‘ರಕ್ಷಿತ್ ಶೆಟ್ಟಿ ಮೇಲೆ ಒತ್ತಡ ಹಾಕೋದು ನ್ಯಾಯವಲ್ಲ’: ‘ಥಗ್ಸ್​ ಆಫ್​ ಮಾಲ್ಗುಡಿ’ ಬಗ್ಗೆ ಸುದೀಪ್​ ಮಾತು

ಸುದೀಪ್​ ಅವರು ಬಹುನಿರೀಕ್ಷಿತ ‘ಮ್ಯಾಕ್ಸ್​’ ಸಿನಿಮಾದ ಶೂಟಿಂಗ್​ನಲ್ಲಿ ಈಗ ಬ್ಯುಸಿ ಆಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಆ ಸಿನಿಮಾದ ಶೂಟಿಂಗ್​ ಮುಕ್ತಾಯ ಆಗಲಿದೆ ಎಂದು ಕಿಚ್ಚ ಮಾಹಿತಿ ಹಂಚಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

‘ರಕ್ಷಿತ್ ಶೆಟ್ಟಿ ಮೇಲೆ ಒತ್ತಡ ಹಾಕೋದು ನ್ಯಾಯವಲ್ಲ’: ‘ಥಗ್ಸ್​ ಆಫ್​ ಮಾಲ್ಗುಡಿ’ ಬಗ್ಗೆ ಸುದೀಪ್​ ಮಾತು
ಕಿಚ್ಚ ಸುದೀಪ್​, ರಕ್ಷಿತ್​ ಶೆಟ್ಟಿ
Follow us
ಮದನ್​ ಕುಮಾರ್​
|

Updated on:Feb 15, 2024 | 11:27 AM

ನಟ ಕಿಚ್ಚ ಸುದೀಪ್​ ಅವರು ರಕ್ಷಿತ್​ ಶೆಟ್ಟಿ (Rakshit Shetty) ಜೊತೆ ಸಿನಿಮಾ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಇಬ್ಬರ ಕಾಂಬಿನೇಷನ್​ನಲ್ಲಿ ‘ಥಗ್ಸ್​ ಆಫ್​ ಮಾಲ್ಗುಡಿ’ ಸಿನಿಮಾ ಘೋಷಣೆ ಆಗಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲೇ ಇಲ್ಲ. ಸುದೀಪ್​ ಅವರು ಬೇರೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆದರು. ಹಾಗೆಯೇ ರಕ್ಷಿತ್ ಶೆಟ್ಟಿ ಕೂಡ ತಮ್ಮ ಸಿನಿಮಾಗಳಲ್ಲಿ ತೊಡಗಿಕೊಂಡರು. ‘ಥಗ್ಸ್​ ಆಫ್​ ಮಾಲ್ಗುಡಿ’ (Thugs of Malgudi) ಯಾವಾಗ ಬರಲಿದೆ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದಾರೆ. ಆದರೆ ಆ ಸಿನಿಮಾ ಸೆಟ್ಟೇರುವುದು ಬಹುತೇಕ ಅನುಮಾನ ಎಂಬಂತಾಗಿದೆ. ಈ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಕಿಚ್ಚ ಸುದೀಪ್​ (Kichcha Sudeep) ಉತ್ತರ ನೀಡಿದ್ದಾರೆ.

‘ಸರ್​.. ರಕ್ಷಿತ್​ ಶೆಟ್ಟಿ ಅವರ ಜೊತೆ ಥಗ್ಸ್​ ಆಫ್​ ಮಾಲ್ಗುಡಿ ಮಾಡ್ತೀರಾ? ನೀವಿಬ್ಬರು ಜೊತೆಯಾದರೆ ಚೆನ್ನಾಗಿರುತ್ತದೆ’ ಎಂದು ‘ಬೀಯಿಂಗ್​ ಸೋಮಾರಿ’ ಎಂಬ ಟ್ವಿಟರ್​ ಖಾತೆಯ ಬಳಕೆದಾರರು ಪ್ರಶ್ನೆ ಕೇಳಿದ್ದಾರೆ. ಆ ಪ್ರಶ್ನೆಗೆ ಸುದೀಪ್​ ಅವರು ಉತ್ತರ ನೀಡಿದ್ದಾರೆ. ‘ಅದು ಚೆನ್ನಾಗಿರುತ್ತದೆ ಎಂಬುದರ ಬಗ್ಗೆ ನನಗೆ ಖಾತರಿ ಇದೆ. ಈಗ ಅವರಿಗೆ ಅವರದ್ದೇ ಆದ ಜೀವನ ಇದೆ. ಅವರ ಮೇಲೆ ಒತ್ತಡ ಹಾಕುವುದು ನ್ಯಾಯವಲ್ಲ’ ಎಂದು ಸುದೀಪ್​ ಪೋಸ್ಟ್​ ಮಾಡಿದ್ದಾರೆ.

ಸುದೀಪ್​ ಎಕ್ಸ್​ (ಟ್ವಿಟರ್​) ಪೋಸ್ಟ್​:

ಬಿಡುವಿನ ಸಮಯದಲ್ಲಿ ಸುದೀಪ್​ ಅವರು ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸುತ್ತಾರೆ. ಇಂದು (ಫೆಬ್ರವರಿ 15) ಬೆಳಗ್ಗೆ ಕೂಡ ಅವರು ಅಭಿಮಾನಿಗಳಿಂದ ಅನೇಕ ಪ್ರಶ್ನೆಗಳನ್ನು ಸ್ವೀಕರಿಸಿದ್ದಾರೆ. ‘ವರ್ಷಕ್ಕೆ ಎರಡು ಸಿನಿಮಾ ಮಾಡುತ್ತೇನೆ ಅಂತ ಹೇಳಿದ್ರಿ. ಎಲ್ಲಿದೆ ಎರಡು ಸಿನಿಮಾ’ ಎಂದು ಕೆಲವರು ಖಡಕ್​ ಆಗಿ ಪ್ರಶ್ನಿಸಿದ್ದಾರೆ. ‘ಪ್ರಯತ್ನಿಸುತ್ತಿದ್ದೇನೆ. ನನ್ನ ತಂಡದವರು ಇದನ್ನು ಕೇಳಿಸಿಕೊಳ್ಳುತ್ತಿದ್ದಾರೆ ಅಂತ ಭಾವಿಸಿದ್ದೇನೆ’ ಎಂದು ಸುದೀಪ್​ ಅವರು ಉತ್ತರಿಸಿದ್ದಾರೆ.

ಇದನ್ನೂ ಓದಿ: ‘ಮ್ಯಾಕ್ಸ್​ ಸಿನಿಮಾ ಅಪ್​ಡೇಟ್​ ಬಗ್ಗೆ ವ್ಯಂಗ್ಯ ಬೇಡ’: ಸುದೀಪ್​ ಖಡಕ್​ ಎಚ್ಚರಿಕೆ

ಪ್ರಸ್ತುತ ಸುದೀಪ್​ ಅವರು ‘ಮ್ಯಾಕ್ಸ್​’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಇದರ ಚಿತ್ರೀಕರಣ ಮುಕ್ತಾಯ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ನ್ಯೂಸ್​ ಇದ್ದಾಗ ಖಂಡಿತವಾಗಿಯೂ ಅಪ್​ಡೇಟ್ ಕೂಡ ಬರಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ‘ನೀವು ತೆಲುಗಿನ ‘ಈಗ’ ಸಿನಿಮಾದ ರೀತಿಯ ಪಾತ್ರದಲ್ಲಿ ಮತ್ತೆ ಯಾವಾಗ ಕಾಣಿಸಿಕೊಳ್ಳುತ್ತೀರಿ’ ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ. ‘ಇನ್ನೊಬ್ಬರು ಆ ರೀತಿಯ ಕಥೆ ಬರೆದಾಗ’ ಎಂದು ಉತ್ತರಿಸಿದ್ದಾರೆ ಸುದೀಪ್​.

ಪತ್ರಕರ್ತ ಡಾ. ಶರಣು ಹುಲ್ಲೂರು ಅವರು ಬರೆದ ‘ಕನ್ನಡ ಮಾಣಿಕ್ಯ ಕಿಚ್ಚ’ ಪುಸ್ತಕವನ್ನು ತಾವು ಹಲವು ಬಾರಿ ಓದಿರುವುದಾಗಿ ಅಭಿಮಾನಿಯೊಬ್ಬರು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್​ ಅವರು, ‘ಈ ಪುಸ್ತಕ ಬರೆದವರಿಗೆ ಧನ್ಯವಾದಗಳು’ ಎಂದು ಪೋಸ್ಟ್​ ಮಾಡಿದ್ದಾರೆ. ಈ ರೀತಿ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಸುದೀಪ್​ ಉತ್ತರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:26 am, Thu, 15 February 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ