ಕೆಜಿಎಫ್​-2 ಹಿಂದಿ ಅವತರಣಿಕೆ​ಗೆ ಯಶ್​ ಡಬ್​ ಮಾಡ್ತಾರಾ?; ಇಲ್ಲಿದೆ ಉತ್ತರ

ಕೆಜಿಎಫ್​ ಚಾಪ್ಟರ್​ 1 ಹಿಂದಿ ವರ್ಷನ್​ಗೆ ರಾಕಿ ಪಾತ್ರಕ್ಕೆ ಸಚಿನ್​ ಗೋಲೆ ಅವರು ಕಂಠದಾನ ಮಾಡಿದ್ದರು. ಅವರ ವಾಯ್ಸ್​ ಎಲ್ಲರಿಗೂ ಇಷ್ಟವಾಗಿತ್ತು.

ಕೆಜಿಎಫ್​-2 ಹಿಂದಿ ಅವತರಣಿಕೆ​ಗೆ ಯಶ್​ ಡಬ್​ ಮಾಡ್ತಾರಾ?; ಇಲ್ಲಿದೆ ಉತ್ತರ
ಯಶ್

Updated on: Apr 24, 2021 | 5:48 PM

ಕೆಜಿಎಫ್ ಚಾಪ್ಟರ್- 1 ಸ್ಯಾಂಡಲ್​ವುಡ್​ ಮಾತ್ರವಲ್ಲ ಟಾಲಿವುಡ್​, ಕಾಲಿವುಡ್​ ಹಾಗೂ ಬಾಲಿವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಚಿತ್ರ. ಈಗ ಕೆಜಿಎಫ್-2 ಸಿನಿಮಾ ನೋಡೋಕೆ ಎಲ್ಲರೂ ಕಾತುರರಾಗಿದ್ದಾರೆ. ಸಿನಿಮಾ ಜುಲೈ 12ರಂದು ತೆರೆಗೆ ಬರುತ್ತಿದೆ. ಈ ಮಧ್ಯೆ ಹಿಂದಿ ಭಾಷೆಯಲ್ಲಿ ಕೆಜಿಎಫ್​-2ಗೆ ಯಾರು ಡಬ್​ ಮಾಡಲಿದ್ದಾರೆ ಎನ್ನುವ ಪ್ರಶ್ನೆ ಕಾಡುತ್ತಿದೆ.

ಕೆಜಿಎಫ್​ ಚಾಪ್ಟರ್​ 1 ಹಿಂದಿ ವರ್ಷನ್​ಗೆ ರಾಕಿ ಪಾತ್ರಕ್ಕೆ ಸಚಿನ್​ ಗೋಲೆ ಅವರು ಕಂಠದಾನ ಮಾಡಿದ್ದರು. ಅವರ ವಾಯ್ಸ್​ ಎಲ್ಲರಿಗೂ ಇಷ್ಟವಾಗಿತ್ತು. ಈಗ ಕೆಜಿಎಫ್​ 2 ಮೇಲೆ ಭಾರೀ ನಿರೀಕ್ಷೆ ಇರುವುದರಿಂದ ಯಶ್​ ಅವರೇ ಡಬ್​ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಯಶ್ ಅವರೇ ಹಿಂದಿಗೆ ಡಬ್​ ಮಾಡಲಿ ಎಂಬುದು ಅನೇಕರ ಬೇಡಿಕೆ ಕೂಡ ಹೌದು.

ಇತ್ತೀಚೆಗೆ ಯಶ್​ ಕನ್ನಡದ ಡಬ್ಬಿಂಗ್​ ಕೆಲಸ ಪೂರ್ಣಗೊಳಿಸಿದ್ದರು. ಈ ವೇಳೆ ಅವರು ಹಿಂದಿ ಭಾಷೆಗೂ ಡಬ್​ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಸಾಕಷ್ಟು ದಕ್ಷಿಣ ಭಾರತದ ಸಿನಿಮಾಗಳನ್ನು ಹಿಂದಿಗೆ ಡಬ್​ ಮಾಡಿದ ಖ್ಯಾತ ಕಂಠದಾನಿ ಸಂಕೇತ್​ ಮಾತ್ರೆ ಈ ಬಗ್ಗೆ ಮಾತನಾಡಿದ್ದಾರೆ. ಸಚಿನ್​ ಗೋಲಿ ಅವರು ಕೆಜಿಎಫ್​-1 ಅಲ್ಲಿ ಯಶ್​ಗೆ ಕಂಠದಾನ ಮಾಡಿದ್ದರು. ಕೆಜಿಎಫ್​-2ಗೂ ಅವರೆ ಕಂಠದಾನ ಮಾಡಬಹುದು ಎನ್ನುವ ನಿರೀಕ್ಷೆ ನನ್ನದು. ಆದರೆ, ಯಾರು ಕಂಠದಾನ ಮಾಡಬೇಕು ಎಂಬುದನ್ನು ಚಿತ್ರತಂಡವೇ ನಿರ್ಧಾರ ಮಾಡಬೇಕು ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಕೊರೊನಾ ಅಬ್ಬರ ಹೀಗೆಯೇ ಮುಂದುವರಿದರೆ ಕೆಜಿಎಫ್​ 2 ರಿಲೀಸ್​ ದಿನಾಂಕ ಪೋಸ್ಟ್​ಪೋನ್​ ಆಗುತ್ತದೆಯಂತೆ. ದೀಪಾವಳಿಗೆ ಸಿನಿಮಾ ರಿಲೀಸ್​ ಆದರೂ ಆಗಬಹುದು. ​ಯಶ್​ಗೆ ಡಿಸೆಂಬರ್ ಲಕ್ಕಿ. ಹೀಗಾಗಿ, ಡಿಸೆಂಬರ್​​ವರೆಗೆ ಕಾಯುವಂತೆಯೂ ಚಿತ್ರತಂಡ ಪ್ರೇಕ್ಷಕರ ಬಳಿ ಮನವಿ ಮಾಡಿಕೊಳ್ಳಬಹುದು.  ಯಶ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರೆ, ಶ್ರೀನಿಧಿ ಶೆಟ್ಟಿ ಚಿತ್ರದ ನಾಯಕಿ. ಈ ಸಿನಿಮಾದಲ್ಲಿ ಬಾಲಿವುಡ್​ ಸ್ಟಾರ್​ ನಟ ಸಂಜಯ್​ ದತ್​ ಮುಖ್ಯ ವಿಲನ್​ ಆಗಿ ನಟಿಸಿದ್ದಾರೆ. ಕೆಜಿಎಫ್​-2 ಬಾಕ್ಸ್​ ಆಫೀಸ್​ ಗಳಿಕೆಯಲ್ಲಿ ಹೊಸ ದಾಖಲೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: KGF Release Date: ಕೆಜಿಎಫ್-2 ಬಿಡುಗಡೆಗೆ ಕೊರೊನಾ ಅಡ್ಡಗಾಲು; ರಿಲೀಸ್​ ದಿನಾಂಕ ಮುಂದೂಡೋದು ಖಚಿತ?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us