AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮ್ಯಾಕ್ಸ್​ ಸಿನಿಮಾ ಅಪ್​ಡೇಟ್​ ಬಗ್ಗೆ ವ್ಯಂಗ್ಯ ಬೇಡ’: ಸುದೀಪ್​ ಖಡಕ್​ ಎಚ್ಚರಿಕೆ

ಕಿಚ್ಚ ಸುದೀಪ್​ ಅವರು ಬಿಗ್​ ಬಾಸ್​ ಮುಗಿಸಿದ ಬಳಿಕ ಸಿಸಿಎಲ್​ನತ್ತ ಮುಖ ಮಾಡಿದ್ದಾರೆ. ಇದರ ಜೊತೆಗೆ ‘ಮ್ಯಾಕ್ಸ್​’ ಸಿನಿಮಾದ ಕೆಲಸಗಳೂ ಭರದಿಂದ ಸಾಗುತ್ತಿವೆ. ಈ ಚಿತ್ರದಿಂದ ಅಪ್​ಡೇಟ್​ ಬರುವುದು ತಡವಾಗುತ್ತಿದೆ ಎಂಬ ಕಾರಣಕ್ಕೆ ಕೆಲವು ನೆಟ್ಟಿಗರು ವ್ಯಂಗ್ಯ ಮಾಡುತ್ತಿದ್ದಾರೆ. ಅಂಥವರಿಗೆ ಸುದೀಪ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರು ಮಾಡಿರುವ ಟ್ವೀಟ್​ ವೈರಲ್​ ಆಗಿದೆ.

‘ಮ್ಯಾಕ್ಸ್​ ಸಿನಿಮಾ ಅಪ್​ಡೇಟ್​ ಬಗ್ಗೆ ವ್ಯಂಗ್ಯ ಬೇಡ’: ಸುದೀಪ್​ ಖಡಕ್​ ಎಚ್ಚರಿಕೆ
ಕಿಚ್ಚ ಸುದೀಪ್​
ಮದನ್​ ಕುಮಾರ್​
|

Updated on: Feb 08, 2024 | 12:47 PM

Share

ನಟ ಕಿಚ್ಚ ಸುದೀಪ್​ (Kichcha Sudeep) ಅವರು ತುಂಬ ಬ್ಯುಸಿ ಆಗಿದ್ದಾರೆ. ಇತ್ತೀಚೆಗಷ್ಟೇ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಕಾರ್ಯಕ್ರಮದ ನಿರೂಪಣೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಅದರ ಜೊತೆಗೆ ಅವರಿಗೆ ಕ್ರಿಕೆಟ್​ನಲ್ಲೂ ಆಸಕ್ತಿ ಇರುವುದರಿಂದ ‘ಸೆಲೆಬ್ರಿಟಿ ಕ್ರಿಕೆಟ್​ ಲೀಗ್​’ (CCL) ಕಡೆಗೂ ಗಮನ ಹರಿಸಿದ್ದಾರೆ. ಈ ಬಾರಿ ‘ಸಿಸಿಎಲ್’ 10ನೇ ಸೀಸನ್​ ಆದ್ದರಿಂದ ನಿರೀಕ್ಷೆ ಜೋರಾಗಿದೆ. ಬಿಗ್​ ಬಾಸ್​, ಕ್ರಿಕೆಟ್​ ನಡುವೆ ‘ಮ್ಯಾಕ್ಸ್​’ ಸಿನಿಮಾದ ಕೆಲಸಗಳನ್ನೂ ಸುದೀಪ್​ ಮರೆತಿಲ್ಲ. ಅದರ ಬಗ್ಗೆಯೂ ಅವರು ಗಮನ ಹರಿಸಿದ್ದಾರೆ. ಈ ನಡುವೆ ‘ಮ್ಯಾಕ್ಸ್​’ (Max Movie) ಸಿನಿಮಾದಿಂದ ಅಪ್​ಡೇಟ್ಸ್​ ಬರುತ್ತಿಲ್ಲ ಎಂಬುದು ಕೆಲವರ ದೂರು. ಇನ್ನೂ ಕೆಲವರು ಈ ವಿಚಾರದಲ್ಲಿ ವ್ಯಂಗ್ಯ ಮಾಡಿರುವುದು ಸುದೀಪ್​ ಅವರ ಗಮನಕ್ಕೆ ಬಂದಿದೆ. ಅದಕ್ಕೆ ಅವರು ಖಡಕ್​ ಉತ್ತರ ನೀಡಿದ್ದಾರೆ.

‘ಅಪ್​ಡೇಟ್ಸ್​ ಬಗ್ಗೆ ಅನೇಕರು ಟ್ವೀಟ್​ಗಳನ್ನು ಮಾಡುತ್ತಿರುವುದು ನೋಡಲು ಕ್ರೇಜಿ ಎನಿಸುತ್ತದೆ. ಬಿಡುಗಡೆ ಆಗುತ್ತಿರುವ ಬೇರೆ ಸಿನಿಮಾಗಳ ಜೊತೆ ಸ್ಪರ್ಧೆ ಮಾಡಲು ಅಥವಾ ಬೇರೆ ನಟರ ಜೊತೆ ಪೈಪೋಟಿ ಮಾಡಲು ಅಪ್​ಡೇಟ್ಸ್​ ನೀಡುವುದಿಲ್ಲ. ಚಿತ್ರತಂಡದಿಂದ ಪೂರ್ಣವಾಗಿ ಏನನ್ನಾದರೂ ಅನೌನ್ಸ್​ ಮಾಡಬೇಕು ಎಂದಾಗ ಅಪ್​ಡೇಟ್ಸ್​ ನೀಡಲಾಗುವುದು’ ಎಂದು ಸುದೀಪ್​ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್ ಮುಗಿದ ಬಳಿಕ ಸುದೀಪ್​ಗೆ ಸಂಗೀತಾ ಶೃಂಗೇರಿ ವಿಶೇಷ ಮಾತು

‘ನನ್ನ ಕೆಲಸದ ಬಗ್ಗೆ ನೀವೆಲ್ಲರೂ ತೋರಿಸಿದ ಆಸಕ್ತಿಯನ್ನು ನಾನು ಯಾವಾಗಲೂ ಮೆಚ್ಚಿಕೊಂಡಿದ್ದೇನೆ. ಆದರೆ ಬಿಗ್​ ಬಾಸ್ ಬಗ್ಗೆ ಮತ್ತು ಸಿಸಿಎಲ್​ ಬಗ್ಗೆ ನೀವು ವ್ಯಂಗ್ಯ ಮಾಡಿದರೆ ಅದರಿಂದ ಒಂದು ಸಿನಿಮಾಗೆ ಸರಿಯಾದ ರೀತಿಯಲ್ಲಿ ಇಂಟರೆಸ್ಟ್​ ತೋರಿಸಿದಂತೆ ಆಗುವುದಿಲ್ಲ. ಮ್ಯಾಕ್ಸ್​ ಸಿನಿಮಾ ಚೆನ್ನಾಗಿ ಮೂಡಿಬರುತ್ತಿದೆ. ನಿಮ್ಮನ್ನು ಮನರಂಜಿಸಲು ಅದೇ ನಮ್ಮ ಮೊದಲು ಆದ್ಯತೆ. ಅದಕ್ಕಾಗಿ ಸಾಧ್ಯವಿರುವ ರೀತಿಯಲ್ಲಿ ಪ್ರಯತ್ನಿಸುತ್ತಿದ್ದೇವೆ’ ಎಂದು ಸುದೀಪ್​ ಅವರು ಬರೆದುಕೊಂಡಿದ್ದಾರೆ.

‘ಮ್ಯಾಕ್ಸ್​’ ಸಿನಿಮಾಗೆ ಮಹಾಬಲಿಪುರಂನಲ್ಲಿ ಶೂಟಿಂಗ್​ ನಡೆಯುತ್ತಿದೆ. ತಮಿಳಿನ ವಿಜಯ್​ ಕಾರ್ತಿಕೇಯನ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕಾಲಿವುಡ್​ ನಿರ್ಮಾಪಕ ಕಲೈಪುಲಿ ಎಸ್​. ಧಾನು ಅವರು ಈ ಸಿನಿಮಾವನ್ನು ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಮೊದಲು ಬಿಡುಗಡೆಯಾದ ಫಸ್ಲ್​ ಗ್ಲಿಂಪ್ಸ್​ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದರು. ಈ ಸಿನಿಮಾದಲ್ಲಿ ಸುದೀಪ್​ ಅವರು ರಗಡ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಜನೀಶ್​ ಬಿ. ಲೋಕನಾಥ್​ ಅವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್