ಕೊನೆಯ ಹಂತದಲ್ಲಿ ‘ಮಾರ್ಟಿನ್’ ಸಿನಿಮಾ ಶೂಟಿಂಗ್; ಶೀಘ್ರವೇ ರಿಲೀಸ್ ಆಗಲಿದೆ ಸಿನಿಮಾ?|
Dhruva Sarja: ‘ಮಾರ್ಟಿನ್’ ಶೂಟಿಂಗ್ನಲ್ಲಿ ಧ್ರುವ ಸರ್ಜಾ ಭಾಗಿ ಆಗಲಿದ್ದಾರೆ. ಈ ಚಿತ್ರದ ಎರಡು ಸಾಂಗ್ಗಳ ಚಿತ್ರೀಕರಣ ಬಾಕಿ ಉಳಿದಿದೆ. ಫೆಬ್ರವರಿ 10ಕ್ಕೆ ಶೂಟಿಂಗ್ ಪ್ರಾರಂಭಿಸಿ ತಿಂಗಳಾಂತ್ಯಕ್ಕೆ ಅದನ್ನು ಪೂರ್ಣಗೊಳಿಸುವ ಆಲೋಚನೆ ಚಿತ್ರತಂಡಕ್ಕೆ ಇದೆ. ಸಿನಿಮಾ ರಿಲೀಸ್ಗೆ ಸೂಕ್ತ ದಿನಾಂಕದ ಹುಡುಕಾಟದಲ್ಲಿ ತಂಡ ಬ್ಯುಸಿ ಆಗಿದೆ.
ಧ್ರುವ ಸರ್ಜಾ (Dhruva Sarja) ನಟನೆಯ ‘ಪೊಗರು’ ಸಿನಿಮಾ ರಿಲೀಸ್ ಆಗಿದ್ದು 2021ರ ಫೆಬ್ರವರಿ 19ರಂದು. ಈ ಸಿನಿಮಾ ರಿಲೀಸ್ ಆಗಿ ಮೂರು ವರ್ಷ ಕಳೆಯುತ್ತಾ ಬಂದಿದೆ. ಈ ಸಿನಿಮಾ ಆದ ಬಳಿಕ ಅವರು ‘ಮಾರ್ಟಿನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆದರು. ಈವರೆಗೆ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿಲ್ಲ. ಫೆಬ್ರವರಿ 10ರಿಂದ ಕೊನೆಯ ಹಂತದ ಶೂಟಿಂಗ್ ಆರಂಭ ಆಗಲಿದೆಯಂತೆ. ಆದಷ್ಟು ಬೇಗ ಸಿನಿಮಾ ತೆರೆಮೇಲೆ ಬರಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಧ್ರುವ ಸರ್ಜಾ ಅವರು ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾ ಶೂಟಿಂಗ್ ಆರಂಭಿಸಿ ಬಹಳ ಸಮಯ ಕಳೆದಿದೆ. ಇದರ ಜೊತೆಗೆ ಈಗ ‘ಮಾರ್ಟಿನ್’ ಶೂಟಿಂಗ್ನಲ್ಲೂ ಭಾಗಿ ಆಗಬೇಕಿದೆ. ಈ ಚಿತ್ರದ ಎರಡು ಸಾಂಗ್ಗಳ ಶೂಟ್ ಬಾಕಿ ಉಳಿದಿದೆ. ಫೆಬ್ರವರಿ 10ಕ್ಕೆ ಶೂಟಿಂಗ್ ಆರಂಭಿಸಿ ತಿಂಗಳಾಂತ್ಯಕ್ಕೆ ಅದನ್ನು ಪೂರ್ಣಗೊಳಿಸುವ ಆಲೋಚನೆ ಚಿತ್ರತಂಡಕ್ಕೆ ಇದೆ.
ಮೊದಲನೆಯ ಸಾಂಗ್ ಇಂಟ್ರೋಡಕ್ಷನ್ ಸಾಂಗ್. ಮತ್ತೊಂದು ರೊಮ್ಯಾಂಟಿಕ್ ಸಾಂಗ್ ಆಗಿದ್ದು ಇದನ್ನು ಭಾರತದ ವಿವಿಧ ಕಡೆಗಳಲ್ಲಿ ಶೂಟ್ ಮಾಡುವ ಆಲೋಚನೆಯಲ್ಲಿ ತಂಡ ಇದೆ. ಮಾರ್ಟಿನ್ ತಂಡ ಸೂಕ್ತ ರಿಲೀಸ್ ದಿನಾಂಕ ಹುಡುಕುತ್ತಿದೆ. ಈ ಬಗ್ಗೆ ಶೀಘ್ರವೇ ಅಧಿಕೃತ ಘೋಷಣೆ ಆಗಬೇಕಿದೆ. ಇತ್ತೀಚೆಗೆ ‘ಮಾರ್ಟಿನ್’ ಸಿನಿಮಾದ ಆಡಿಯೋ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ ಆದ ಬಗ್ಗೆ ಸುದ್ದಿ ಆಗಿತ್ತು.
ಇದನ್ನೂ ಓದಿ: ಭರ್ಜರಿಯಾಗಿ ರೆಡಿಯಾಗುತ್ತಿದೆ ಧ್ರುವ ಸರ್ಜಾ ಮಾರ್ಟಿನ್, ಫೈಟ್ಗೆ 9 ಕೋಟಿ, ಒಂದು ಹಾಡಿಗೆ 3 ಕೋಟಿ
‘ಮಾರ್ಟಿನ್’ ಚಿತ್ರಕ್ಕೆ ಅರ್ಜುನ್ ಸರ್ಜಾ ಅವರು ಕಥೆ ಬರೆದಿದ್ದಾರೆ. ಎಪಿ ಅರ್ಜುನ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ವೈಭವಿ ಶಾಂಡಿಲ್ಯ ಅವರು ಈ ಚಿತ್ರಕ್ಕೆ ನಾಯಕಿ. ಅನ್ವೇಶಿ ಜೈನ್, ಸುಕ್ರತಾ ವಾಗ್ಲೆ, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್ ಮೊದಲಾದವರು ನಟಿಸಿದ್ದಾರೆ. ವಾಸವಿ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಉದಯ್ ಕೆ. ಮೆಹ್ತಾ ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಮಣಿ ಶರ್ಮಾ ಹಾಗೂ ರವಿ ಬಸ್ರೂರು ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ. ಸತ್ಯ ಹೆಗಡೆ ಛಾಯಾಗ್ರಹಣ, ರಾಮ್-ಲಕ್ಷ್ಮಣ ಹಾಗೂ ರವಿ ವರ್ಮ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ಮಾರ್ಟಿನ್’ ಟೀಸರ್ ಗಮನ ಸೆಳೆದಿತ್ತು. ಸಿನಿಮಾ ರಿಲೀಸ್ ಡೇಟ್ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:00 am, Thu, 8 February 24