ಆ್ಯಂಗ್ರಿ ರ್ಯಾಂಟ್ಮ್ಯಾನ್ (Angry Rantman) ಎಂದೇ ಫೇಮಸ್ ಆಗಿದ್ದ 27 ವರ್ಷದ ಅಭ್ರದೀಪ್ ಸಾಹಾ ಅವರು ನಿಧನ ಹೊಂದಿದ್ದಾರೆ. ಚಿತ್ರವಿಚಿತ್ರವಾಗಿ ಸಿನಿಮಾ ವಿಮರ್ಶೆ ಮಾಡಿ ಅವರು ಫೇಮಸ್ ಆಗಿದ್ದರು. ಸಾಕಷ್ಟು ಜೋಶ್ನಲ್ಲಿ ಸಿನಿಮಾ ವಿಮರ್ಶೆ ಮಾಡುತ್ತಿದ್ದರು. ಇದರ ಜೊತೆಗೆ ಇತರ ವಿಡಿಯೋಗಳನ್ನು ಕೂಡ ಮಾಡುತ್ತಿದ್ದರು. ಅವರಿಗೆ 4.8 ಲಕ್ಷ ಹಿಂಬಾಲಕರು ಇದ್ದರು. ಅವರ ನಿಧನವಾರ್ತೆ ಅನೇಕರಿಗೆ ಶಾಕಿಂಗ್ ಎನಿಸಿದೆ. ಅವರಿಗೆ ಕೇವಲ 27 ವರ್ಷ ವಯಸ್ಸಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಅವರ ಸಾವಿಗೆ ಎಲ್ಲರೂ ಸಾಂತಪ ಸೂಚಿಸುತ್ತಿದ್ದಾರೆ. ಅವರು ನಿಧನ ವಾರ್ತೆ ಅನೇಕರಿಗೆ ಶಾಕಿಂಗ್ ಎನಿಸಿದೆ.
ಆ್ಯಂಗ್ರಿ ರ್ಯಾಂಟ್ಮ್ಯಾನ್ ಅವರಿಗೆ ಆರೋಗ್ಯ ಕೈ ಕೊಟ್ಟಿತ್ತು. ಹೀಗಾಗಿ ಕಳೆದ ತಿಂಗಳು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 11 ದಿನಗಳ ಹಿಂದೆ ಅವರ ತಂದೆ ಆ್ಯಂಗ್ರಿ ರ್ಯಾಂಟ್ಮ್ಯಾನ್ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದರು. ‘ನನ್ನ ಮಗ ಇನ್ನೂ ಐಸಿಯುನಲ್ಲೇ ಇದ್ದಾನೆ’ ಎಂದು ಹೇಳಿದ್ದರು. ದಿನ ಕಳೆದಂತೆ ಆ್ಯಂಗ್ರಿ ರ್ಯಾಂಟ್ಮ್ಯಾನ್ ಆರೋಗ್ಯ ಹದಗೆಡುತ್ತಲೇ ಹೋಯಿತು. ಈಗ ಅವರು ನಿಧನ ಹೊಂದಿದ್ದಾರೆ ಎಂದು ವರದಿ ಆಗಿದೆ.
Only Angry Rantman fan are allowed to liking this post……
One of my fav YouTuber ❤️❤️
Gone too soon 💔💔
RIP 🙏🏻🙏🏻#AngryRantman REST IN PEACEयह क्या है भाई pic.twitter.com/chXODTPsSA
— Neku Nagauri {Nek Sa} (@NekuNagauri3) April 17, 2024
ಎರಡು ದಿನಗಳ ಹಿಂದೆ ರ್ಯಾಂಟ್ಮ್ಯಾನ್ ಆರೋಗ್ಯದ ಬಗ್ಗೆ ಅಪ್ಡೇಟ್ ಒಂದು ಸಿಕ್ಕಿತ್ತು. ಅವರನ್ನು ಸಪೋರ್ಟ್ ಸಿಸ್ಟಮ್ನಲ್ಲಿ ಇಡಲಾಗಿದೆ ಎಂದು ಹೇಳಲಾಗಿತ್ತು. ಈಗ ವೈದ್ಯರಿಗೆ ಅವರನ್ನು ಉಳಿಸೋಕೆ ಸಾಧ್ಯವಾಗಿಲ್ಲ. ಅವರು ನಿಧನ ಹೊಂದಿದ್ದಾರೆ.
ಇದನ್ನೂ ಓದಿ: ವಿನೋದ್ ರಾಜ್ ಸೇರಿ ಅನೇಕರನ್ನು ಪರಿಚಯಿಸಿದ್ದೇಕೆ ದ್ವಾರಕೀಶ್? ವಿಷ್ಣು ಮೇಲಿನ ಸಿಟ್ಟು ಕಾರಣವಾ?
ಆ್ಯಂಗ್ರಿ ರ್ಯಾಂಟ್ಮ್ಯಾನ್ ಪರಿಚಯ ಕನ್ನಡದ ಮಂದಿಗೂ ಇತ್ತು. ಅವರು ‘ಕೆಜಿಎಫ್ 2’ ಸಿನಿಮಾದ ವಿಮರ್ಶೆ ಮಾಡಿದ್ದರು. ‘ರಾಕಿಭಾಯ್ ಪ್ರಧಾನಮಂತ್ರಿ ಆದರೆ ನಮ್ಮ ದೇಶ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಇರುತ್ತದೆ’ ಎಂದು ಕೂಗಿ ಹೇಳಿದ್ದರು. 10 ನಿಮಿಷಗಳ ಈ ವಿಡಿಯೋ ಬರೋಬ್ಬರಿ 17 ಲಕ್ಷ ವೀಕ್ಷಣೆ ಕಂಡಿದೆ. ಅವರು ಕೂಗಾಡಿಕೊಂಡು ಸಿನಿಮಾ ವಿಮರ್ಶೆ ಹೇಳಿದ್ದರು. ಯಶ್ ನಟನೆಯನ್ನು ಹಾಡಿ ಹೊಗಳಿದ್ದರು. ಈ ರೀತಿಯ ವಿಡಿಯೋಗಳಿಂದ ಅವರು ಹೆಚ್ಚು ಪರಿಚಿತರಾಗಿದ್ದರು. ಈಗ ಅವರಿಲ್ಲ ಎಂಬ ವಿಚಾರವನ್ನು ಅನೇಕರಿಗೆ ನಂಬೋಕೆ ಆಗುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Wed, 17 April 24