‘ಬಿಗ್ ಬಾಸ್’ನಿಂದ ಬಂದ ಬಳಿಕ ರಿಲೀಸ್ ಆಗ್ತಿದೆ ಕಾರ್ತಿಕ್ ನಟನೆಯ ಸಿನಿಮಾ; ಅವರ ಪಾತ್ರಕ್ಕಿದೆ ವಿಶೇಷ ತೂಕ
‘ಒಂದು ಸರಳ ಪ್ರೇಮಕಥೆ’ ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಅಣ್ಣಾವ್ರ ಕುಟುಂಬದ ಅನೇಕರು ಆಗಮಿಸಿದ್ದರು. ಅಶ್ವಿನಿ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಮೊದಲಾದವರು ಆಗಮಿಸಿ ಶುಭಾಶಯ ತಿಳಿಸಿದರು. ವೇದಿಕೆ ಏರಿದ ಕಾರ್ತಿಕ್ ಅವರು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಾರ್ತಿಕ್ ಮಹೇಶ್ (Karthik Mahesh) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ವಿನ್ನರ್ ಆಗುವ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಅವರು ಕೇವಲ ಕಿರುತೆರೆ ಮಾತ್ರವಲ್ಲದೆ ಹಿರಿತೆರೆಯಲ್ಲೂ ನಟಿಸಿದ್ದಾರೆ. ಅವರ ನಟನೆಯ ‘ಡೊಳ್ಳು’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದೆ. ಈಗ ಅವರು ನಟಿಸಿರೋ ಸಿನಿಮಾ ಒಂದು ರಿಲೀಸ್ ಆಗುತ್ತಿದೆ. ಅದೂ ಫೆಬ್ರವರಿ 9ರಂದು ಅನ್ನೋದು ವಿಶೇಷ. ಆ ಬಗ್ಗೆ ಈ ಸ್ಟೋರಿಯಲ್ಲಿದೆ ಉತ್ತರ.
ಫೆಬ್ರವರಿ 14 ಪ್ರೇಮಿಗಳ ದಿನ. ಈ ಹಿನ್ನೆಲೆಯಲ್ಲಿ ಅನೇಕ ಲವ್ಸ್ಟೋರಿ ಸಿನಿಮಾಗಳು ರಿಲೀಸ್ಗೆ ರೆಡಿ ಇವೆ. ಆ ಸಾಲಿನಲ್ಲಿ ‘ಒಂದು ಸರಳ ಪ್ರೇಮಕಥೆ’ ಕೂಡ ಒಂದು. ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರದಲ್ಲಿ ದೊಡ್ಮನೆ ಕುಟುಂಬದ ಕುಡಿ ವಿನಯ್ ಕುಮಾರ್ ಹಾಗೂ ಮಲ್ಲಿಕಾ ಸಿಂಗ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಕಾರ್ತಿಕ್ ಒಂದು ಸಣ್ಣ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪ್ರೀರಿಲೀಸ್ ಇವೆಂಟ್ ನಡೆಯಿತು. ವೇದಿಕೆ ಏರಿದ ಕಾರ್ತಿಕ್ ಸಿನಿಮಾ ಬಗ್ಗೆ ಮಾತನಾಡಿದರು.
‘ಒಂದು ಸರಳ ಪ್ರೇಮಕಥೆ’ ಚಿತ್ರದ ಕಾರ್ಯಕ್ರಮಕ್ಕೆ ರಾಜ್ಕುಮಾರ್ ಕುಟುಂಬದ ಅನೇಕರು ಆಗಮಿಸಿದ್ದರು. ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ರಾಜ್ಕುಮಾರ್ ಮೊದಲಾದವರು ಆಗಮಿಸಿ ವಿಶ್ ತಿಳಿಸಿದರು. ವೇದಿಕೆ ಏರಿದ ಕಾರ್ತಿಕ್ ಅವರು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ವೇದಿಕೆ ಏರಿದ ತಕ್ಷಣ ಅವರು ಎಲ್ಲರಿಗೂ ಧನ್ಯವಾದ ಹೇಳಿದರು.
‘ಒಂದು ಸರಳ ಪ್ರೇಮಕಥೆ ಸಿನಿಮಾದಲ್ಲಿ ನಟಿಸಿದ್ದಕ್ಕೆ ಖುಷಿ ಇದೆ. ಸುನಿ ಅವರ ಸಿನಿಮಾದಲ್ಲಿ ನಟಿಸಬೇಕು ಎನ್ನುವ ಆಸೆ ಮೊದಲಿನಿಂದಲೂ ಇತ್ತು. ದೊಡ್ಮನೆಯ ಕುಡಿ ವಿನಯ್ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದು ಖುಷಿ ಇದೆ. ನನಗೆ ಅವಕಾಶ ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದ’ ಎಂದರು ಕಾರ್ತಿಕ್ ಮಹೇಶ್.
ಇದನ್ನೂ ಓದಿ: ಮುಗಿಬಿದ್ದ ಅಭಿಮಾನಿಗಳಿಗೆ ತಾಳ್ಮೆಯಿಂದ ಸೆಲ್ಫಿ ನೀಡಿದ ಕಾರ್ತಿಕ್ ಮಹೇಶ್
‘ನನಗೆ ಬೇರೆ ಬೇರೆ ಪಾತ್ರಗಳನ್ನು ಮಾಡಲು ಇಷ್ಟ. ಈ ಸಿನಿಮಾದಲ್ಲಿ ಒಂದು ಪಾತ್ರ ಇದೆ ಎಂದು ಸುನಿ ಹೇಳಿದಾಗ ನಾನು ಒಕೆ ಎಂದೆ. ಈ ಪಾತ್ರದ ಬಗ್ಗೆ ಹೆಚ್ಚಿನ ವಿಚಾರ ಬಿಚ್ಚಿಡೋಕೆ ಆಗಲ್ಲ. ಕಥೆಗೆ ಬೇರೆ ಆಯಾಮ ಕೊಡುತ್ತದೆ. ಇಷ್ಟನ್ನು ಮಾತ್ರ ಹೇಳಬಲ್ಲೆ’ ಎಂದರು ಕಾರ್ತಿಕ್. ಅವರಿಗೆ ಪಾತ್ರದ ಬಗ್ಗೆ ಇನಷ್ಟು ಮಾಹಿತಿ ನೀಡೋ ಆಸೆ ಆಯಿತು. ಇದಕ್ಕೆ ಸುನಿ ಅವರ ಒಪ್ಪಿಗೆ ಕೇಳಿದರು. ಆದರೆ, ಸುನಿ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗಲಿಲ್ಲ. ಹೀಗಾಗಿ ಕಾರ್ತಿಕ್ ಸುಮ್ಮನಾದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ