ಯುಗಾದಿ ಹಬ್ಬಕ್ಕೆ ಸಿಹಿ ಸುದ್ದಿ ನೀಡಿದ ದೊಡ್ಮನೆ ಕುಟುಂಬದ ಕುಡಿ; ಖಡಕ್ ಖದರಿನಲ್ಲಿ ವಿನಯ್ ರಾಜ್​ಕುಮಾರ್

guruganesh bhat

guruganesh bhat |

Updated on: Apr 14, 2021 | 3:09 PM

ಪೆಪೆ ಸಿನಿಮಾದ ಬಿಡುಗಡೆಯಾದ ಪೋಸ್ಟರ್​ನಲ್ಲಿ ವಿನಯ್  ರೌಡಿಸಂ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.  ಹೀಗಾಗಿ ಈವರೆಗಿನ ಅವರ ಸಿನಿಮಾಗಳಿಗಿಂತ ಇದು ಭಿನ್ನವಾಗಿರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ  ಹುಟ್ಟಿಕೊಂಡಿದೆ. 

ಯುಗಾದಿ ಹಬ್ಬಕ್ಕೆ ಸಿಹಿ ಸುದ್ದಿ ನೀಡಿದ ದೊಡ್ಮನೆ ಕುಟುಂಬದ ಕುಡಿ; ಖಡಕ್ ಖದರಿನಲ್ಲಿ ವಿನಯ್ ರಾಜ್​ಕುಮಾರ್
ಪೆಪೆ ಸಿನಿಮಾ ಪೋಸ್ಟರ್

ದೊಡ್ಮನೆ ವಂಶದ ಕುಡಿ ವಿನಯ್ ರಾಜ್​ಕುಮಾರ್ ಮುಂದಿನ ಸಿನಿಮಾ ‘ಪೆಪೆ’ ಪೋಸ್ಟರ್ ಬಿಡುಗಡೆಯಾಗಿದೆ. ಶ್ರೀಲೇಶ್ ಎಸ್ ನಾಯರ್ ನಿರ್ದೇಶಿಸುತ್ತಿರುವ ಸಿನಿಮಾವನ್ನು ಉದಯ ಶಂಕರ್ ಎಸ್. ಮತ್ತು ನಿಜಗುಣ ಗುರುಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ. ಈ ಕುರಿತು ಸ್ವತಃ ರಾಘವೇಂದ್ರ ರಾಜ್​ಕುಮಾರ್ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಪೋಸ್ಟ್​ಗೆ ದೊಡ್ಮನೆ ಕುಟುಂಬದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ಈಗಾಗಲೇ ಸಿದ್ಧಾರ್ಥ, ರನ್ ಆ್ಯಂಟನಿ, ಅನಂತು ವರ್ಸಸ್ ನುಸ್ರತ್ ಸಿನಿಮಾಗಳಿಂದ ಕನ್ನಡಿಗರ ಮನ ಗೆದ್ದಿರುವ ವಿನಯ್ ರಾಜ್​ಕುಮಾರ್ ‘ಪೆಪೆ’ ಕುರಿತು ನಿರೀಕ್ಷೆಗಳು ತುಂಬಾನೇ ಹೆಚ್ಚಿವೆ. ಅಲ್ಲದೇ ಗ್ರಾಮಾಯಣ ಮತ್ತು ಕರಂ ಚಾವ್ಲಾ ನಿರ್ದೇಶನದ ಇನ್ನೊಂದು 10 ಸಿನಿಮಾ ಸಹ ಚಿತ್ರಮಂದಿರಗಳಿಗೆ ಅಪ್ಪಳಿಸಲು ಸಿದ್ಧವಾಗಿವೆ. ಈ ಹೊತ್ತಲ್ಲೇ ದೊಡ್ಮನೆ ವಂಶದ ಕುಡಿಯ ಇನ್ನೊಂದು ಸಿನಿಮಾ ಘೋಷಣೆಯಾದಂತಾಗಿದೆ.

ತಾಜಾ ಸುದ್ದಿ

ಪೆಪೆ ಸಿನಿಮಾದ ಬಿಡುಗಡೆಯಾದ ಪೋಸ್ಟರ್​ನಲ್ಲಿ ವಿನಯ್  ರೌಡಿಸಂ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.  ಹೀಗಾಗಿ ಈವರೆಗಿನ ಅವರ ಸಿನಿಮಾಗಳಿಗಿಂತ ಇದು ಭಿನ್ನವಾಗಿರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ  ಹುಟ್ಟಿಕೊಂಡಿದೆ.

ವಿನಯ್ ನ ಮುಂದಿನ ಚಿತ್ರ ‘ಪೆಪೆ | Pepe’. All the best to the entire team. 👍🏼 Vinay Rajkumar

Posted by Raghavendra Rajkumar on Tuesday, April 13, 2021

ಇಂದಷ್ಟೇ ಇನ್ನೊಂದು ಹೊಸ ಸುದ್ದಿ ಕೊಟ್ಟ ದೊಡ್ಮನೆ ಕುಟುಂಬ ಯುಗಾದಿಯ ಶುಭ ಸಂದರ್ಭದಲ್ಲಿ ಯುವರತ್ನ ಹೊಸ ಸುದ್ದಿ ನೀಡಿದ್ದಾನೆ. ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ಮುಂದಿನ ಚಿತ್ರ ಘೋಷಣೆಯಾಗಿದೆ. ಹೊಂಬಾಳೆ ಫಿಲ್ಮ್ ನಿರ್ಮಿಸಲಿರುವ ಪುನೀತ್ ರಾಜ್​ಕುಮಾರ್ ಮುಂದಿನ ಸಿನಿಮಾವನ್ನು ಲೂಸಿಯಾ ಪವನ್ ನಿರ್ದೇಶಿಸಲಿದ್ದಾರೆ. ಈ ಕುರಿತು ಸ್ವತಃ ಪುನೀತ್ ರಾಜ್​ಕುಮಾರ್ ಟ್ವೀಟ್ ಮಾಡಿ ವಿಷಯ ಬಹಿರಂಗಪಡಿಸಿದ್ದಾರೆ. ಮುಂದಿನ ಸಿನಿಮಾದದಲ್ಲಿ ಲೂಸಿಯಾ ಪವನ್ ಪವರ್​ ಸ್ಟಾರ್​ಗೆ ಯಾವ ಕಥೆ ಹೆಣೆಯುತ್ತಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ: Yuvarathnaa: ಸಿನಿಮಾ ಒಂದೇ ಅಲ್ಲ, ನಿಜ ಜೀವನದಲ್ಲೂ ಎಂ.ಕೆ.ಮಠರ ಬೆನ್ನಿಗೆ ನಿಂತ ಯುವರತ್ನ

Yuvarathnaa: ತೆಲುಗು, ತಮಿಳು, ಹಿಂದಿಯಲ್ಲೂ ಯುವರತ್ನ ದರ್ಬಾರು! ಅಮೇಜಾನ್ ಪ್ರೈಮ್​​ನಲ್ಲಿ ಅಪ್ಪು ಹವಾ

(Vinay Rajkumar new film Pepe poster released on Ugadi 2021)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada