‘ನನ್ನ ಅಭಿಮಾನಿಗಳು ತಲೆ ತಗ್ಗಿಸೋ ಕೆಲಸ ಯಾವಾಗಲೂ ಮಾಡಲ್ಲ’; ಯಶ್ ಹಳೆಯ ವಿಡಿಯೋ ವೈರಲ್

ಯಶ್ ಅವರು ಪ್ಯಾನ್ ಇಂಡಿಯಾ ಹೀರೋ ಆಗಿದ್ದಾರೆ. ಈ ಕಾರಣಕ್ಕೆ ಅವರು ಮೊದಲಿನಷ್ಟು ಅಭಿಮಾನಿಗಳಿಗೆ ಲಭ್ಯವಿಲ್ಲ. ಹಾಗಂತ ಅವರಿಗೆ ಅಭಿಮಾನಿಗಳ ಮೇಲೆ ಇರೋ ಗೌರವ, ಪ್ರೀತಿ ಕಡಿಮೆ ಆಗಿಲ್ಲ. ಯಾರಾದರೂ ಅಭಿಮಾನಿಗಳು ಸಿಕ್ಕರೆ ಯಶ್ ಪ್ರೀತಿಯಿಂದ ಫೋಟೋಗೆ ಪೋಸ್ ಕೊಡುತ್ತಾರೆ.

‘ನನ್ನ ಅಭಿಮಾನಿಗಳು ತಲೆ ತಗ್ಗಿಸೋ ಕೆಲಸ ಯಾವಾಗಲೂ ಮಾಡಲ್ಲ’; ಯಶ್ ಹಳೆಯ ವಿಡಿಯೋ ವೈರಲ್
ಯಶ್
Edited By:

Updated on: Jun 15, 2024 | 9:30 AM

ಅಶ್ಲೀಲ ಸಂದೇಶ ಕಳುಹಿಸಿ ಕೊಲೆಯಾದ ರೇಣುಕಾ ಸ್ವಾಮಿ (Renuka Swamy) ಕೇಸ್​ನಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟಹಾಕಿದೆ. ಅವರಿಂದಾಗಿ ಸ್ಯಾಂಡಲ್​ವುಡ್ ತಲೆ ತಗ್ಗಿಸುವಂತೆ ಆಗಿದೆ. ಕೊಲೆ ಕೇಸ್​ನಲ್ಲಿ ದರ್ಶನ್ ಬಂಧನಕ್ಕೆ ಒಳಗಾದರೂ ಅವರ ಫ್ಯಾನ್ಸ್ ಬೆಂಬಲ ಸೂಚಿಸುತ್ತಿದ್ದಾರೆ. ಈ ಕಾರಣಕ್ಕೆ ಅವರು ಟೀಕೆಗೆ ಒಳಗಾಗುತ್ತಿದ್ದಾರೆ. ಈ ಮಧ್ಯೆ ಯಶ್ ಅಭಿಮಾನಿಗಳು ಅವರು ಈ ಮೊದಲು ಹೇಳಿದ ಹೇಳಿಕೆಯೊಂದರ ವಿಡಿಯೋನ ವೈರಲ್ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ಯಶ್ ಅವರು ಅಭಿಮಾನಿಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದರು. ಅಷ್ಟೇ ಅಲ್ಲ, ಅಭಿಮಾನಿಗಳು ತಲೆ ತಗ್ಗಿಸೋ ಕೆಲಸ ಮಾಡಲ್ಲ ಎಂದಿದ್ದರು. ಈ ಮಾತನ್ನು ಅವರು ಈಗಲೂ ಉಳಿಸಿಕೊಂಡು ಬರುತ್ತಿದ್ದಾರೆ.

ಯಶ್ ಅವರು ಪ್ಯಾನ್ ಇಂಡಿಯಾ ಹೀರೋ ಆಗಿದ್ದಾರೆ. ಈ ಕಾರಣಕ್ಕೆ ಅವರು ಮೊದಲಿನಷ್ಟು ಅಭಿಮಾನಿಗಳಿಗೆ ಲಭ್ಯವಿಲ್ಲ. ಹಾಗಂತ ಅವರಿಗೆ ಅಭಿಮಾನಿಗಳ ಮೇಲೆ ಇರೋ ಗೌರವ, ಪ್ರೀತಿ ಕಡಿಮೆ ಆಗಿಲ್ಲ. ಯಾರಾದರೂ ಅಭಿಮಾನಿಗಳು ಸಿಕ್ಕರೆ ಯಶ್ ಪ್ರೀತಿಯಿಂದ ಫೋಟೋಗೆ ಪೋಸ್ ಕೊಡುತ್ತಾರೆ. ತಪ್ಪು ಮಾಡಿದಾಗ ತಿದ್ದಿ ಹೇಳುತ್ತಾರೆ. ಯಶ್ ಎಲ್ಲರಿಗೂ ಮಾದರಿ ಎಂದು ಫ್ಯಾನ್ಸ್ ಹೇಳಿಕೊಳ್ಳುತ್ತಿದ್ದಾರೆ.

‘ನನ್ನ ಫೇವರಿಟ್ ಹೀರೋ ಯಶ್ ಎಂದು ಅನೇಕರು ಹೇಳುತ್ತಾರೆ. ಅವರು ಯಾವಾಗಲೂ ತಲೆ ತಗ್ಗಿಸಬಾರದು’ ಎಂದು ಯಶ್ ಈ ಮೊದಲು ಹೇಳಿದ್ದರು. ‘ನೀವು ತಲೆ ತಗ್ಗಿಸೋ ಕೆಲಸ ಯಾವಾಗಲೂ ಮಾಡಲ್ಲ. ಯಶ್ ಅಭಿಮಾನಿಗಳು ಎಂದರೆ ತಲೆ ಎತ್ತಿಕೊಂಡು ಓಡಾಡಬೇಕು. ಹಾಗೆ ಬದುಕುತ್ತೇನೆ’ ಎಂದು ಯಶ್ ಈ ಮೊದಲು ಭರವಸೆ ನೀಡಿದ್ದರು. ಈ ಭರವಸೆಯನ್ನು ಅವರು ಉಳಿಸಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ: Yash: ಚಿತ್ರರಂಗ ಬೇಡ ಎಂದು ಹೊರಟಿದ್ದ ಚಿಕ್ಕಣ್ಣ; ಇದನ್ನು ತಡೆದಿದ್ದು ಯಶ್

ಇನ್ನು, ಸ್ಟಾರ್ಸ್ ವಾರ್ ವಿಚಾರದಲ್ಲೂ ದರ್ಶನ್ ಹಾಗೂ ಯಶ್ ಹೇಳಿಕೆಯನ್ನು ಹೋಲಿಕೆ ಮಾಡಲಾಗುತ್ತಿದೆ. ‘ಸ್ಟಾರ್​ವಾರ್ ಎಂದರೆ ಎರಡು ಕೈ ಸೇರಿದರೆ ಮಾತ್ರ ಆಗೋದು’ ಎಂದು ದರ್ಶನ್ ಹೇಳಿದ್ದರು. ಆದರೆ, ಯಶ್ ಅವರು ಈ ವಿಚಾರದಲ್ಲಿ ನೀಡಿದ ಹೇಳಿಕೆ ಗಮನ ಸೆಳೆದಿತ್ತು. ‘ಮತ್ತೋರ್ವ ಹೀರೋಗೆ ಬಯ್ಯಬಾರದು. ನನ್ನ ಫ್ಯಾನ್​ ಆಗಿ ಅವರು ಆ ರೀತಿ ಮಾಡುತ್ತಾರೆ ಎಂದರೆ ಅವುರ ನನ್ನ ಅಭಿಮಾನಿಯೇ ಅಲ್ಲ’ ಎಂದು ಯಶ್ ನೇರ ಮಾತುಗಳಲ್ಲಿ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us