ಚಿತ್ರೀಕರಣ ಮುಗಿಸಿದ ‘ಯುವ’, ಶೀಘ್ರವೇ ಪ್ರಚಾರಕ್ಕೆ

|

Updated on: Feb 14, 2024 | 10:14 PM

Yuva Rajkumar: ದೊಡ್ಮನೆ ಕುಡಿ ಯುವ ರಾಜ್​ಕುಮಾರ್ ನಟನೆಯ ಮೊದಲ ಸಿನಿಮಾ ‘ಯುವ’ ಸಿನಿಮಾದ ಚಿತ್ರೀಕರಣ ಮುಗಿದಿದೆ. ಸಿನಿಮಾ ಮಾರ್ಚ್ 28ಕ್ಕೆ ಬಿಡುಗಡೆ ಆಗಲಿದೆ.

ಚಿತ್ರೀಕರಣ ಮುಗಿಸಿದ ‘ಯುವ’, ಶೀಘ್ರವೇ ಪ್ರಚಾರಕ್ಕೆ
Follow us on

ಹೊಸ ನಟರ ಸಿನಿಮಾಗಳ ಬಗ್ಗೆ ಕನ್ನಡ ಚಿತ್ರರಂಗಕ್ಕೆ (Sandalwood) ಮತ್ತು ಪ್ರೇಕ್ಷಕರಿಗೂ ಸಹ ನಿರೀಕ್ಷೆಗಳು ಕಡಿಮೆ. ಆದರೆ ಒಂದು ಹೊಸ ನಟನ ಸಿನಿಮಾ ಬಗ್ಗೆ ಇಡೀ ಚಿತ್ರರಂಗ ಹಾಗೂ ಸಿನಿಮಾ ಪ್ರೇಮಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ ಅದುವೇ ‘ಯುವ’. ರಾಘವೇಂದ್ರ ರಾಜ್​ಕುಮಾರ್ ಪುತ್ರ ಯುವ ರಾಜ್​ಕುಮಾರ್ ನಟಿಸುತ್ತಿರುವ ಮೊದಲ ಸಿನಿಮಾ ‘ಯುವ’ ಇದೀಗ ಚಿತ್ರೀಕರಣ ಮುಗಿಸಿದ್ದು, ಪ್ರಚಾರವನ್ನು ಶೀಘ್ರವೇ ಆರಂಭ ಮಾಡುತ್ತಿದೆ.

ಹೊಂಬಾಳೆ ನಿರ್ಮಾಣ ಮಾಡಿ, ಪುನೀತ್ ರಾಜ್​ಕುಮಾರ್ ಅವರ ಮೆಚ್ಚಿನ ನಿರ್ದೇಶಕ ಸಂತೋಷ್ ಆನಂದ್​ರಾಮ್ ನಿರ್ದೇಶನ ಮಾಡಿರು ‘ಯುವ’ ಸಿನಿಮಾದ ಚಿತ್ರೀಕರಣ ಅಂತ್ಯವಾಗಿದ್ದು, ಚಿತ್ರತಂಡ ಒಟ್ಟಿಗೆ ಸೇರಿ ಚಿತ್ರಗಳನ್ನು ತೆಗೆಸಿಕೊಂಡು ಖುಷಿಯಿಂದ ಪ್ಯಾಕಪ್ ಮಾಡಿದೆ. ಸಿನಿಮಾದ ಮುಹೂರ್ತ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್​ಕುಮಾರ್, ಅಶ್ವಿನಿ ಪುನೀತ್ ರಾಜ್​ಕುಮಾರ್, ಹೊಂಬಾಳೆಯ ವಿಜಯ್ ಕಿರಗಂದೂರು ಇನ್ನೂ ಹಲವು ಸ್ಯಾಂಡಲ್​ವುಡ್​ನ ಸೆಲೆಬ್ರಿಟಿಗಳು ಮುಹೂರ್ತದಲ್ಲಿ ಭಾಗಿಯಾಗಿದ್ದರು. ಒಂದು ವರ್ಷ ಕಳೆವ ಮುಂಚೆಯೇ ಸಿನಿಮಾದ ಚಿತ್ರೀಕರಣವನ್ನು ನಿರ್ದೇಶಕ ಸಂತೋಷ್ ಆನಂದ್​ರಾಮ್ ಮುಗಿಸಿದ್ದಾರೆ.

ಇದನ್ನೂ ಓದಿ:Review: ಸರಳವಾದರೂ ತುಂಬ ವಿರಳವಾದ ಪ್ರೇಮಕಥೆಯಾಗಿ ಮೆಚ್ಚುಗೆ ಪಡೆಯುವ ಸುನಿ ಸಿನಿಮಾ

‘ಯುವ’ ಸಿನಿಮಾವು ಯುವ ರಾಜ್​ಕುಮಾರ್ ಅವರಿಗೆ ಲಾಂಚಿಂಗ್ ಪ್ಯಾಡ್ ಆಗಲಿದ್ದು, ಸಿನಿಮಾದ ಕತೆಯನ್ನು ಅಸಲಿಗೆ ಪುನೀತ್ ಅವರಿಗಾಗಿ ಮಾಡಿದ್ದರಂತೆ ಸಂತೋಷ್ ಆನಂದ್​ರಾಮ್, ಆದರೆ ಪುನೀತ್ ಅಗಲಿಕೆ ಬಳಿಕ ಚಿತ್ರಕತೆಯಲ್ಲಿ ತುಸು ಬದಲಾವಣೆಗಳನ್ನು ಮಾಡಿ ಅದನ್ನೇ ಯುವ ರಾಜ್​ಕುಮಾರ್ ಅವರಿಗಾಗಿ ಮಾಡಲಾಗಿದೆ. ಕಾಲೇಜು ಕತೆಯುಳ್ಳ ಆಕ್ಷನ್ ಸಿನಿಮಾ ಇದಾಗಿದ್ದು, ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ.

‘ಯುವ’ ಸಿನಿಮಾದ ಚಿತ್ರೀಕರಣ ಬೆಂಗಳೂರು ಸೇರಿದಂತೆ ಇನ್ನೂ ಕೆಲವು ಕಡೆಗಳಲ್ಲಿ ಅದ್ಧೂರಿಯಾಗಿ ನಡೆದಿದೆ. ಸಿನಿಮಾದಲ್ಲಿ ಯುವ ರಾಜ್​ಕುಮಾರ್, ಸಪ್ತಮಿ ಗೌಡ ಸೇರಿದಂತೆ ಇನ್ನೂ ಕೆಲವು ಹಿರಿಯ ನಟ-ನಟಿಯರು ಸಹ ಇದ್ದಾರೆ. ಈ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್ ಅವರಿಗೆ ವಿಶೇಷ ಗೌರವ ಸಹ ಸಲ್ಲಿಸಲಾಗಿದೆ ಎಂಬ ಮಾತುಗಳು ಸಹ ಇವೆ.

‘ಯುವ’ ಸಿನಿಮಾ ಸೆಟ್ಟೇರಿದಾಗಲೇ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿತ್ತು. ಆದರೆ ಆ ದಿನಾಂಕಕ್ಕೆ ಸಿನಿಮಾ ಬಿಡುಗಡೆ ಮಾಡಲಾಗಿಲ್ಲ. ಸಿನಿಮಾವನ್ನು ಮಾರ್ಚ್ 28ಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾದ ಪ್ರಚಾರ ಕೆಲಸಗಳು ಫೇಬ್ರವರಿ 16ರಿಂದಲೇ ಪ್ರಾರಂಭವಾಗಲಿವೆ. ಸಿನಿಮಾವನ್ನು ಸದ್ಯಕ್ಕೆ ಕನ್ನಡದಲ್ಲಿ ಮಾತ್ರವೇ ಬಿಡುಗಡೆ ಮಾಡಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ