‘ಕರಿಮಣಿ ಮಾಲೀಕ’ ಯಾರೆಂದು ಹೇಳಿದ ವಿಕ್ಕಿಪೀಡಿಯಾ

Vicky Pedia: ಕರಿಮಣಿ ಮಾಲೀಕ ಯಾರೆಂಬುದನ್ನು ವಿಕ್ಕಿಪೀಡಿಯಾ ಕಂಡು ಹಿಡಿದಿದ್ದಾರೆ. ಮಾಲೀಕ ಯಾರೆಂಬುದನ್ನು ಅವರಿಂದಲೇ ಕೇಳಿ.

‘ಕರಿಮಣಿ ಮಾಲೀಕ’ ಯಾರೆಂದು ಹೇಳಿದ ವಿಕ್ಕಿಪೀಡಿಯಾ
Follow us
ಮಂಜುನಾಥ ಸಿ.
|

Updated on:Feb 08, 2024 | 3:11 PM

‘ಏನಿಲ್ಲ, ಏನಿಲ್ಲ, ಕರಿ ಮಣಿ ಮಾಲೀಕ ನೀನಲ್ಲ’ ಹಾಡು ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ಟ್ರೆಂಡ್ ಆಗಿದೆ. ಎಲ್ಲರ ಮೊಬೈಲ್​ನಲ್ಲೂ, ಬಾಯಲ್ಲೂ ಈಗ ಅದೇ ಹಾಡು. 1999 ರಲ್ಲಿ ಬಿಡುಗಡೆ ಆಗಿದ್ದ ‘ಉಪೇಂದ್ರ’ ಸಿನಿಮಾದ ಈ ಹಾಡು ಆಗಲೂ ಜನಪ್ರಿಯವಾಗಿತ್ತು, ಈಗಂತೂ ಸಾಮಾಜಿಕ ಜಾಲತಾಣದ ದೆಸೆಯಿಂದ ಭಾರಿ ವೈರಲ್ ಆಗಿದೆ. ಸ್ವತಃ ಸಂಗೀತ ನಿರ್ದೇಶಕ ಗುರುಕಿರಣ್ ಸಹ ಹಾಡು ಹಾಡಿ ಟ್ರೆಂಡ್​ನ ಭಾಗವಾಗಿದ್ದಾರೆ. ಈ ಹಾಡಿನ ಮೇಲೆ ಒಂದರ ಹಿಂದೊಂದು ಮೀಮ್​ಗಳು ಬರುತ್ತಿವೆ. ‘ಕರಿಮಣಿ ಮಾಲಿಕ ನೀನಲ್ಲ’ ಸಾಲಂತೂ ಸಖತ್ ಟ್ರೆಂಡ್ ಆಗಿದೆ. ಈ ಕರಿಮಣಿ ಮಾಲೀಕ ಯಾರೆಂಬುದನ್ನು ಕನ್ನಡದ ಜನಪ್ರಿಯ ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್ ವಿಕ್ಕಿಪೀಡಿಯಾ ಅವರದ್ದೇ ಶೈಲಿಯಲ್ಲಿ ಹೇಳಿದ್ದಾರೆ.

ತಮ್ಮ ಕ್ಲೀನ್ ಕಾಮಿಡಿ, ಗುಣಮಟ್ಟದ ಕಾಮಿಡಿ ಕಂಟೆಂಟ್, ನಟನೆಯಿಂದ ಜನಪ್ರಿಯವಾಗಿರುವ ವಿಕ್ಕಿಪೀಡಿಯಾ ಇದೀಗ ‘ಏನಿಲ್ಲ ಏನಿಕ್ಕ’ ಟ್ರೆಂಡ್ ಮೇಲೆ ವಿಡಿಯೋ ಒಂದನ್ನು ಅಪ್​ಲೋಡ್ ಮಾಡಿದ್ದಾರೆ. ವಿಡಿಯೋನಲ್ಲಿ ಕರಿಮಣಿ ಮಾಲೀಕ ಯಾರೆಂಬುದನ್ನು ಹೇಳಿದ್ದಾರೆ. ವಿಡಿಯೋನಲ್ಲಿ ವಿಕ್ಕಿಪೀಡಿಯಾ, ನಂದಿನಿ ವೇಷಧಾರಿಯಾಗಿದ್ದಾರೆ. ಅವರ ಗೆಳೆಯ ಅಮಿತ್ ಚಿಟ್ಟೆ ನಂದಿನಿಯ ಪತಿಯಾಗಿ ಕಾಣಿಸಿಕೊಂಡಿದ್ದಾರೆ. ಸಚಿತ್, ನಂದಿನಿಯ ‘ಗೆಳೆಯ’ನಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ನಮಗಿಂತ ಆ ನಟಿಯನ್ನು ರಕ್ಷಿತ್ ಶೆಟ್ಟಿ ಕಾಳಜಿ ಮಾಡಿದ: ಯೋಗಿ-ದಿಗಂತ್ ಅಳಲು, ಯಾರು ಆ ನಟಿ?

‘ನಿನಗೆ ಮಲ್ಲಿಗೆ, ಸಂಪಿಗೆ ಎಂದರೆ ಅಲರ್ಜಿ ಅಂತ ನಾನು ಹಣ್ಣು ತಂದಿದ್ದೀನಿ, ಆದರೆ ಅವನು ನೀನು ಸಸ್ಯಹಾರಿ ಅಂತ ಗೊತ್ತಿದ್ರೂ ಕಬಾಬ್ ತಂದಿದ್ದಾನೆ. ಈಗ ಹೇಳು ಈ ಕರಿಮಣಿ ಮಾಲೀಕ ಯಾರು ಅಂತ’ ಎಂದು ಅಮಿತ್, ನಂದಿನಿಯನ್ನು ಕೇಳುತ್ತಾನೆ. ಆಗ ನಂದಿನಿ, ಉತ್ತರವನ್ನು ಹಾಡಿನ ಮೂಲಕ ಕೊಡುತ್ತೀನಿ ಎಂದು ಹೇಳಿ, ‘ಮನಸಿನೊಳಗೆ ಖಾಲಿ ಖಾಲಿ, ಮನದೊಳಗೆ ನೀ ಇದ್ದರೂ. ಮಲ್ಲಿಗೆ, ಸಂಪಿಗೆ, ತರದೇ ಹೋದರು ನೀ ನನಗೆ, ಓ ನಲ್ಲ, ನೀ ನಲ್ಲ ಕರಿಮಣಿ ಮಾಲೀಕ ನೀನಲ್ಲ’ ಎಂದು ಹಾಡುತ್ತಾಳೆ, ಆಗ ಅಮಿತ್, ‘ಮತ್ತಿನ್ಯಾರು’ ಎಂದಾಗ ಮತ್ತೆ ಹಾಡು ಮುಂದುವರೆಸುವ ನಂದಿನಿ, ‘ಕರಿಮಣಿ ಮಾಲೀಕ ರಾಹುಲ್ಲ’ ಎನ್ನುತ್ತಾಳೆ. ಕಬಾಬ್ ಕೈಯಲ್ಲಿ ಹಿಡಿದ ರಾಹುಲ್ಲನಿಗೆ ಖುಷಿಯೋ ಖುಷಿ. ಪಾಪ ಅಮಿತ್ ಎದೆ ಬಡಿದುಕೊಂಡು ಅಳಲು ಪ್ರಾರಂಭಿಸುತ್ತಾನೆ.

ಹಾಡು ಮುಂದುವರೆದಂತೆ ‘ರಾಹುಲ್ಲ’ ಟ್ರೆಂಡ್​ ಸೃಷ್ಟಿಕರ್ತ ಚಂದ್ರು ಅವರ ‘ಚಟ-ಪಟ’, ‘ಒನ್ಸ್​ ಮೋರ್ ಒನ್ಸ್ ಮೋರ್ ಅಂತಾ ಇರ್ಬೇಕು’ ಡೈಲಾಗ್​ಗಳು ಸಹ ಕೇಳಿ ಬರುತ್ತವೆ. ವಿಕ್ಕಿಪೀಡಿಯಾ ಅವರ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಸಖತ್ ವೈರಲ್ ಆಗಿದೆ. ಸಾವಿರಾರು ಮಂದಿ ವಿಡಿಯೋ ವೀಕ್ಷಿಸಿ ಖುಷಿಪಟ್ಟಿದ್ದಾರೆ. ಕಮೆಂಟ್​ಗಳನ್ನು ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Thu, 8 February 24

ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ