ಡಾಲಿ ಧನಂಜಯ್‌, ಸತ್ಯದೇವ್ ನಟನೆಯ ‘ಜೀಬ್ರಾ’ ಸಿನಿಮಾದಿಂದ ಫಸ್ಟ್​ ಲುಕ್​ ರಿಲೀಸ್​

|

Updated on: Jul 07, 2024 | 3:46 PM

‘ಜೀಬ್ರಾ’ ಸಿನಿಮಾದಲ್ಲಿ ಸತ್ಯದೇವ್, ಡಾಲಿ ಧನಂಜಯ್, ಅಮೃತಾ ಐಯ್ಯಂಗಾರ್, ಸತ್ಯರಾಜ್, ಸುನಿಲ್, ಪ್ರಿಯಾ ಭವಾನಿ ಶಂಕರ್, ಊರ್ವಶಿ ರೌಟೇಲಾ ಮುಂತಾದವರು ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯ ಆಗಿದೆ. ಸತ್ಯದೇವ್ ಬರ್ತ್​ಡೇ ಸಲುವಾಗಿ ಅವರ ಫಸ್ಟ್​ ಲುಕ್​ ಪೋಸ್ಟರ್​ ಅನಾವರಣ ಮಾಡಲಾಗಿದೆ. ಈ ಸಿನಿಮಾ ತಂಡದ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ..

ಡಾಲಿ ಧನಂಜಯ್‌, ಸತ್ಯದೇವ್ ನಟನೆಯ ‘ಜೀಬ್ರಾ’ ಸಿನಿಮಾದಿಂದ ಫಸ್ಟ್​ ಲುಕ್​ ರಿಲೀಸ್​
ಸತ್ಯದೇವ್​
Follow us on

ಸತ್ಯದೇವ್ ನಾಯಕನಾಗಿ ನಟಿಸುತ್ತಿರುವ ‘ಜೀಬ್ರಾ’ ಸಿನಿಮಾಗೆ ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಈ ಬಹುತಾರಾಗಣದ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಕೂಡ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇದು ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಸತ್ಯದೇವ್ ಅವರ ಜನ್ಮದಿನದ ಪ್ರಯುಕ್ತ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ‘ಪದ್ಮಜಾ ಫಿಲ್ಮ್ಸ್​ ಪ್ರೈವೇಟ್ ಲಿಮಿಟೆಡ್’ ಹಾಗೂ ‘ಓಲ್ಡ್ ಟೌನ್ ಪಿಕ್ಚರ್ಸ್’ ಸಂಸ್ಥೆಗಳ ಮೂಲಕ ಈ ಸಿನಿಮಾ ಮೂಡಿಬರುತ್ತಿದೆ. ಎಸ್‌.ಎನ್. ರೆಡ್ಡಿ, ಎಸ್. ಪದ್ಮಜಾ, ಬಾಲ ಸುಂದರಂ ಹಾಗೂ ದಿನೇಶ್ ಸುಂದರಂ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಎಸ್. ಶ್ರೀಲಕ್ಷ್ಮಿ ರೆಡ್ಡಿ ಅವರು ಸಹ ನಿರ್ಮಾಪಕಿ ಆಗಿದ್ದಾರೆ.

‘ಜೀಬ್ರಾ’ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ನಲ್ಲಿ ಸತ್ಯದೇವ್ ಅವರು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಸೂಟ್‌ ಧರಿಸಿ, ಖಡಕ್‌ ಲುಕ್‌ನಲ್ಲಿ ಅವರು ಪೋಸ್​ ನೀಡಿದ್ದಾರೆ. ಭುಜದ ಮೇಲೆ ಚೀಲ, ಕೈಯಲ್ಲಿ ಪೆನ್ನು ಹಿಡಿದು ಕಾಣಿಸಿಕೊಂಡ ಅವರನ್ನು ನೋಡಿ ಸಿನಿಪ್ರಿಯರ ಕೌತುಕ ಹೆಚ್ಚಿದೆ. ಈ ಪೋಸ್ಟರ್​ನ ಬ್ಯಾಕ್‌ರೌಂಡ್‌ನಲ್ಲಿ ನೋಟುಗಳು ಹಾರುತ್ತಿವೆ. ಆ ಮೂಲಕ ಕಥೆಯ ಬಗ್ಗೆ ಸುಳಿವು ಬಿಟ್ಟುಕೊಡಲಾಗಿದೆ. ʻಲಕ್ ಫೇವರ್ಸ್ ದಿ ಬ್ರೇವ್ʼ ಎಂದು ಟ್ಯಾಗ್​ ಲೈಗ್​ ಸಹ ಗಮನ ಸೆಳೆಯುತ್ತಿದೆ.

ಡಾಲಿ ಧನಂಜಯ್, ಸತ್ಯದೇವ್ ಮಾತ್ರವಲ್ಲದೇ ಅಮೃತಾ ಐಯ್ಯಂಗಾರ್, ಸುನಿಲ್, ಪ್ರಿಯಾ ಭವಾನಿ ಶಂಕರ್, ಸತ್ಯರಾಜ್, ಊರ್ವಶಿ ರೌಟೆಲ್ಲ ಮುಂತಾದ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಈಶ್ವರ್ ಕಾರ್ತಿಕ್ ಅವರು ಕಥೆ ಮತ್ತು ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿದಾರೆ. ಈಗಾಗಲೇ ಚಿತ್ರದ ಶೂಟಿಂಗ್​ ಪೂರ್ಣಗೊಳಿಸಲಾಗಿದೆ. ಈಗ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ರಿಲೀಸ್​ ದಿನಾಂಕದ ಬಗ್ಗೆ ಮಾಹಿತಿ ಹೊರಬೀಳಲಿದೆ.

ಇದನ್ನೂ ಓದಿ: ಕೆಂಪೇಗೌಡ ಪಾತ್ರದಲ್ಲಿ ಡಾಲಿ ಧನಂಜಯ್, ನಾಗಾಭರಣ ನಿರ್ದೇಶಕ

ಕ್ರೈಮ್ ಆ್ಯಕ್ಷನ್ ಎಂಟರ್‌ಟೈನರ್‌ ಶೈಲಿಯಲ್ಲಿ ‘ಜೀಬ್ರಾ’ ಸಿನಿಮಾ ಮೂಡಿಬರುತ್ತಿದೆ. ರವಿ ಬಸ್ರೂರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಸತ್ಯ ಪೊನ್ಮಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಅನಿಲ್ ಕ್ರಿಶ್ ಸಂಕಲನ ಮಾಡುತ್ತಿದ್ದಾರೆ. ಮೀರಾಖ್ ಅವರು ಸಂಭಾಷಣೆ ಬರೆದಿದ್ದಾರೆ. ಅಶ್ವಿನಿ ಮುಲ್ಪುರಿ, ಗಂಗಾಧರ ಬೊಮ್ಮರಾಜು ಅವರು ಕಾಸ್ಟ್ಯೂಮ್ ಡಿಸೈನ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.