ಬಿಗ್​ಬಾಸ್ ಮನೆಗೆ ಬರಲಿದ್ದಾರೆ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ

ತೆಲುಗಿನ ಕೆಲವು ನಟ-ನಟಿಯರಿಗೆ ವಿಶೇಷ ಪೂಜೆ ಮಾಡಿಸಿ ವೃತ್ತಿಯಲ್ಲಿ ಏಳಿಗೆ ದೊರಕಿಸಿಕೊಟ್ಟಿದ್ದಾರೆ ಎನ್ನಲಾಗುವ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಈ ಬಾರಿ ತೆಲುಗು ಬಿಗ್​ಬಾಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಿಗ್​ಬಾಸ್ ಮನೆಗೆ ಬರಲಿದ್ದಾರೆ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ
Follow us
ಮಂಜುನಾಥ ಸಿ.
|

Updated on:Jul 05, 2024 | 10:59 AM

ಸಿನಿಮಾ ನಟರು, ರಾಜಕಾರಣಿಗಳು ಜ್ಯೋತಿಷ್ಯವನ್ನು ಅತಿಯಾಗಿ ನಂಬುವುದು ಗುಟ್ಟೇನಲ್ಲ. ಕೆಲವು ಸಿನಿಮಾ ನಟರಂತೂ ಪ್ರತಿ ಸಿನಿಮಾ ಒಪ್ಪಿಕೊಳ್ಳುವ ಮುಂಚೆ ಜ್ಯೋತಿಷಿಗಳ ಸಲಹೆ ಪಡೆಯುತ್ತಾರೆ. ನಟಿಯರು ಸಹ ಚಿತ್ರರಂಗದಲ್ಲಿ ಯಶಸ್ಸು ಸಿಗಲೆಂದು ಜ್ಯೋತಿಷಿಗಳ ಬಳಿ ವಿಶೇಷ ಪೂಜೆ ಮಾಡಿಸುತ್ತಾರೆ. ಅಂಥಹಾ ಸೆಲೆಬ್ರಿಟಿ ಜ್ಯೋತಿಷಿಗಳಲ್ಲಿ ವೇಣುಸ್ವಾಮಿ ಸಹ ಒಬ್ಬರು. ಡಿಕೆ ಶಿವಕುಮಾರ್​ಗೂ ಆಪ್ತವಾಗಿರುವ ವೇಣುಸ್ವಾಮಿ, ತೆಲುಗು ಚಿತ್ರರಂಗದ ಸೆಲೆಬ್ರಿಟಿ ಜ್ಯೋತಿಷಿ. ಇದೀಗ ಇವರು ತೆಲುಗು ಬಿಗ್​ಬಾಸ್​ಗೆ ಆಗಮಿಸಲಿದ್ದಾರೆ.

ರಶ್ಮಿಕಾ ಸ್ಟಾರ್ ಆಗುವ ಮುನ್ನ ಪೂಜೆ ಮಾಡಿದ್ದ ಹಾಗೂ ರಕ್ಷಿತ್ ಶೆಟ್ಟಿ ಜೊತೆಗೆ ಮದುವೆ ಬೇಡವೆಂದು ಸಲಹೆ ನೀಡಿದ್ದ ವೇಣು ಸ್ವಾಮಿ ಆ ಬಳಕ ಹಲವು ನಟಿಯರಿಗೆ ವಿಶೇಷ ಪೂಜೆ ಮಾಡಿಸಿ ಅವರ ವೃತ್ತಿ ಜೀವನದಲ್ಲಿ ಏಳ್ಗೆ ಬರುವಂತೆ ಮಾಡಿದ್ದಾರೆ. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿಯೂ ಸಾಕಷ್ಟು ಜನಪ್ರಿಯತೆ ಹೊಂದಿರುವ ವೇಣುಸ್ವಾಮಿ ಪ್ರಭಾಸ್ ಸೇರಿದಂತೆ ಹಲವು ಸೆಲೆಬ್ರಿಟಿಗಳ ಜ್ಯೋತಿಷ್ಯ ವಿಶ್ಲೇಷಣೆ ಮಾಡಿ ಜನಪ್ರಿಯರಾಗಿದ್ದಾರೆ.

ಇದನ್ನೂ ಓದಿ: ಸುಳ್ಳಾಯ್ತು ಭವಿಷ್ಯ, ಕ್ಷಮೆ ಕೇಳಿದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ

ಮುಂದಿನ ತಿಂಗಳು ಅಂದರೆ ಆಗಸ್ಟ್​ನಲ್ಲಿ ತೆಲುಗು ಬಿಗ್​ಬಾಸ್ ಸೀಸನ್ 8 ಪ್ರಾರಂಭವಾಗಲಿದೆ. ಕಳೆದ ಸೀಸನ್​ ಭಾರಿ ಯಶಸ್ವಿ ಆಗಿರುವ ಕಾರಣ ಈ ಬಾರಿ ತುಸು ಮುಂಚಿತವಾಗಿಯೇ ಬಿಗ್​ಬಾಸ್ ಹೊಸ ಸೀಸನ್ ಪ್ರಾರಂಭ ಮಾಡಲಾಗುತ್ತಿದೆ. ಈ ಶೋನಲ್ಲಿ ಈ ಬಾರಿ ಸ್ಪರ್ಧಿಯಾಗಿ ವೇಣು ಸ್ವಾಮಿ ಸಹ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಕನ್ನಡ ಬಿಗ್​ಬಾಸ್ ಶೋನಲ್ಲಿ ಗುರೂಜಿಗಳು, ಜ್ಯೋತಿಷಿಗಳನ್ನು ಕರೆತರುವುದು ಸಾಮಾನ್ಯ ಎಂಬಂತಾಗಿದೆ. ಈಗ ತೆಲುಗಿನಲ್ಲೂ ಜ್ಯೋತಿಷಿಯನ್ನು ಶೋಗೆ ಕರೆತರಲಾಗುತ್ತಿದೆ.

ಬಿಗ್​ಬಾಸ್ ತೆಲುಗಿನಲ್ಲಿ ಈ ಬಾರಿ ಸಿನಿಮಾ, ಟಿವಿ ಅವರಿಗಿಂತಲೂ ಸಾಮಾಜಿಕ ಜಾಲತಾಣದ ಮೂಲಕ ಜನಪ್ರಿಯರಾದವರ ಸಂಖ್ಯೆ ಹೆಚ್ಚಿರಲಿದೆ ಎನ್ನಲಾಗುತ್ತಿದೆ. ರಸ್ತೆ ಬದಿ ಹೋಟೆಲ್ ಇಟ್ಟು ಭಾರಿ ದುಬಾರಿ ಬೆಲೆಗೆ ಆಹಾರ ಮಾರುವ ಕುಮಾರಿ ಆಂಟಿ, ಜೋಡಿಯಾಗಿ ದೇಶ-ವಿದೇಶ ಸುತ್ತಿ ಬ್ಲಾಗ್ ಮಾಡುವ ಜೋಡಿ, ತಂದೆಯಿಂದಲೇ ಪತಿಯನ್ನು ಕಳೆದುಕೊಂಡ ಅಮೃತಾ ಪ್ರಣಯ್ ಇನ್ನೂ ಹಲವರು ಈ ಬಾರಿ ಬಿಗ್​ಬಾಸ್ ಶೋಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:58 am, Fri, 5 July 24