ರಾಜ್ಕುಮಾರ್ ಕುಟುಂಬದ ಕುಡಿ ವಿನಯ್ ರಾಜ್ಕುಮಾರ್ ಮದುವೆ ವಿಚಾರ ಚರ್ಚೆಗೆ ಬಂದಿದೆ. ಇದಕ್ಕೆ ಕಾರಣ ಆಗಿರೋದು ಒಂದೇ ಒಂದು ಫೋಟೋ. ನಟಿಯೊಬ್ಬರು ಹಂಚಿಕೊಂಡಿರೋ ಫೋಟೋದಿಂದ ಇಷ್ಟೆಲ್ಲ ಗೊಂದಲ ಸೃಷ್ಟಿ ಆಗಿದೆ. ಅಷ್ಟಕ್ಕೂ ಏನಿದು ಫೋಟೋ? ಗೊಂದಲು ಹುಟ್ಟಲು ಕಾರಣ ಏನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ವಿನಯ್ ರಾಜ್ಕುಮಾರ್ ಅವರ ನಟನೆಯ ‘ಒಂದು ಸರಳ ಪ್ರೇಮಕಥೆ’ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಸಿನಿಮಾಗೆ ಸಿಂಪಲ್ ಸುನಿ ನಿರ್ದೇಶನ ಮಾಡಿದ್ದರು. ವಿನಯ್ ರಾಜ್ಕುಮಾರ್ ಹೀರೋ ಆದರೆ, ಸ್ವಾದಿಷ್ಟ ನಾಯಕಿ. ಇವರ ಜೋಡಿ ಗಮನ ಸೆಳೆದಿತ್ತು. ಈ ಚಿತ್ರದಲ್ಲಿ ವಿನಯ್ ಹಾಗೂ ಸ್ವಾದಿಷ್ಟ ಮದುವೆ ಆಗೋ ದೃಶ್ಯ ಬರುತ್ತದೆ. ಆ ಫೋಟೋಗಳನ್ನು ಸ್ವಾದಿಷ್ಟ ಹಂಚಿಕೊಂಡಿದ್ದಾರೆ.
ವಿನಯ್ ಜೊತೆ ಮದುವೆ ಆಗುತ್ತಿರುವ ದೃಶ್ಯಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಸ್ವಾದಿಷ್ಟ ಹಂಚಿಕೊಂಡಿದ್ದಾರೆ. ‘ಹಳೆಯ ಫೋಟೋಗಳು’ ಎಂಬರ್ಥದಲ್ಲಿ ಕ್ಯಾಪ್ಶನ್ ನೀಡಿರೋ ಅವರು ‘ಈ ಸಿನಿಮಾನ ಮರೆಯೋಕೆ ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಮದುವೆ ಆಗುವ ಹುಡುಗಿ ಹೇಗಿರಬೇಕು: ವಿನಯ್ ರಾಜ್ಕುಮಾರ್ ಕಲ್ಪನೆ ಹೀಗಿದೆ
ಈ ಫೋಟೋಗೆ ನಾನಾ ರೀತಿಯ ಕಮೆಂಟ್ಗಳು ಬರುತ್ತಿವೆ. ಕೆಲವರು ಕ್ಯಾಪ್ಶನ್ ಓದದೆ ಈ ಜೋಡಿಗೆ ಅಭಿನಂದನೆ ತಿಳಿಸಿದ್ದಾರೆ. ಇನ್ನೂ ಕೆಲವರು ‘ಜೋಡಿ ಚೆನ್ನಾಗಿದೆ ದಯವಿಟ್ಟು ಇಬ್ಬರು ಮದುವೆಯಾಗಿ’ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಸ್ವಾತಿ ಹಂಚಿಕೊಂಡಿರೋ ಫೋಟೋ ಸಖತ್ ಸದ್ದು ಮಾಡುತ್ತಿದೆ. ಇದರ ಜೊತೆಗೆ ಒಂದಷ್ಟು ಗೊಂದಲಗಳನ್ನೂ ಸೃಷ್ಟಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:47 pm, Fri, 5 July 24