ಮತ್ತೆ ಅಖಾಡಕ್ಕೆ ಇಳಿದ ‘ಯುವರತ್ನ’ ಅಪ್ಪು.. ಡಬ್ಬಿಂಗ್ ಶುರು!
ಎಲ್ಲವೂ ಸರಿಯಾಗಿದ್ದಿದ್ರೆ, ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿತ್ತು. ಅಷ್ಟರಲ್ಲೇ ಕೊರೊನಾ ವೈರಸ್ ರಾಜ್ಯಕ್ಕೂ ಲಗ್ಗೆ ಇಟ್ಟಿದ್ದರಿಂದ ಚಿತ್ರೀಕರಣವನ್ನ ವಿಧಿಯಿಲ್ಲದೆ ನಿಲ್ಲಿಸಬೇಕಾಯ್ತು. ಆದ್ರೀಗ ಹೆಚ್ಚು-ಕಡಿಮೆ ಎರಡು ತಿಂಗಳ ಬಳಿಕ ಮತ್ತೆ ಯುವರತ್ನ ಚಿತ್ರತಂಡ ಅಖಾಡಕ್ಕೆ ಇಳಿದಿದೆ. ಇಂದಿನ ಅಪ್ಪು ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ನ ಯುವರತ್ನ ಚಿತ್ರದ ಡಬ್ಬಿಂಗ್ ಶುರುವಾಗಿದೆ. ಈ ವಿಷಯವನ್ನ ಸ್ವತ: ಪುನೀತ್ ರಾಜ್ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂದ್ಹಾಗೆ ಈಗಾಗ್ಲೇ ಫಸ್ಟ್ ಡಬ್ಬಿಂಗ್ ಮುಗಿಸಿರೋ […]
ಎಲ್ಲವೂ ಸರಿಯಾಗಿದ್ದಿದ್ರೆ, ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಗೆ ತಯಾರಿ ನಡೆಸುತ್ತಿತ್ತು. ಅಷ್ಟರಲ್ಲೇ ಕೊರೊನಾ ವೈರಸ್ ರಾಜ್ಯಕ್ಕೂ ಲಗ್ಗೆ ಇಟ್ಟಿದ್ದರಿಂದ ಚಿತ್ರೀಕರಣವನ್ನ ವಿಧಿಯಿಲ್ಲದೆ ನಿಲ್ಲಿಸಬೇಕಾಯ್ತು. ಆದ್ರೀಗ ಹೆಚ್ಚು-ಕಡಿಮೆ ಎರಡು ತಿಂಗಳ ಬಳಿಕ ಮತ್ತೆ ಯುವರತ್ನ ಚಿತ್ರತಂಡ ಅಖಾಡಕ್ಕೆ ಇಳಿದಿದೆ.
ಇಂದಿನ ಅಪ್ಪು ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ನ ಯುವರತ್ನ ಚಿತ್ರದ ಡಬ್ಬಿಂಗ್ ಶುರುವಾಗಿದೆ. ಈ ವಿಷಯವನ್ನ ಸ್ವತ: ಪುನೀತ್ ರಾಜ್ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂದ್ಹಾಗೆ ಈಗಾಗ್ಲೇ ಫಸ್ಟ್ ಡಬ್ಬಿಂಗ್ ಮುಗಿಸಿರೋ ಯುವರತ್ನ ಚಿತ್ರತಂಡ ಸೆಂಕೆಡ್ ಹಾಫ್ ಡಬ್ಬಿಂಗ್ ಅನ್ನ ಅರಂಭಿಸಿದೆ. ಈ ಸಂತಸದ ವಿಷಯವನ್ನ ನಿರ್ದೇಶಕ ಸಂತೋಷ್ ಆನಂದ್ರಾಮ್ ಹಾಗೂ ಅಪ್ಪು ಇಬ್ಬರು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ರಾಜಕುಮಾರ ಬಳಿಕ ಅಪ್ಪು ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ಸಿನಿಮಾ ಯುವರತ್ನ. ಹೀಗಾಗಿ ಸಹಜವಾಗೇ ಪವರ್ ಸ್ಟಾರ್ ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ. ಇದೇ ವೇಳೆ ಕೊರೊನಾದಿಂದ ಥಿಯೇಟರ್ಗಳು ಬಾಗಿಲು ಮುಚ್ಚಿವೆ. ಹಾಗಾಗಿ ಓಟಿಟಿ ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆಯಾಗುತ್ತೆ ಅಂತ ಸುದ್ದಿ ಹಬ್ಬಿತ್ತು. ಆದ್ರೆ ಚಿತ್ರತಂಡ ಇನ್ನೂ ಆರು ತಿಂಗಳಾದ್ರೂ ಯುವರತ್ನವನ್ನ ಚಿತ್ರಮಂದಿರದಲ್ಲೇ ರಿಲೀಸ್ ಮಾಡ್ತೀವಿ ಅಂತ ಹೇಳೊ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಹೀಗಾಗಿ ಕೊರೊನಾ ಬಿಕ್ಕಟ್ಟು ಮುಗಿದ ಕೂಡ್ಲೇ ಯುವರತ್ನ ಥಿಯೇಟರ್ಗೆ ಅಪ್ಪಳಿಸೋದು ಗ್ಯಾರಂಟಿ.
#Yuvarathnaa Dubbing starts ? pic.twitter.com/migd1YSply
— Puneeth Rajkumar (@PuneethRajkumar) May 25, 2020
Published On - 5:08 pm, Mon, 25 May 20