
ರಾಧಿಕಾ ಪಂಡಿತ್ ಹಾಗೂ ಯಶ್ (Yash) ಅವರು ಎಷ್ಟು ಅನ್ಯೋನ್ಯವಾಗಿದ್ದಾರೆ ಎಂದು ಹೊಸದಾಗಿ ಹೇಳಬೇಕಾಗಿಲ್ಲ. ಈ ದಂಪತಿ ಅನೇಕರಿಗೆ ಮಾದರಿ. ಕುಟುಂಬದವರು ಒಪ್ಪಿ ಮದುವೆ ಆಗಿ ಇವರ ದಾಂಪತ್ಯಕ್ಕೆ ಈಗ 9 ವರ್ಷ. ಇತ್ತೀಚೆಗೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ವಿವಾಹ ವಾರ್ಷಿಕೋತ್ಸವ ಅನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇವರ ಪ್ರೇಮ ಕಥೆ ಬಗ್ಗೆ ಯಶ್ ಮಾತನಾಡಿದ್ದರು. ಮನೆಯಲ್ಲಿ ಒಪ್ಪಿದ್ದು ಹೇಗೆ ಎಂದು ಯಶ್ ಹೇಳಿದ್ದರು.
ಯಶ್ ಹಾಗೂ ರಾಧಿಕಾ ಪಂಡಿತ್ ಒಟ್ಟಿಗೆ ಕಿರುತೆರೆಯಲ್ಲಿ ನಟಿಸಿದವರು. ನಂತರ ಹಿರಿತೆರೆಯಲ್ಲೂ ಇವರು ಒಟ್ಟಿಗೆ ಸಿನಿಮಾ ಮಾಡಿದರು. ಅಲ್ಲಿಂದ ಇವರ ಬಾಂಡ್ ಬೆಳೆಯಿತು. ‘ಡ್ರಾಮಾ’ ಸಿನಿಮಾ ಸಂದರ್ಭದಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತು ಎನ್ನಲಾಗಿದೆ. ಆ ಬಳಿಕ ಮದುವೆ ಆಗುವ ನಿರ್ಧಾರಕ್ಕೆ ಬಂದರು. ಎಲ್ಲಿಯೂ ಹೊರಗೆ ಸಾರ್ವಜನಿಕವಾಗಿ ಸುತ್ತಾಡದೆ, ಯಾರ ಬಾಯಿಗೂ ಆಹಾರ ಆಗದೆ ಅವರು ಮೆಚ್ಚುಗೆ ಪಡೆದರು.
ಹಾಗಾದರೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮನೆಯವರನ್ನು ಒಪ್ಪಿಸಿದ್ದು ಹೇಗೆ? ಯಶ್ ತಾಯಿ ಪುಷ್ಪಾಗೆ ಪ್ರೀತಿ ವಿಷಯ ಹೇಗೆ ಗೊತ್ತಾಯಿತು ಎಂಬುದನ್ನು ಯಶ್ ಅವರು ವಿವರಿಸಿದ್ದರು. ಪ್ರಿಯಾಮಣಿ ಎದುರು ಈ ವಿಷಯ ಹೇಳಿಕೊಂಡಿದ್ದರು. ಆ ಅಪರೂಪದ ವಿಡಿಯೋ ಇಲ್ಲಿದೆ. ವಿಡಿಯೋದಲ್ಲಿ ಹೇಳಿದ್ದು ಏನು ಎಂಬ ವಿಷಯದ ಬಗ್ಗೆ ಇಲ್ಲಿದೆ ಮಾಹಿತಿ.
‘ರಾಧಿಕಾನ ನಾನು ವರಮಹಾಲಕ್ಷ್ಮೀ ಹಬ್ಬಕ್ಕೆ ಮನೆಗೆ ಕರೆದುಕೊಂಡು ಹೋದೇ. ಆಗ ಮನೆಯವರಿಗೆ ಗೊತ್ತಾಯ್ತು ಏನೋ ಇದೆ ಎಂದು. ನಾನು ಯಾರನ್ನೂ ಹಬ್ಬಕ್ಕೆ ಕರೆದು ತಂದವನಲ್ಲ. ಆಗ ಅಮ್ಮ ಅವಳಿಗೆ ಮನೆಯ ಚಿನ್ನ ಹಾಕಿದರು. ಆ ಚಿನ್ನದ ಸರವನ್ನು ಮನೆಯವರಿಗೆ ಮಾತ್ರ ಕೊಡೋದು. ಆ ಸರನ ರಾಧಿಕಾಗೆ ಅಮ್ಮ ಹಾಕಿದ್ರು’ ಎಂದು ಹಳೆಯ ಘಟನೆ ನೆನಪಿಸಿಕೊಂಡಿದ್ದರು ಯಶ್.
ಇದನ್ನೂ ಓದಿ: ರಾಧಿಕಾ ಪಾಲಿಗೆ ಯಶ್ ಯಾರು? ಒಂದು ವಿಡಿಯೋ ಮೂಲಕ ವಿವರಿಸಿದ ನಟಿ
‘ಏನಾದರೂ ಮಾಡು, ಯಾರನ್ನು ಮೊದಲು ಸೊಸೆ ಎಂದು ಕರೆದುಕೊಂಡು ಬರ್ತಿಯೋ ಅವಳು ಮಾತ್ರ ಸೊಸೆ’ ಎಂದು ಷರತ್ತು ಹಾಕಿದ್ದರು ಪುಷ್ಪಾ. ‘ನೀನು ಗಂಭೀರವಾಗಿದ್ರೆ ಮಾತ್ರ ಇದನ್ನೆಲ್ಲ ಮಾಡಬೇಕು. ನಂತರ ಯಾರನ್ನೇ ಕರೆದುಕೊಂಡು ಬಂದರೂ ಸೇರಿಸಲ್ಲ. ಲವ್ ಎಂದು ಆಗಿದ್ದು ಅದೇ ಮೊದಲಾಗಿತ್ತು. ಅವಳನ್ನೇ ಮದುವೆ ಆದೆ’ ಎಂದಿದ್ದರು ಯಶ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.