AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಂಧನ’ ಚಿತ್ರದ ಯಶಸ್ಸು ತಡೆಯಲು ನಡೆದಿತ್ತು ಹುನ್ನಾರ; ಆದರೂ ಗೆದ್ದು ಬೀಗಿದ್ದ ವಿಷ್ಣು ಸಿನಿಮಾ

ವಿಷ್ಣುವರ್ಧನ್ ನಟನೆಯ ‘ಬಂಧನ’ ಸಿನಿಮಾ ರಿಲೀಸ್ ಆಗಿದ್ದು 1984ರ ಆಗಸ್ಟ್ 24ರಂದು. ಈ ಸಿನಿಮಾ ರಿಲೀಸ್ ಆಗಿ 40 ವರ್ಷಗಳು ಕಳೆದಿವೆ. ಈಗಲೂ ಸಿನಿಮಾ ಅನೇಕರ ಫೇವರಿಟ್ ಎನಿಸಿಕೊಂಡಿದೆ. ಈ ಸಿನಿಮಾದಿಂದ ವಿಷ್ಣುವರ್ಧನ್ ಅವರು ಗೆಲುವಿನ ನಗೆ ಬೀರಿದ್ದರು.

‘ಬಂಧನ’ ಚಿತ್ರದ ಯಶಸ್ಸು ತಡೆಯಲು ನಡೆದಿತ್ತು ಹುನ್ನಾರ; ಆದರೂ ಗೆದ್ದು ಬೀಗಿದ್ದ ವಿಷ್ಣು ಸಿನಿಮಾ
ಬಂಧನ
ರಾಜೇಶ್ ದುಗ್ಗುಮನೆ
|

Updated on: Aug 23, 2024 | 11:39 AM

Share

ವಿಷ್ಣುವರ್ಧನ್ ನಟನೆಯ ‘ಬಂಧನ’ ಸಿನಿಮಾ ರಿಲೀಸ್ ಆಗಿ ನಾಳೆಗೆ (ಆಗಸ್ಟ್ 24) ಬರೋಬ್ಬರಿ 40 ವರ್ಷ. 1984ರಲ್ಲಿ ರಿಲೀಸ್ ಆದ ಈ ಚಿತ್ರ ವಿಷ್ಣುವರ್ಧನ್ ಅವರ ವೃತ್ತಿ ಜೀವನದಲ್ಲಿ ಪ್ರಮುಖ ಎನಿಸಿಕೊಂಡಿತ್ತು. ಈ ಸಿನಿಮಾದಲ್ಲಿ ವಿಷ್ಣು ಹಾಗೂ ಸುಹಾಸಿನಿ ಕೆಮಿಸ್ಟ್ರಿ ಜನರಿಗೆ ಇಷ್ಟ ಆಯಿತು. ಈ ಚಿತ್ರಕ್ಕೆ ರಾಷ್ಟ್ರ, ರಾಜ್ಯ ಹಾಗೂ  ಫಿಲ್ಮ್​ಫೇರ್​ ಪ್ರಶಸ್ತಿಗಳು ಬಂದವು. ಈ ಚಿತ್ರ ಯಶಸ್ಸು ಕಾಣಬಾರದು ಎಂದು ಅನೇಕರು ಹುನ್ನಾರ ನಡೆಸಿದ್ದರು. ಆದರೆ, ಅದನ್ನೂ ಮೀರಿ ಸಿನಿಮಾ ಗೆಲುವು ಕಂಡಿತ್ತು.

‘ಬಂಧನ’ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ಅವರೇ ನಿರ್ಮಾಣ ಕೂಡ ಮಾಡಿದ್ದರು. ಉಶಾ ನವರತ್ನರಾಮ್ ಬರೆದ ‘ಬಂಧನ’ ಕಾದಂಬರಿ ಆಧರಿಸಿ ಈ ಸಿನಿಮಾ ಮಾಡಲಾಯಿತು. ಈ ಚಿತ್ರಕ್ಕೆ ಈಗ 40ರ ಸಂಭ್ರಮ. ಈ ಸಿನಿಮಾ 1985ರಲ್ಲಿ ತಮಿಳಿಗೆ ‘ಪ್ರೇಮ ಪಾಶಂ’ ಹೆಸರಲ್ಲಿ ರಿಮೇಕ್ ಆಯಿತು. ‘ಡಾ. ನಂದಿನಿ’ ಎಂಬ ಹೆಸರಲ್ಲಿ ತೆಲುಗಿಗೆ ಈ ಸಿನಿಮಾ ಡಬ್ ಆಯಿತು. ಈ ಚಿತ್ರವನ್ನು ಮಲಯಾಳಂ ಭಾಷೆಗೂ ಡಬ್ ಮಾಡಿ ರಿಲೀಸ್ ಮಾಡಲಾಯಿತು. ಈ ಸಿನಿಮಾದಲ್ಲಿ ಬರೋ ನಂದಿನಿ ಪಾತ್ರ ಸಾಕಷ್ಟು ಜನಪ್ರಿಯತೆ ಪಡೆಯಿತು.

ವಿಷ್ಣು ಅಂದಿನ ಕಾಲಕ್ಕೆ ಆ್ಯಕ್ಷನ್ ಸಿನಿಮಾಗಳನ್ನು ಮಾಡುತ್ತಿದ್ದರು. ಅವರು ಲವ್​​ಸ್ಟೋರಿ ಸಿನಿಮಾ ಮಾಡುತ್ತಾರೆ ಎಂದಾಗ ಅನೇಕರು ನಕ್ಕಿದ್ದರಂತೆ. ಅವರಲ್ಲರಿಗೂ ‘ಬಂಧನ’ ಸಿನಿಮಾದಿಂದ ಉತ್ತರ ಸಿಕ್ಕಿತ್ತು. 25 ಕೇಂದ್ರಗಳಲ್ಲಿ ಈ ಸಿನಿಮಾ 25 ವಾರ ಪ್ರದರ್ಶನ ಕಂಡಿತ್ತು. ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ ಸಿನಿಮಾನ ತೆಗೆಸಲಾಯಿತು. ಈ ಸಿನಿಮಾಗೆ ಯಶಸ್ಸು ಸಿಗಬಾರದು ಎಂದು ಕೆಲವರು ಬಂದ ಪ್ರೇಕ್ಷಕರಿಗೆ ಥಿಯೇಟರ್​ನಲ್ಲಿ ಖಾರದಪುಡಿ ಎರಚಿದ್ದರು. ಕೆಲವರು ಬ್ಲೇಡ್​ನಲ್ಲಿ ಹೊಡೆಯುವ ಕೆಲಸ ಕೂಡ ಮಾಡಿದರು. ಆದಾಗ್ಯೂ ಸಿನಿಮಾ ಗೆದ್ದಿತ್ತು.

ಇದನ್ನೂ ಓದಿ: ವಿಷ್ಣುವರ್ಧನ್ ಸಸ್ಯಹಾರಿಯೋ, ಮಾಂಸಾಹಾರಿಯೋ? ಅಚ್ಚರಿಯ ವಿಚಾರ ತಿಳಿಸಿದ ಹಿರಿಯ ನಿರ್ದೇಶಕ

ವಿಷ್ಣುವರ್ಧನ್ ಅವರಿಗೆ ಕಪಾಳಕ್ಕೆ ಹೊಡೆಯೋ ದೃಶ್ಯ ಇತ್ತು. ಇದನ್ನು ಮಾಡೋಕೇ ಸುಹಾಸಿನಿ ಒಪ್ಪಿರಲಿಲ್ಲ. ‘ವಿಷ್ಣುವರ್ಧನ್​ಗೆ ಕಪಾಳಕ್ಕೆ ಹೊಡೆಯೋ ದೃಶ್ಯ ಇಟ್ಟಿದೀರಲ್ಲ’ ಎಂದು ರಾಜೇಂದ್ರ ಸಿಂಗ್ ಬಾಬು ಜೊತೆ ಸುಹಾಸಿನಿ ಶೂಟಿಂಗ್​ನ ಮೊದಲ ದಿನವೇ ಜಗಳ ಕೂಡ ಮಾಡಿದ್ದರು. ವಿಷ್ಟು ಅಭಿಮಾನಿಗಳು ಹಾಗೂ ಸಿನಿಪ್ರಿಯರು ಈ ಚಿತ್ರವನ್ನು ಈಗ ನೆನಪಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More