ಕೊರೊನಾ 2ನೇ ಅಲೆ: ಹೌಸ್​ಫುಲ್​ ಸಿನಿಮಾ ಪ್ರದರ್ಶನಕ್ಕೆ ಬ್ರೇಕ್​? ಬಿಬಿಎಂಪಿ ಪ್ರಸ್ತಾವನೆಗೆ ಪುನೀತ್​ ವಿರೋಧ

ಪುನೀತ್​ ರಾಜ್​ಕುಮಾರ್​ ಅವರ ‘ಯುವರತ್ನ’ ಸಿನಿಮಾ ಏ.1ರಂದು ತೆರೆಗೆ ಬರಲು ಸಿದ್ಧವಾಗಿದೆ. ಈ ಸಂದರ್ಭಕ್ಕೆ ಹೌಸ್​ಫುಲ್​ ಪ್ರದರ್ಶನಕ್ಕೆ ಬ್ರೇಕ್​ ಹಾಕಿದರೆ ಚಿತ್ರತಂಡಕ್ಕೆ ಭಾರಿ ನಷ್ಟ ಆಗಲಿದೆ.

ಕೊರೊನಾ 2ನೇ ಅಲೆ: ಹೌಸ್​ಫುಲ್​ ಸಿನಿಮಾ ಪ್ರದರ್ಶನಕ್ಕೆ ಬ್ರೇಕ್​? ಬಿಬಿಎಂಪಿ ಪ್ರಸ್ತಾವನೆಗೆ ಪುನೀತ್​ ವಿರೋಧ
ಪುನೀತ್​ ರಾಜ್​ಕುಮಾರ್​
Edited By:

Updated on: Mar 19, 2021 | 5:33 PM

ದೇಶಾದ್ಯಂತ ಕೊರೊನಾ ವೈರಸ್​ನ ಎರಡನೇ ಅಲೆ ಜೋರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಲಾಕ್​ಡೌನ್​ ಆಗಬಹುದೇನೂ ಎಂಬ ಆತಂಕ ಮನೆ ಮಾಡಿದೆ. ಅದರಲ್ಲೂ ಚಿತ್ರರಂಗಕ್ಕೆ ಹೆಚ್ಚು ನಷ್ಟವಾಗುವ ಸಾಧ್ಯತೆ ಎದುರಾಗಿದೆ. ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಚಿತ್ರಮಂದಿರಗಳಲ್ಲಿ ಹೌಸ್​ ಫುಲ್​ ಪ್ರದರ್ಶನಕ್ಕೆ ಬ್ರೇಕ್​ ಹಾಕಬೇಕು ಎಂದು ಬಿಬಿಎಂಪಿ ಆಲೋಚಿಸುತ್ತಿದೆ. ಇದನ್ನು ಕನ್ನಡ ಚಿತ್ರರಂಗ ವಿರೋಧಿಸುತ್ತಿದೆ.

ಲಾಕ್​ಡೌನ್​ ಸಡಿಲಿಕೆಗೂ ಮುನ್ನ ಚಿತ್ರಮಂದಿಗಳು ಸಂಪೂರ್ಣ ಬಂದ್​ ಆಗಿದ್ದವು. ಬಳಿಕ ಶೇ.50ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಲಾಯಿತು. ಪೊಗರು ಚಿತ್ರದ ರಿಲೀಸ್​ ಸಂದರ್ಭದಲ್ಲಿ ಹೌಸ್​ಫುಲ್​ ಪ್ರದರ್ಶನಕ್ಕೆ ಅನುಮತಿ ಸಿಕ್ಕಿತು. ಆದರೆ ಈಗ ಕೊರೊನಾ ವೈರಸ್​ ಎರಡನೇ ಅಲೆ ಹಬ್ಬುತ್ತಿದೆ ಎಂಬ ಕಾರಣಕ್ಕೆ ಮತ್ತೆ ಚಿತ್ರಮಂದಿರಗಳಲ್ಲಿ ಶೇ.50ಕ್ಕಿಂತ ಹೆಚ್ಚು ಆಸನಗಳ ಭರ್ತಿಗೆ ಅವಕಾಶ ನೀಡಬಾರದು ಎಂಬ ಪ್ರಸ್ತಾವನೆ ಕೇಳಿಬಂದಿದೆ. ಆದರೆ ಇದರಿಂದ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಲಿದ್ದು, ಪುನೀತ್​ ರಾಜ್​ಕುಮಾರ್​ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅವರ ‘ಯುವರತ್ನ’ ಸಿನಿಮಾ ಏ.1ರಂದು ತೆರೆಗೆ ಬರಲು ಸಿದ್ಧವಾಗಿದೆ. ಈ ಸಂದರ್ಭದಲ್ಲಿ ಹೌಸ್​ಫುಲ್​ ಪ್ರದರ್ಶನಕ್ಕೆ ಬ್ರೇಕ್​ ಹಾಕಿದರೆ ಚಿತ್ರತಂಡಕ್ಕೆ ಭಾರಿ ನಷ್ಟ ಆಗಲಿದೆ. ಈ ಕುರಿತು ಪುನೀತ್ ಪ್ರತಿಕ್ರಿಯೆ ನೀಡಿದ್ದಾರೆ. ‘ದಯವಿಟ್ಟು 100 ಪರ್ಸೆಂಟ್​ಗೆ ಅವಕಾಶ ನೀಡಬೇಕು. ನಮ್ಮ ಇಂಡಸ್ಟ್ರೀ ಮಾತ್ರವಲ್ಲ, ಇಡೀ ಆರ್ಥಿಕತೆ ಈಗತಾನೇ ಚೇತರಿಸಿಕೊಳ್ಳುತ್ತಿದೆ’ ಎಂದು ಪುನೀತ್​ ಹೇಳಿದ್ದಾರೆ.

‘ನಮ್ಮ ಜೀವ, ಆರೋಗ್ಯ, ಕುಟುಂಬ ನಮಗೆ ಮುಖ್ಯ. ವ್ಯಾಪಾರ-ವ್ಯಾವಹಾರ ಎರಡನೆಯದ್ದು. ನನ್ನ ಪ್ರಕಾರ ಹೇಳಬೇಕೆಂದರೆ ಮದುವೆ, ಸಾರ್ವಜನಿಕ ಸಮಾರಂಭ, ಚುನಾವಣೆಗಳನ್ನು ಹಲವಾರು ತಿಂಗಳ ಹಿಂದೆಯೇ ಅವಾಯ್ಡ್​ ಮಾಡಬೇಕಿತ್ತು. ಥಿಯೇಟರ್​ಗೆ ಇದು ಬೇಕಾಗಿಲ್ಲ. ಮಾಸ್ಕ್​, ಸ್ಯಾನಿಟೈಸರ್​ ಬಳಸಬೇಕು. ಚಿತ್ರಮಂದಿರದ ಶೌಚಾಯಲ ಕ್ಲೀನ್​ ಆಗಿರಬೇಕು. ಅದು ತುಂಬ ಮುಖ್ಯ. ದಯವಿಟ್ಟು 100 ಪರ್ಸೆಂಟ್​ ಮಾಡಬೇಕು. ಚಿತ್ರಮಂದಿರದಲ್ಲಿ ಎಲ್ಲವೂ ಜಾಗ್ರತೆಯಿಂದ ನಡೆಯುತ್ತಿದೆ’ ಎಂದು ಪುನೀತ್ ಹೇಳಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಪುನೀತ್​ ಸಿಂಪಲ್ ಬರ್ತ್​​ಡೇ; ಫೋಟೋ ಕೇಳಿದ ಅಭಿಮಾನಿಗಳಿಗೆ ಅಪ್ಪು ಕಂಡೀಷನ್

Feel the Power Promo: ಡ್ಯಾನ್ಸ್​ನಲ್ಲಿ ಪುನೀತ್​ಗೆ ಯಾರು ಸಾಟಿ? ಪ್ರೋಮೋ ಹಾಡಿನಲ್ಲೇ ಪವರ್​ ತೋರಿಸಿದ ಪವರ್​ ಸ್ಟಾರ್​!

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us