
ತಮಿಳರನ್ನು ಉಗ್ರಗಾಮಿಗಳಂತೆ ತೋರಿಸಲಾಗಿದೆ ಎಂದು ಆರೋಪಿಸಿ ‘ದಿ ಫ್ಯಾಮಿಲಿ ಮ್ಯಾನ್ 2’ ವಿರುದ್ಧ ಅನೇಕರು ಸಿಡಿದೆದಿದ್ದರು. ಅಲ್ಲದೆ, ಈ ಸೀರಿಸ್ ಮೇಲೆ ನಿರ್ಬಂಧ ಹೇರಬೇಕು ಎಂದು ಕೂಡ ಆಗ್ರಹಿಸಿದ್ದರು. ಇಂದು (ಜೂ.3) ಮಧ್ಯರಾತ್ರಿ ಈ ವೆಬ್ ಸೀರಿಸ್ ಅಮೇಜಾನ್ ಪ್ರೈಮ್ನಲ್ಲಿ ರಿಲೀಸ್ ಆಗುತ್ತಿದೆ. ಇದಕ್ಕೂ ಮೊದಲು ShameOnYouSamantha ಎಂಬುದು ಟ್ರೆಂಡ್ ಆಗಿದೆ.
2019ರಲ್ಲಿ ಬಿಡುಗಡೆ ಆಗಿದ್ದ ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಸ್ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಮನೋಜ್ ಬಾಜಪೇಯ್, ಪ್ರಿಯಾಮಣಿ ಮುಂತಾದವರು ಮುಖ್ಯಭೂಮಿಕೆ ನಿಭಾಯಿಸಿದ್ದರು. ‘ದಿ ಫ್ಯಾಮಿಲಿ ಮ್ಯಾನ್ 2’ಗಾಗಿ ಎಲ್ಲರೂ ಕಾದಿದ್ದರು. ಆದರೆ, ವೆಬ್ಸೀರಿಸ್ ಟ್ರೇಲರ್ ತಮಿಳಿಯನ್ನರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳು ಜನರನ್ನು ಉಗ್ರಗಾಮಿಗಳ ರೀತಿಯಲ್ಲಿ ತೋರಿಸಲಾಗಿದೆ ಎನ್ನುವ ಆರೋಪ ಮಾಡಲಾಗಿದೆ. ಹೀಗಾಗಿ, ಅಮೇಜಾನ್ ಪ್ರೈಮ್ ಟ್ರೇಲರ್ ಎಡಿಟ್ ಮಾಡುವ ಕೆಲಸವನ್ನು ಕೂಡ ಮಾಡಿತ್ತು. ಈ ಮಧ್ಯೆ ಸಮಂತಾಗೆ ಈ ಬಗ್ಗೆ ಎಲ್ಲಿಯೂ ಮಾತನಾಡದಂತೆ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ, ಅವರು ಈ ವಿವಾದದ ಬಗ್ಗೆ ಎಲ್ಲಿಯೂ ಮೌನ ಮುರಿದಿಲ್ಲ.
ಈಗ ಸಮಂತಾ ವಿರುದ್ಧ ಟ್ವಿಟರ್ನಲ್ಲಿ ಸಾಕಷ್ಟು ಜನರು ಸಿಡಿದೆದ್ದಿದಾರೆ. ಹಿಂದಿಯವರು ತಮಿಳರನ್ನು ಉಗ್ರಗಾಮಿಗಳು ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಸಮಂತಾ ಕೂಡ ಬೆಂಬಲ ನೀಡಿದ್ದಾರೆ. ಅವರಿಗೆ ನಾಚಿಕೆ ಆಗಬೇಕು ಎಂದು ಕೆಲವರು ಬರೆದುಕೊಂಡಿದ್ದಾರೆ. ನೀವು ಚೆನ್ನೈ ಅವರಾಗಿ ಈ ರೀತಿ ಮಾಡಿರೋದು ತಪ್ಪು. ಅಭಿಮಾನಿಯಾಗಿ ನಿಜಕ್ಕೂ ನಿರಾಸೆ ಆಗಿದೆ ಎಂದು ಬರೆದುಕೊಂಡಿದ್ದಾರೆ.

‘ದಿ ಫ್ಯಾಮಿಲಿ ಮ್ಯಾನ್ ಸೀಸನ್ 2’ ಜೂನ್ 4ರಂದು ಅಮೇಜಾನ್ ಪ್ರೈಮ್ನಲ್ಲಿ ಪ್ರೀಮಿಯರ್ ಆಗುತ್ತಿದೆ. ಈ ವೆಬ್ ಸೀರಿಸ್ನ ನಿರ್ದೇಶನದ ಜವಾಬ್ದಾರಿಯನ್ನು ರಾಜ್ ಮತ್ತು ಡಿ.ಕೆ. ನಿಭಾಯಿಸಿದ್ದಾರೆ. ಮೊದಲ ಸೀಸನ್ ದೊಡ್ಡಮಟ್ಟದಲ್ಲಿ ಹಿಟ್ ಆದ್ದರಿಂದ ಎರಡನೇ ಸೀಸನ್ ಮೇಲೆ ಹೆಚ್ಚು ನಿರೀಕ್ಷೆ ಇದೆ.
ಇದನ್ನೂಓದಿ:
Amazon Prime: ಅಮೆಜಾನ್ ಪ್ರೈಮ್ನಿಂದ ಭರ್ಜರಿ ಆಫರ್; ಶೇ 50ರಷ್ಟು ರಿಯಾಯಿತಿ ಜತೆ ಸಿಗುತ್ತದೆ ಸಬ್ಸ್ಕ್ರಿಪ್ಷನ್