‘ಹುಚ್ಚ’ ಮರು ಬಿಡುಗಡೆ, ಕೈ ಮುಗಿದು ಬೇಡಿಕೊಂಡ ನಿರ್ಮಾಪಕ

ಸುದೀಪ್​ಗೆ ಸ್ಟಾರ್​ ಡಂ ತಂದುಕೊಟ್ಟ ಸಿನಿಮಾ ‘ಹುಚ್ಚ’ ಮರು ಬಿಡುಗಡೆ ಆಗುತ್ತಿದೆ. ಸಿನಿಮಾವನ್ನು ಮತ್ತೊಮ್ಮೆ ಗೆಲ್ಲಿಸಿರೆಂದು ನಿರ್ಮಾಪಕ ರೆಹಮಾನ್ ಅಭಿಮಾನಿಗಳಲ್ಲಿ ಕೈ ಮುಗಿದು ಬೇಡಿಕೊಂಡಿದ್ದಾರೆ.

‘ಹುಚ್ಚ’ ಮರು ಬಿಡುಗಡೆ, ಕೈ ಮುಗಿದು ಬೇಡಿಕೊಂಡ ನಿರ್ಮಾಪಕ
ಹುಚ್ಚ ಸಿನಿಮಾ ಮರು ಬಿಡುಗಡೆ
Follow us
ಮಂಜುನಾಥ ಸಿ.
|

Updated on: Jul 07, 2024 | 1:32 PM

ಸುದೀಪ್ ಹೆಸರಿನ ಮುಂದೆ ‘ಕಿಚ್ಚ’ ಸೇರಿಕೊಂಡಾಗಲೇ ಸುದೀಪ್ ಸ್ಟಾರ್ ಬದಲಾಗಿದ್ದು, ‘ಕಿಚ್ಚ’ ಹೆಸರು ಸೇರ್ಪಡೆಗೊಳ್ಳಲು ಕಾರಣವಾಗಿದ್ದು ‘ಹುಚ್ಚ’ ಸಿನಿಮಾ. ಸುದೀಪ್​ಗೆ ಬಂಪರ್ ಹಿಟ್ ಕೊಟ್ಟು ಚಿತ್ರರಂಗದಲ್ಲಿ ಸ್ಟಾರ್ ಆಗಿ ನೆಲೆಗೊಳ್ಳುವಂತೆ ಮಾಡಿದ ಸಿನಿಮಾ ‘ಹುಚ್ಚ’. ಈ ಸಿನಿಮಾ ಬಿಡುಗಡೆ ಆಗಿ 23 ವರ್ಷಗಳಾಗಿವೆ. ನಿನ್ನೆಯಷ್ಟೆ ಸುದೀಪ್ ಸಹ ಹುಚ್ಚ ಸಿನಿಮಾದ ಪೋಸ್ಟರ್ ಹಂಚಿಕೊಂಡು ಖುಷಿ ಹಂಚಿಕೊಂಡಿದ್ದರು. ಸಿನಿಮಾದ ನಿರ್ಮಾಪಕ ರೆಹಮಾನ್ ‘ಹುಚ್ಚ’ ಸಿನಿಮಾವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾ ಪ್ರೇಮಿಗಳಲ್ಲಿ ಮನವಿಯೊಂದನ್ನು ರೆಹಮಾನ್ ಮಾಡಿದ್ದಾರೆ.

‘ಹುಚ್ಚ’ ಸಿನಿಮಾ ಮತ್ತೆ ಬಿಡುಗಡೆ ಮಾಡುತ್ತಿದ್ದೀವಿ. ಈ ಬಾರಿಯೂ ಮತ್ತೆ ಚೆನ್ನಾಗಿ ಪ್ರದರ್ಶನ ಕಾಣುವಂತೆ ಮಾಡಪ್ಪ ಎಂದು ದೇವರಲ್ಲಿ ಪ್ರಾರ್ಥಿಸುತ್ತೀನಿ. ಜೊತೆಗೆ ನಮ್ಮ ಅಭಿಮಾನಿ ದೇವರುಗಳ ಬಳಿಯೂ ಕೈ ಮುಗಿದು ಕೇಳುತ್ತೀನಿ. ದಯಮಾಡಿ ಇನ್ನೊಂದು ಬಾರಿ ಸಿನಿಮಾ ನೋಡಿ, ಆಗ ಇದ್ದ ಸಿನಿಮಾಕ್ಕೂ ಈಗ ನಾವು ಬಿಡುಗಡೆ ಮಾಡುತ್ತಿರುವ ಸಿನಿಮಾಕ್ಕೂ ಬಹಳ ಬದಲಾವಣೆ ಇದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಿನಿಮಾವನ್ನು ನವೀಕರಣ ಮಾಡಿದ್ದೇವೆ. ಡಿಟಿಎಸ್ ಎಲ್ಲ ಮಾಡಿಸಿದ್ದೇವೆ. ಮುನಿರಾಜು ಎಂಬ ವಿತರಕರು ಸಿನಿಮಾವನ್ನು ತೆಗೆದುಕೊಂಡು ಬಿಡುಗಡೆ ಮಾಡುತ್ತಿದ್ದಾರೆ. ದಯವಿಟ್ಟು ಎಲ್ಲರೂ ಬಂದು ಸಿನಿಮಾ ನೋಡಿ ಪ್ರೋತ್ಸಾಹ ನೀಡಿ’ ಎಂದಿದ್ದಾರೆ.

ಇದನ್ನೂ ಓದಿ:ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್

‘ಹುಚ್ಚ’ ಸಿನಿಮಾ ಮೊದಲ ಬಾರಿಗೆ 2001 ರಲ್ಲಿ ಬಿಡುಗಡೆ ಆಗಿತ್ತು. ಅದಕ್ಕೂ ಮುನ್ನ ಸುದೀಪ್ ‘ಸ್ಪರ್ಷ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ಆ ಸಿನಿಮಾ ಬಗ್ಗೆ, ನಟ ಸುದೀಪ್ ಅಭಿನಯದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತಾದರೂ ಅಣ್ಣಾವ್ರ ಅಪಹರಣದಿಂದಾಗಿ ಚಿತ್ರರಂಗ ಬಂದ್ ಆಗಿ ಸಿನಿಮಾಕ್ಕೆ ಹೊಡೆತ ಬಿತ್ತು. ಅದಕ್ಕೂ ಮುನ್ನ ‘ಪ್ರತ್ಯರ್ಥ’ ಹಾಗೂ ‘ತಾಯವ್ವ’ ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದರಾದರೂ ಪೂರ್ಣ ಪ್ರಮಾಣದ ನಾಯಕನಾಗಿ ಅಲ್ಲ. ಆದರೆ ‘ಹುಚ್ಚ’ ಸಿನಿಮಾ ಸುದೀಪ್​ಗೆ ಮಾಸ್ ಇಮೇಜು ತಂದುಕೊಟ್ಟಿತು. ಚಿತ್ರರಂಗದಲ್ಲಿ ನಂಬಿಕೆಯ ನಾಯಕ ನಟನಾಗಿ ನೆಲೆ ಊರುವಂತೆ ಮಾಡಿತು.

‘ಹುಚ್ಚ’ ಸಿನಿಮಾದ ನಿರ್ಮಾಪಕ ರೆಹಮಾನ್ ಹಾಗೂ ಸುದೀಪ್ ನಡುವೆ ಆ ನಂತರದ ದಿನಗಳಲ್ಲಿ ಭಿನ್ನಾಭಿಪ್ರಾಯ ತಲೆದೂರಿತು. ಕೆಲ ತಿಂಗಳ ಹಿಂದೆ ಸಹ ರೆಹಮಾನ್, ಸುದೀಪ್ ವಿಚಾರವಾಗಿ ಋಣಾತ್ಮಕವಾಗಿ ಮಾತನಾಡಿದ್ದರು. ಹಾಗಿದ್ದರೂ ಸಹ ಸುದೀಪ್ ಈಗ ಹುಚ್ಚ ಸಿನಿಮಾ ಬಿಡುಗಡೆ ಆಗಿ 23 ವರ್ಷ ಆಗಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ವಿಶೇಷವೆಂದರೆ ಸುದೀಪ್​ರ ‘ಹುಚ್ಚ’ ಹಾಗೂ ತೆಲುಗಿನಲ್ಲಿ ಸುದೀಪ್ ನಟಿಸಿದ್ದ ‘ಈಗ’ ಸಿನಿಮಾ ಸಹ ಅದೇ ದಿನ ಅಂದರೆ ಜುಲೈ 6, 2012ಕ್ಕೆ ಬಿಡುಗಡೆ ಆಗಿತ್ತು. ಆ ಸಿನಿಮಾ ಸಹ ಸೂಪರ್-ಡೂಪರ್ ಹಿಟ್ ಆಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!