ಗೊತ್ತಾಯಿತು. ಪೊಲೀಸರ ದಾರಿತಪ್ಪಿಸುವ ಕೆಲಸ ಮಾಡಿಲ್ಲ. ಸೆಟ್ ಪ್ರಾಪರ್ಟಿ ಮಿಸ್ ಆಗಿದೆ, ಕೊಡುತ್ತೇವೆ. ಬೇಕಂತಲೇ ಮಾಡಿಲ್ಲ’ ಎಂದು ಬಂಧನಕ್ಕೂ ಮೊದಲು ರಜತ್ ಹೇಳಿದ್ದಾರೆ.

ಇದನ್ನೂ ಓದಿ
ವಿನಯ್, ರಜತ್​ಗೆ ಹೆಚ್ಚಿದ ಸಂಕಷ್ಟ; ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್
ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ
ಮಚ್ಚು ಎಲ್ಲಿದೆ ಎಂದು ಪೊಲೀಸರ ಎದುರು ಬಾಯಿಬಿಡದ ರಜತ್‌ ಕಿಶನ್, ವಿನಯ್‌ ಗೌಡ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ

ಇದನ್ನೂ ಓದಿ: ವಿನಯ್, ರಜತ್​ಗೆ ಹೆಚ್ಚಿದ ಸಂಕಷ್ಟ; ತಡರಾತ್ರಿ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್

ನ್ಯಾಯಾಂಗ ಬಂಧನ

ರಜತ್ ಹಾಗೂ ವಿನಯ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಒಂದು ದಿನ ನ್ಯಾಯಾಂಗ ಬಂಧನಕ್ಕೆ ವಹಿಸಿ ಜಡ್ಡ್ ಆದೇಶಿಸಿದ್ದಾರೆ. ಇಂದು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದ್ದು, ಈ ವೇಳೆ ಪೊಲೀಸ್ ಕಸ್ಟಡಿಗೆ ಕೇಳೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.