ಮುಂದಿನ ಚಿತ್ರದಲ್ಲಿ ಯಶ್​ಗೆ ಪೊಲೀಸ್ ಪಾತ್ರ? ಐಎಂಡಿಬಿಯಲ್ಲಿ ಲೀಕ್ ಆಯ್ತು ಕಥೆ

ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಕುರಿತು IMDb ನಲ್ಲಿ ರೋಚಕ ಮಾಹಿತಿ ಲೀಕ್ ಆಗಿದೆ. ಮಿಲಿಟರಿ ಅಧಿಕಾರಿಯೊಬ್ಬ ಪೊಲೀಸ್ ಆದ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನರ್ತನ್ ನಿರ್ದೇಶನ, ತೃಪ್ತಿ ಡಿಮ್ರಿ ನಾಯಕಿ ಎಂಬ ಸುದ್ದಿ ಹರಿದಾಡಿದೆ. 'ಟಾಕ್ಸಿಕ್' ನಂತರದ ಯಶ್ ಚಿತ್ರದ ಬಗ್ಗೆ ಈ ಮಾಹಿತಿ ಎಷ್ಟರಮಟ್ಟಿಗೆ ನಿಜ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಮುಂದಿನ ಚಿತ್ರದಲ್ಲಿ ಯಶ್​ಗೆ ಪೊಲೀಸ್ ಪಾತ್ರ? ಐಎಂಡಿಬಿಯಲ್ಲಿ ಲೀಕ್ ಆಯ್ತು ಕಥೆ
ಯಶ್-ತೃಪ್ತಿ

Updated on: Jun 29, 2026 | 12:11 PM

ಮುಖ್ಯಾಂಶಗಳು

  • IMDbಯಲ್ಲಿ ಸೋರಿಕೆ ಆಯ್ತು ಯಶ್ ಮುಂದಿನ ಚಿತ್ರ?
  • ಯಶ್ ಹೊಸ ಚಿತ್ರಕ್ಕೆ ನರ್ತನ್ ನಿರ್ದೇಶನ, ತೃಪ್ತಿ ದಿಮ್ರಿ ನಾಯಕಿ?
  • ಅಧಿಕೃತ ಮಾಹಿತಿ ಎದುರುನೋಡುತ್ತಿರುವ ಯಶ್ ಅಭಿಮಾನಿಗಳು

ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಹೊಸ ಹೊಸ ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್ ಸದ್ಯ ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ಅವರ ಮುಂದಿನ ಬಹುನಿರೀಕ್ಷಿತ ಚಿತ್ರದ ಬಗ್ಗೆ ಅತ್ಯಂತ ಕುತೂಹಲಕಾರಿ ಮಾಹಿತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಜನಪ್ರಿಯ ಸಿನಿಮಾ ಡೇಟಾಬೇಸ್ ಜಾಲತಾಣವಾದ ಐಎಂಡಿಬಿ ಪುಟವೊಂದರಲ್ಲಿ ಯಶ್ ಅವರ ಮುಂಬರುವ ಚಿತ್ರದ ಕಥಾಹಂದರ ಹಾಗೂ ತಾರಾಗಣದ ವಿವರಗಳು ಲೀಕ್ ಆಗಿದ್ದು, ಪ್ರೇಕ್ಷಕರಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಐಎಂಡಿಬಿಯಲ್ಲಿ ಲೀಕ್ ಆದ ಕಥೆ ಏನು?

ಲೀಕ್ ಆಗಿರುವ ಮಾಹಿತಿಯ ಪ್ರಕಾರ, ಯಶ್ ಅವರ ಮುಂದಿನ ಚಿತ್ರವು ಪಕ್ಕಾ ಆ್ಯಕ್ಷನ್ ಹಾಗೂ ಎಮೋಷನಲ್ ಕಥಾಹಂದರವನ್ನು ಹೊಂದಿರಲಿದೆಯಂತೆ. ಐಎಂಡಿಬಿಯಲ್ಲಿ ಚಿತ್ರದ ಕಥೆಯ ಬಗ್ಗೆಯೂ ಬರೆಯಲಾಗಿದೆ. ‘ವೈಯಕ್ತಿಕ ಕಾರಣಗಳಿಂದಾಗಿ ಭಾರತೀಯ ಸೇನೆಯನ್ನು ತೊರೆಯುವ ಮಿಲಿಟರಿ ಅಧಿಕಾರಿ, ನಂತರ ಸ್ಥಳೀಯ ಪೊಲೀಸ್ ಪಡೆಗೆ ಸೇರಲು ನಿರ್ಧರಿಸುತ್ತಾನೆ. ತನ್ನ ಜೀವನದ ಯಾವುದೇ ಸವಾಲುಗಳಲ್ಲೂ ಸೋಲನ್ನೇ ಕಾಣದ ಒಬ್ಬ ‘ಕ್ರೇಜಿ ಮತ್ತು ಮ್ಯಾಡ್ ಪೊಲೀಸ್’ ಅಧಿಕಾರಿಯ ಕಥೆಯೇ ಚಿತ್ರದ ಹೈಲೈಟ್ ಎಂದು ಬರೆಯಲಾಗಿದೆ.

ನರ್ತನ್ ನಿರ್ದೇಶನ; ತೃಪ್ತಿ ದಿಮ್ರಿ ನಾಯಕಿ?

ಈ ಚಿತ್ರಕ್ಕೆ ‘ಮಫ್ತಿ’ ಖ್ಯಾತಿಯ ಭರವಸೆಯ ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಹಾಗೂ ಸದ್ಯ ಬಾಲಿವುಡ್‌ನ ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ತೃಪ್ತಿ ದಿಮ್ರಿ ಯಶ್ ಅವರಿಗೆ ನಾಯಕಿಯಾಗಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಇದು ನಿಜವೇ? ಮೂಡಿದೆ ಪ್ರಶ್ನೆ

‘ಟಾಕ್ಸಿಕ್’ ಸಿನಿಮಾ ಅಧಿಕೃತವಾಗಿ ಸೆಟ್ಟೇರುವುದಕ್ಕೂ ಮೊದಲು, ಯಶ್ ಮತ್ತು ನಿರ್ದೇಶಕ ನರ್ತನ್ ಜೋಡಿ ಹೊಸ ಸಿನಿಮಾ ಮಾಡಬೇಕಿತ್ತು ಎನ್ನುವುದು ಗಾಂಧಿನಗರದ ಹಳೆಯ ಸತ್ಯ. ಆದರೆ, ಕಾರಣಾಂತರಗಳಿಂದಾಗಿ ಆ ಪ್ರಾಜೆಕ್ಟ್ ಮುಂದೂಡಲ್ಪಟ್ಟು, ಯಶ್ ‘ಟಾಕ್ಸಿಕ್’ ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಈಗ ಐಎಂಡಿಬಿಯಲ್ಲಿ ಕಾಣಿಸಿಕೊಂಡಿರುವ ಈ ಲೈನ್ ನೋಡಿ, ‘ನರ್ತನ್ ಮತ್ತು ಯಶ್ ಸಿನಿಮಾ ಈಗ ಮತ್ತೆ ಸೆಟ್ಟೇರುತ್ತಿದೆಯೇ?’ ಅಥವಾ ಇದು ಕೇವಲ ವದಂತಿಯೇ ಎನ್ನುವ ಪ್ರಶ್ನೆ ಮತ್ತು ಕುತೂಹಲ ಅಭಿಮಾನಿಗಳಲ್ಲಿ ದಟ್ಟವಾಗಿದೆ. ಕೆಲವರು ಐಎಂಡಿಬಿ ಪೇಜ್​​ನ ಫೇಕ್ ಆಗಿ ಎಡಿಟ್ ಮಾಡಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:06 pm, Mon, 29 June 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us